ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಮೂರು ಜಿಲ್ಲೆಗಳ ಗಾಳಿ ಗುಣಮಟ್ಟ ಭಾರೀ ಕುಸಿತ: ಪ್ರವಾಸಿಗರೇ ಎಚ್ಚರ
ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಬದಲಾವಣೆ ಕಂಡುಬಂದಿದೆ. ಬೆಂಗಳೂರಿನ AQI 85ಕ್ಕೆ ತಲುಪಿ ಉತ್ತಮ ಸ್ಥಿತಿಯಲ್ಲಿದೆ, ಇಲ್ಲಿನ ಜನರಿಗೆ ನಿರಾಳತೆ ನೀಡಿದೆ. ಆದರೆ, ಬೆಳಗಾವಿ, ಕಲಬುರ್ಗಿ, ಬಳ್ಳಾರಿ ಮತ್ತು ವಿಜಯಪುರದಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದ್ದು, ಅಪಾಯ ಮಟ್ಟದಲ್ಲಿದೆ. ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಉಡುಪಿಯಲ್ಲಿ ಸಾಮಾನ್ಯ ಅಥವಾ ಉತ್ತಮ ಮಟ್ಟ ಕಾಯ್ದುಕೊಂಡಿದೆ. ನಾಗರಿಕರು ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗಿದೆ.
Updated on: Dec 17, 2025 | 10:54 AM

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆಯನ್ನು ಕಂಡಿದೆ. ಬೆಂಗಳೂರಿನಲ್ಲಿ ಇಂದು ಗಾಳಿ ಗುಣಮಟ್ಟ ತುಂಬಾ ಉತ್ತಮವಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಗಾಳಿ ಗುಣಮಟ್ಟ ತುಂಬಾ ಕಳಪೆಯಾಗಿತ್ತು. ಆದರೆ ಇಂದು 85ಕ್ಕೆ ತಲುಪಿದೆ. ಇದರಿಂದ ನಗರದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಹೀಗಾಗಿ ಬೆಂಗಳೂರು ಸಾಮಾನ್ಯವಾದ ಗಾಳಿ ಮಟ್ಟಕ್ಕೆ ತಲುಪಿದೆ. ವಾಹನ ದಟ್ಟಣೆ ಇದ್ದರು ಕೂಡ ಗಾಳಿಯ ಗುಣಮಟ್ಟ ಉತ್ತಮವಾಗಿದೆ.

ಕರಾವಳಿ ಭಾಗವಾದ ಮಂಗಳೂರಿನಲ್ಲೂ ಕೂಡ ಗಾಳಿಯ ಗುಣಮಟ್ಟ 94ಕ್ಕೆ ಬಂದಿದೆ. ಆದರೆ ಕಳೆದ ವಾರಕ್ಕಿಂತ ಸ್ವಲ್ಪ ಅಂದರೆ ಶೇಕಾಡ 2ರಷ್ಟು ಹೆಚ್ಚಾಗಿದೆ. ಯಾವುದೇ ಗಮನಾರ್ಹವಾದ ಇಳಿಕೆಯನ್ನು ಕಂಡಿಲ್ಲ. ಇನ್ನು ಇದು ಕರಾವಳಿ ಪ್ರದೇಶವಾದ ಕಾರಣ ಇಲ್ಲಿ ಅಷ್ಟೊಂದು ಧೂಳು, ವಾಹನ ದಟ್ಟಣೆ ಇರುವುದಿಲ್ಲ.

ಮೈಸೂರಿನಲ್ಲಿ ಈ ಹಿಂದೆಯೂ ಕೂಡ ಗಾಳಿ ಗುಣಮಟ್ಟ ಉತ್ತಮವಾಗಿತ್ತು. ಇಂದು ಗಾಳಿಯ ಮಟ್ಟ 75 ಇದೆ. ಇದು ಸೂಚ್ಯಂಕದ ಪ್ರಕಾರ ಉತ್ತಮ. ಇನ್ನು ಈ ಪ್ರದೇಶ ಹಚ್ಚಹಸಿರಿನಿಂದ ಕೂಡಿದ್ದು, ಇಲ್ಲಿ ಅಷ್ಟೊಂದು ಗಾಳಿಯ ಗುಣಮಟ್ಟದಲ್ಲಿ ಬದಲಾವಣೆ ಆಗುವುದಿಲ್ಲ. ಹಾಗೂ ಇಲ್ಲಿ ದೊಡ್ಡ ಸಿಟಿಗಳು ಇಲ್ಲದ ಕಾರಣ ಗಾಳಿಯ ಮಟ್ಟ ಸಾಮಾನ್ಯವಾಗಿದೆ.

ಬೆಳಗಾವಿಯಲ್ಲಿ ಗಾಳಿ ಗುಣಮಟ್ಟ 108ಕ್ಕೆ ಇಳಿದಿದೆ. ಇದು ಕೂಡ ಅಪಾಯ ಮಟ್ಟಕ್ಕೆ ತಲುಪುವ ಮುನ್ಸೂಚನೆ. ಇಲ್ಲಿ ಧೂಳು, ಹಾಗೂ ವಾಹನ ದಟ್ಟಣೆಯಿಂದ ಈ ಸ್ಥಿತಿ ಬಂದಿದೆ. ಬೆಳಗಾವಿಯಲ್ಲಿ ಈ ಹಿಂದೆ ಕೂಡ ಗಾಳಿ ಗುಣಮಟ್ಟ ಕಳಪೆಯಾಗಿತ್ತು. ಹಾಗಾಗಿ ಇಲ್ಲಿ ಕೂಡ ಜನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ತಜ್ಞರು ಹೇಳಿದ್ದಾರೆ.

ಕಲಬುರ್ಗಿ ಕೂಡ ಇಂದು 105ಕ್ಕೆ ಗಾಳಿ ಮಟ್ಟಕ್ಕೆ ಇಳಿದಿದೆ. ಇದು ಕೂಡ ಅಪಾಯ ಮಟ್ಟ ಎಂದು ಹೇಳಲಾಗಿದೆ. ಇಲ್ಲಿ ಗಾಳಿಮಟ್ಟ ಇದೆ ಮೊದಲ ಬಾರಿ ಇಷ್ಟೊಂದು ಕಳಪೆ ತೋರಿಸುತ್ತಿದೆ. ಇಲ್ಲಿಯ ಜನ ಕೂಡ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಗಾಳಿಯ ಗುಣಮಟ್ಟ 75ಕ್ಕೆ ಬಂದಿದೆ. ಇದು ಕೂಡ ಉತ್ತಮ ಎಂದು ತೋರಿಸುತ್ತದೆ. ಗಾಳಿಯ ಗುಣಮಟ್ಟದ ಸೂಚ್ಯಂಕದ ಪ್ರಕಾರ ಇಂದು ಜಿಲ್ಲೆಯ ಗಾಳಿ ಗುಣಮಟ್ಟ ಈ ಸಂಖ್ಯೆಯಲ್ಲಿ ಇರಬೇಕು. ಹಾಗೂ ಇದು ಮಲೆನಾಡು ಪ್ರದೇಶ ಆಗಿರುವ ಕಾರಣ ಇಲ್ಲಿ ಹೆಚ್ಚು ಧೂಳು, ವಾಹನ ದಟ್ಟಣೆ ಇರುವುದಿಲ್ಲ.

ಬಳ್ಳಾರಿ ಮಾತ್ರ ಬೆಂಗಳೂರಿನಂತೆ ತುಂಬಾ ಕಳಪೆಯ ಗಾಳಿಯ ಮಟ್ಟಕ್ಕೆ ತಲುಪುತ್ತಿದೆ. ಬೆಂಗಳೂರಿನಲ್ಲಿ ಈ ಹಿಂದೆ ಈ ಮಟ್ಟವನ್ನು ಹೊಂದಿತ್ತು. ಆದರೆ ಎರಡು ದಿನಗಳಿಂದ ಬಳ್ಳಾರಿಯಲ್ಲಿ ಗಾಳಿಮಟ್ಟ ತುಂಬಾ ಕಳಪೆಯಾಗುತ್ತಿದೆ. ಇದರಿಂದ ಅಲ್ಲಿನ ಜನ ತುಂಬಾ ಎಚ್ಚರಿಕೆಯಿಂದ ಇರಬೇಕು. ಇನ್ನು ಈ ಪ್ರದೇಶದಲ್ಲಿ ಪ್ರವಾಸಿ ತಾಣಗಳಿದ್ದು, ಪ್ರವಾಸಿಗರು ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

ಹುಬ್ಬಳ್ಳಿಯಲ್ಲಿ ಇಂದು ಗಾಳಿಯ ಗುಣಮಟ್ಟ 85ಕ್ಕೆ ಬಂದಿದೆ. ಇದರಿಂದ ಯಾವುದೇ ಅಪಾಯ ಇಲ್ಲ. ಇದು ಸಾಮಾನ್ಯವಾಗಿ ಅಲ್ಲಿರುವ ಗಾಳಿಯ ಮಟ್ಟವಾಗಿದೆ. ಈ ಜಿಲ್ಲೆ ದೊಡ್ಡದಾಗಿದ್ದರು. ಅಲ್ಲಿ ಅಷ್ಟೊಂದು ವಾಹನ ದಟ್ಟಣೆ ಇಲ್ಲ.

ಉಡುಪಿಯಲ್ಲಿ ಸಾಮಾನ್ಯ ಗಾಳಿಯ ಮಟ್ಟ ಇದೆ. ಸೂಚ್ಯಂಕದ ಪ್ರಕಾರ ಇಂದಿನ ಗಾಳಿಯ ಮಟ್ಟ 82ಕ್ಕೆ ಬಂದಿದೆ. ಇದು ಕೂಡ ಕರಾವಳಿ ಪ್ರದೇಶವಾಗಿರುವುದರಿಂದ ಇಲ್ಲಿ ಕೂಡ ಅಷ್ಟೊಂದು ಮಾಲಿನ್ಯಕಾರಕ ಪರಿಸರ ಇಲ್ಲ ಎಂದು ಹೇಳಲಾಗಿದೆ.

ವಿಜಯಪುರದಲ್ಲಿ ಇಂದಿನ ಗಾಳಿಯ ಮಟ್ಟ 132ಕ್ಕೆ ಇಳಿದಿದೆ. ಇದು ಕೂಡ ಅಪಾಯ ಸ್ಥಿತಿ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಇಲ್ಲ ಉತ್ತಮ ಗಾಳಿ ಮಟ್ಟ ಇರುತ್ತದೆ. ಆದರೆ ಎರಡು ದಿನಗಳಿಂದ ಈ ಭಾಗದಲ್ಲೂ ಗಾಳಿಯ ಗುಣಮಟ್ಟ ಕುಸಿಯುತ್ತಿದೆ.




