
ನಟಿ ರಂಜನಿ ರಾಘವನ್ ಅವರು ಬಣ್ಣದ ಲೋಕದ ಕೆಲಸಗಳ ಜತೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಕಥೆ-ಕಾದಂಬರಿಯನ್ನೂ ಬರೆಯುತ್ತಾರೆ ಅವರು. ಈಗ ಅವರು ಕರಡಿಗಳ ಜತೆ ಸಮಯ ಕಳೆದಿದ್ದಾರೆ.

ಕರಡಿ ಕುಣಿತದವರ ಬಳಿ ಇರುವ 63 ಕರಡಿಗಳನ್ನು ರಕ್ಷಿಸಿ ಅವುಗಳನ್ನು ಸಾಕುವ ಕೆಲಸ Wildlife SOS ಅವರಿಂದ ಆಗುತ್ತಿದೆ. ಈ ಕೇಂದ್ರಕ್ಕೆ ರಂಜನಿ ರಾಘವನ್ ಭೇಟಿ ನೀಡಿದ್ದಾರೆ. ಇದು ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾವನದಲ್ಲಿದೆ.

ಈ ಕರಡಿಗಳಿಗೆ ರಂಜನಿ ರಾಘವನ್ ಅವರು ಪೀನಟ್ ಬಟರ್ ಹಾಗೂ ಖರ್ಜೂರ ಕೊಟ್ಟಿದ್ದಾರೆ. ಕರಡಿ ಕುಣಿಸುವವರ ಬಳಿ ಇದ್ದಾಗ ಸರಿಯಾಗಿ ಆಹಾರ ನೀಡದ ಕಾರಣ ಅದರ ಬೆಳವಣಿಗೆ ಕುಂಠಿತವಾಗಿದೆ ಎಂದು ರಂಜನಿ ಹೇಳಿಕೊಂಡಿದ್ದಾರೆ.

‘ಕನ್ನಡತಿ’ ಧಾರಾವಾಹಿಯಲ್ಲಿ ರಂಜನಿ ರಾಘವನ್ ಅವರು ಭುವಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿ ಕೆಲವೇ ದಿನಗಳಲ್ಲಿ ಮುಗಿಯಲಿದೆ..

‘ಕನ್ನಡತಿ’ ಧಾರಾವಾಹಿ ಪೂರ್ಣಗೊಳ್ಳುತ್ತಿರುವ ಬಗ್ಗೆ ಅನೇಕರಿಗೆ ಬೇಸರವಿದೆ. ಧಾರಾವಾಹಿ ಮುಗಿಯುತ್ತಿರುವ ವಿಚಾರವನ್ನು ರಂಜನಿ ಅವರೇ ಖಚಿತಪಡಿಸಿದ್ದರು.
Published On - 2:43 pm, Mon, 23 January 23