Kanniyakumari: ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ ಧ್ಯಾನ , ಇಲ್ಲಿದೆ ಫೋಟೋ

| Updated By: ಅಕ್ಷಯ್​ ಪಲ್ಲಮಜಲು​​

Updated on: May 31, 2024 | 10:53 AM

ಪ್ರಧಾನಿ ಮೋದಿ ಅವರು ಗುರುವಾರ ಕನ್ಯಾಕುಮಾರಿಗೆ ಭೇಟಿ ನೀಡಿ, ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಅದಕ್ಕೂ ಮೊದಲು ಅವರು ಗುರುವಾರ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಅವರ ಕೊನೆಯ ಚುನಾವಣಾ ಪ್ರಚಾರ ನಡೆಸಿದರು. ಇದೀಗ ಮೋದಿ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನಕ್ಕೆ ಮಾಡುತ್ತಿದ್ದಾರೆ. ಆ ಫೋಟೋಗಳು ಇಲ್ಲಿದೆ.

1 / 7
ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡುಗಳ ಕಾಲ ತಮ್ಮ ಧ್ಯಾನದ ಸಮಯವನ್ನು ಕನ್ಯಾಕುಮಾರಿಯಲ್ಲಿ ಕಳೆಯಲಿದ್ದಾರೆ. ನೆನ್ನೆ (ಮೇ30) ಪ್ರಧಾನಿ ಮೋದಿ ಅವರು ಕನ್ಯಾಕುಮಾರಿಗೆ ಬಂದಿದ್ದಾರೆ.

2 / 7
ಸಂಜೆ ತಮಿಳುನಾಡಿನ ವಿವೇಕಾನಂದ ರಾಕ್ ಸ್ಮಾರಕಕ್ಕೆ ಆಗಮಿಸಿ,  ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲಿ ಪ್ರಧಾನಿ ಮೋದಿಯವರು ಧ್ಯಾನ ಮಾಡಿದೆ. ಮೇ 30ರಿಂದ ಜೂನ್​​​ 1ರವರೆಗೆ ಇಲ್ಲಿ ಧ್ಯಾನ ಮಾಡಲಿದ್ದಾರೆ. ಇನ್ನು ಇದಕ್ಕೂ ಮುನ್ನ ಮೋದಿ 7 ಹಂತದ ಚುನಾವಣಾ ರ್ಯಾಲಿಯನ್ನು ನಡೆಸಿದ್ದಾರೆ. ಇದೀಗ ಅಗಾಧ ಶಕ್ತಿಗಾಗಿ, ದೇಶದ ಮುಂದಿನ ಭವಿಷ್ಯಕ್ಕಾಗಿ ಮೋದಿ ಅವರು ಕನ್ಯಾಕುಮಾರಿಗೆ ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.

3 / 7
ಇಂದು ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ಪ್ರಾರ್ಥನೆ ಸಲ್ಲಿಸಿದರು. ಜೂನ್ 1ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಅದಕ್ಕೂ ಮೊದಲು ಅವರು ಗುರುವಾರ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಅವರ ಕೊನೆಯ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇನ್ನು ಮೋದಿ ಧ್ಯಾನಕ್ಕೆ ಸಿದ್ಧವಾಗಿರುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

4 / 7
ಈ ವಿಡಿಯೋದಲ್ಲಿ ಮೋದಿ ಅವರು 'ಧೋತಿ' ಧರಿಸಿ, ಮೈಮೇಲೆ ಕೇಸರಿ ಶಾಲನ್ನು ಹೊದ್ದುಕೊಂಡಿದ್ದಾರೆ. ಶ್ರೀ ಕನ್ಯಾಕುಮಾರಿ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ಭಗವತಿ ಅಮ್ಮನವರಿಗೆ ಪೂಜೆ ಸಲ್ಲಿಸಿದರು. ನಂತರ, ಅವರು ಧ್ಯಾನಕ್ಕಾಗಿ ವಿವೇಕಾನಂದ ರಾಕ್ ಸ್ಮಾರಕಕ್ಕೆ ಹೋಗಿದ್ದಾರೆ. ಇದೀಗ ಅಲ್ಲಿ ಧ್ಯಾನವನ್ನು ಆರಂಭಿಸಿದ್ದಾರೆ.

5 / 7
ಸ್ವಾಮಿ ವಿವೇಕಾನಂದರು ಅದೇ ಬಂಡೆಯ ಮೇಲೆ ಧ್ಯಾನ ಮಾಡಿದ್ದರಿಂದ ಅವರ ಜೀವನದಲ್ಲಿ ಇದು ಮಹತ್ತರವಾದ ಮಹತ್ವವನ್ನು ಹೊಂದಿದೆ. ವಿವೇಕಾನಂದರು ದೇಶ-ವಿದೇಶಗಳನ್ನು ಸುತ್ತಿ, ಕೊನೆಗೆ ಇಲ್ಲಿಗೆ ಬಂದದ್ದು ಮೂರು ದಿನಗಳ ಕಾಲ ಧ್ಯಾನ ಮಾಡಿದರು. ಇನ್ನು ಹಿಂದೂ ಪುರಾಣಗಳ ಪ್ರಕಾರ, ಪಾರ್ವತಿ ದೇವಿಯು ಶಿವನಿಗಾಗಿ ಈ  ಸ್ಥಳದಲ್ಲಿ ಧ್ಯಾನ ಮಾಡುತ್ತಾಳೆ ಎಂದು ಹೇಳಲಾಗಿದೆ. ಕನ್ಯಾಕುಮಾರಿಯು ಭಾರತದ ದಕ್ಷಿಣದ ತುದಿಯಲ್ಲಿದೆ, ಇಲ್ಲಿ ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಗಮಿಸುತ್ತವೆ. ಇದು ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರವನ್ನು ಛೇದಿಸುವ ಬಿಂದುವಾಗಿದೆ.

6 / 7
ಜೂನ್ 4ರಂದು ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡಿರುವುದು ಅಚ್ಚರಿಯನ್ನು ತಂದಿದೆ. 2019 ರಲ್ಲಿ ಕೂಡ ಪಿಎಂ ಮೋದಿ ಅವರು ಕೇದಾರನಾಥಕ್ಕೆ ಇದೇ ರೀತಿಯ ಪ್ರವಾಸವನ್ನು ಮಾಡಿದ್ದರು. ಅಲ್ಲಿ ಗುಹೆಯಲ್ಲಿ ಧ್ಯಾನ ಮಾಡಿದರು.  ಶ್ರೀ ಅರುಳ್ಮಿಗು ರಾಮನಾಥಸ್ವಾಮಿ ದೇವಸ್ಥಾನ, ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಕೋತಂಡರಾಮಸ್ವಾಮಿ ದೇವಸ್ಥಾನ ಮುಂತಾದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.

7 / 7
ಈ ಹಿಂದೆ ಪ್ರಧಾನಿ ಮೋದಿ ಅವರು ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರವನ್ನು ನಡೆಸಿದ್ದರು. ಭಾರತೀಯ ಜನತಾ ಪಕ್ಷ (ಬಿಜೆಪಿ) ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತರಬೇಕು ಎಂಬ ಪ್ರಯತ್ನವನ್ನು ಮಾಡಿದ್ದಾರೆ. ಇದರ ಜತೆಗೆ  ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಪ್ರಧಾನಿಯವರು ತಮಿಳು ಸಂಸ್ಕೃತಿಯನ್ನೂ ಪ್ರಚಾರ ಮಾಡಿದರು.