
ಅದು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೆ ಪ್ರಸಿದ್ಧಿ ಪಡೆದ ಔಷಧಿಯ ಬಿಡು. ಏಷ್ಯಾದಲ್ಲೇ ಅತೀ ಶುದ್ಧಗಾಳಿ ತನ್ನೊಡಲ್ಲಿ ಇಟ್ಕೊಂಡ ಪರ್ವತ. ತನ್ನ ಸೌಂದರ್ಯ ಮೈತುಂಬಿಕೊಂಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಅದರಲ್ಲೂ ಡ್ರೋನ್ ಕ್ಯಾಮರಾ ಕಣ್ಣಲ್ಲಿ ಕಪ್ಪತ್ತಗುಡ್ಡವನ್ನು ನೋಡೋದು ಕಣ್ಣಿಗೆ ಹಬ್ಬ.

ಅರೇರೇ ಎಂಥಾ ಸೌಂದರ್ಯ ನೋಡಿ. ಈ ಮಲೆನಾಡಿನ ಸೌಂದರ್ಯ ಇರೋದು ಬರದ ನಾಡಿನಲ್ಲಿ ಅಂದರೆ ನಬ್ತೀರಾ. ಹೌದು ನಂಬಲೇ ಬೇಕು. ಇದು ನಿಜವಾಗಿಯೂ ಕಪ್ಪತಗುಡ್ಡವೇ. ಉತ್ತರ ಕರ್ನಾಟಕದ ಸಹ್ಯಾದ್ರಿಯೆಂದೇ ಹೆಸರಾಗಿರುವ ಈ ಕಪ್ಪತಗುಡ್ಡವೀಗ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಬೆಳ್ಳಂಬೆಳಗ್ಗೆಯೇ ಕಪ್ಪತಗುಡ್ಡಕ್ಕೆ ಮುತ್ತಿಡೋ ಮೋಡಗಳು, ಹೊಗೆಯಂತಿರೋ ಮೋಡಗಳ ನಡುನಡುವೆ ಇಣುಕಿ ನೋಡೋ ಹಸಿರ ಗುಡ್ಡ. ಇದನ್ನು ನೋಡ್ತಿದ್ರೆ ಎಲ್ರಿಗೂ ಸಹ ಇದು ಕಪ್ಪತಗುಡ್ಡಾನ ಅಂತ ಅನುಮಾನ ಬರೋದು ಸಹಜ. ಆದರೆ ಇದೇ ವಾಸ್ತವ.

ಗದಗ ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕುಗಳ ಸುಮಾರು 33 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮೈಚಾಚಿಕೊಂಡಿರುವ ಕಪ್ಪತುಡ್ಡದ ಸೌಂದರ್ಯ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಅದ್ರಲ್ಲೂ ಡ್ರೋನ್ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಈ ಸೌಂದರ್ಯವನ್ನು ನೋಡೋದು ಕಣ್ಣಿಗೆ ಹಬ್ಬ.

ಕಪ್ಪತ್ತಗುಡ್ಡ ಪ್ರದೇಶದಲ್ಲಿ ಬೀಸುವ ಗಾಳಿ ದೇಶದಲ್ಲೇ ಶುದ್ಧ ಗಾಳಿ ಅಂತ ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಹೀಗಾಗಿ ಕಪ್ಪತ್ತಗುಡ್ಡ ಸೌಂದರ್ಯ ಸವಿಯಲು ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಅಂದ ಹಾಗೇ ಗದಗ ಅರಣ್ಯ ಇಲಾಖೆ ಡ್ರೋನ್ ಕ್ಯಾಮೆರಾದಲ್ಲಿ ಕಪ್ಪತ್ತಗುಡ್ಡದ ಸೌಂದರ್ಯವನ್ನು ಸೆರೆ ಹಿಡದಿದ್ದಾರೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಭೂ ತಾಯಿಯ ರಮಣೀಯ ದೃಶ್ಯವನ್ನು ನೋಡೋದು ಕಣ್ಣಿಗೆ ಹಬ್ಬವೇ ಸರಿ. ನಮ್ಮ ರಾಜ್ಯ ಮಾತ್ರವಲ್ಲ ಪಕ್ಕದ ಮಹಾರಾಷ್ಟ್ರ, ಗೋವಾದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿಗರಿಗೆ ಅರಣ್ಯ ಇಲಾಖೆ ಸಾಕಷ್ಟು ಸೌಲಭ್ಯ ಒದಗಿಸಿದೆ.