ಪ್ರತಿ ರಾತ್ರಿ ಅಳುತ್ತಿದ್ದೆ, ತಿಂಗಳುಗಳ ಕಾಲ ನಿದ್ದೆ ಇರಲಿಲ್ಲ: ಕೆಟ್ಟ ದಿನ ನೆನೆದ ಕರೀನಾ
Kareena Kapoor: ಕಪೂರ್ ಕುಟುಂಬದ ಕುಡಿ ಕರೀನಾ ಕಪೂರ್ಗೆ ಸುಲಭವಾಗಿ ಚಿತ್ರರಂಗಕ್ಕೆ ಎಂಟ್ರಿ ದೊರಕಿತು, ದೊಡ್ಡ ಸಿನಿಮಾಗಳು ಸುಲಭವಾಗಿ ದೊರೆತವು. ಆದರೆ ಕರೀನಾರ ಚಿತ್ರರಂಗದ ಪಯಣ ಹೂವ ಹಾಸಿಗೆ ಆಗಿರಲಿಲ್ಲ. ಕರೀನಾ ತಮ್ಮ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.
1 / 7
ಬಾಲಿವುಡ್ ನಟಿ ಕರೀನಾ ಕಪೂರ್ ಎರಡು ದಶಕಕ್ಕೂ ಹೆಚ್ಚು ಸಮಯದಲ್ಲಿ ಬಾಲಿವುಡ್ನಲ್ಲಿದ್ದಾರೆ. ಈಗಲೂ ಸಹ ಬೇಡಿಕೆ ಉಳಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ.
2 / 7
ಬಾಲಿವುಡ್ನ ಎಲ್ಲ ಸೂಪರ್ ಸ್ಟಾರ್ಗಳೊಟ್ಟಿಗೆ ನಟಿಸಿರುವ ಕರೀನಾ ಕಪೂರ್, ಭಾರಿ ದೊಡ್ಡ ದೊಡ್ಡ ಸೂಪರ್ ಹಿಟ್ ಸಿನಿಮಾಗಳನ್ನು ಖಾತೆಗೆ ಹಾಕಿಕೊಂಡಿದ್ದಾರೆ.
3 / 7
ಭಾರಿ ದೊಡ್ಡ ಕುಟುಂಬದಿಂದ ಬಂದ, ಸಿನಿಮಾ ಹಿನ್ನೆಲೆಯುಳ್ಳ ಕರೀನಾಗೆ ಚಿತ್ರರಂಗದ ಎಂಟ್ರಿ ಹೂವ ಹಾಸಿಗೆಯಾಗಿತ್ತು. ಒಂದರ ಮೇಲೊಂದು ಅವಕಾಶಗಳು ದೊರೆತವು. ಹಾಗಿದ್ದರೂ ಸಹ ಕರೀನಾ ಕಷ್ಟದ ದಿನಗಳನ್ನು ಕಂಡಿದ್ದಾರಂತೆ.
4 / 7
ಸಂದರ್ಶನದಲ್ಲಿ ಕರೀನಾ ಹೇಳಿಕೊಂಡಿರುವಂತೆ ‘ಜಬ್ ವಿ ಮೆಟ್’ ಸಿನಿಮಾಕ್ಕೆ ಮುನ್ನ ನನ್ನ ಹಲವು ಸಿನಿಮಾಗಳು ಫ್ಲಾಪ್ ಆಗಿದ್ದವು. ನನಗೇ ನನ್ನ ಮೇಲೆ ಅನುಮಾನ ಬಂದಿತ್ತು ಎಂದಿದ್ದಾರೆ.
5 / 7
ಪ್ರತಿ ದಿನ ರಾತ್ರಿ ನಾನು ಅಳುತ್ತಿದ್ದೆ, ತಿಂಗಳುಗಳ ಕಾಲ ನಿದ್ದೆಯೇ ಸರಿಯಾಗಿ ಮಾಡಿರಲಿಲ್ಲ. ಕೊನೆಗೆ ನಾನು ಸಿನಿಮಾಗಳಿಂದ ಬಿಡುವು ಪಡೆದು ಆಯ್ಕೆಯನ್ನು ಬದಲಾಯಿಸಿಕೊಳ್ಳಲು ನಿಶ್ಚಯಿಸಿದೆ ಎಂದಿದ್ದಾರೆ ಕರೀನಾ.
6 / 7
ಅದು ನನಗೆ ಸಹಾಯ ಮಾಡಿತು. ಅದಾದ ಬಳಿಕ ನಾನು ‘ಜಬ್ ವಿ ಮೆಟ್’ ಮಾಡಿದೆ ಅಲ್ಲಿಂದ ಮತ್ತೆ ವೃತ್ತಿಯ ಗ್ರಾಫು ಮೇಲೇರಲು ಪ್ರಾರಂಭವಾಯ್ತು ಎಂದು ನೆನಪು ಮಾಡಿಕೊಂಡಿದ್ದಾರೆ ಕರೀನಾ ಕಪೂರ್.
7 / 7
ಕರೀನಾ ಕಪೂರ್ ಪ್ರಸ್ತುತ ‘ಕ್ರೀವ್’, ‘ಸಿಂಘಂ ಅಗೇನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿಯೂ ಕರೀನಾ ನಟಿಸುತ್ತಾರೆ ಎನ್ನಲಾಗುತ್ತಿದೆ.