ನಾಮಪತ್ರ ಸಲ್ಲಿಸಿದ ಕೋಟಿ ವೀರರು: ಹುಬ್ಬೇರಿಸುತ್ತಿದೆ ಅಭ್ಯರ್ಥಿಗಳ ಆಸ್ತಿ ಲೆಕ್ಕ, 10 ಸಾವಿರ ನಾಣ್ಯ ತಂದಿಟ್ಟ ಎಎಪಿ ಅಭ್ಯರ್ಥಿ

|

Updated on: Apr 18, 2023 | 9:08 AM

ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿರುವ ಘಟಾನುಘಟಿಗಳು ಆಸ್ತಿ ಘೋಷಣೆಯನ್ನು ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಕುಬೇರರು ಎನ್ನುವುದು ಅವರೇ ಘೋಷಣೆ ಮಾಡಿಕೊಂಡಿರುವ ಆಸ್ತಿ ವಿವರದಲ್ಲಿ ಬಯಲಾಗಿದೆ. ಹಾಗಾದ್ರೆ, ಯಾವ್ಯಾವ ನಾಯಕರು ಎಷ್ಟು ಆಸ್ತಿ ಘೋಷಣೆ ಮಾಡಿದ್ದಾರೆ. ಕೋಟ್ಯಧಿಪತಿಗಳು ಅವಿಡವಿಟ್‌ನಲ್ಲಿ ಸಲ್ಲಿಸಿರುವ ಮಾಹಿತಿ ಏನು ಇಲ್ಲಿದೆ ನೋಡಿ.

1 / 11
ಚಿಕ್ಕಪೇಟೆ ಅಖಾಡದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉದಯ್ ಗರುಡಾಚಾರ್ ಬಳಿ ಚರಾಸ್ತಿ 123 ಕೋಟಿ 19 ಲಕ್ಷ ರೂಪಾಯಿ ಇದ್ದು, ಸ್ಥಿರಾಸ್ತಿ 77 ಕೋಟಿ 25 ಸಾವಿರ ರೂಪಾಯಿ ಇದೆ. 47 ಕೋಟಿ, 63 ಲಕ್ಷ ಸಾಲ ಇರೋದಾಗಿ ಘೋಷಿಸಿರೋ ಉದಯ್ ಗರುಡಾಚಾರ್ ಆಸ್ತಿ ಮೌಲ್ಯ ಒಟ್ಟು 200 ಕೋಟಿ 44 ಲಕ್ಷ ರೂಪಾಯಿನಷ್ಟಿದೆ.

2 / 11
ಕಲಘಟಗಿಯಿಂದ ಕಾಂಗ್ರಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಸಂತೋಷ್ ಲಾಡ್ ಬಳಿ ಚರಾಸ್ತಿ 121 ಕೋಟಿ 63 ಕೋಟಿ ರೂಪಾಯಿ, ಸ್ಥಿರಾಸ್ತಿ 8ಕೋಟಿ27ಲಕ್ಷ ಇರೋದಾಗಿ ಘೋಷಿಸಿದ್ದಾರೆ. ಹಾಗೆಯೇ 2 ಲಕ್ಷ 67ಸಾವಿರದ ಒಮಿನಿ ಕಾರು, ಪತ್ನಿ ಕೀರ್ತಿ ಹೆಸರಲ್ಲಿ ಸ್ಥಿರಾಸ್ತಿ 21ಕೋಟಿ 06ಲಕ್ಷ, ಚರಾಸ್ತಿ 5 ಕೋಟಿ 84 ಲಕ್ಷ ರೂಪಾಯಿ ಇದೆ. ಪುತ್ರನ ಹೆಸರ್ಲಿ ಚರಾಸ್ತಿ 2ಕೋಟಿ 76ಲಕ್ಷವಿದ್ದು, ಲಾಡ್ ಹೆಸರಲ್ಲಿ 17ಕೋಟಿ 31ಲಕ್ಷ ಸಾಲ, ಪತ್ನಿ ಹೆಸರಲ್ಲಿ 2ಕೋಟಿ 60 ಲಕ್ಷ, ಮಗನ ಹೆಸರಲ್ಲಿ 2ಕೋಟಿ 50 ಲಕ್ಷ ಸಾಲ ಇರೋದಾಗಿ ತಿಳಿಸಿದ್ದಾರೆ.

3 / 11
ರಾಮನಗರದಿಂದ ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ, ಲ್ಯಾಂಬೊರ್ಗಿನಿ ಕಾರು ಸೇರಿ ಐದು ಕಾರುಗಳ ಒಡೆಯರಾಗಿದ್ದಾರೆ. ಒಟ್ಟು 77 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿರೋ ನಿಖಿಲ್ ಬಳಿ ಚರಾಸ್ತಿ 46 ಕೋಟಿ 81 ಲಕ್ಷ, 28 ಕೋಟಿ ಸ್ಥಿರಾಸ್ತಿ ಇದೆ. ಹಾಗೆಯೇ ಪತ್ನಿ ರೇವತಿ ಬಳಿ ಚರಾಸ್ತಿ 1ಕೋಟಿ 79 ಲಕ್ಷ, 28 ಲಕ್ಷ ಸ್ಥಿರಾಸ್ತಿ ಇರೋದಾಗಿ ಉಲ್ಲೇಖಿಸಿದ್ದಾರೆ. ಒಟ್ಟು 38ಕೋಟಿ 94 ಲಕ್ಷ ರೂಪಾಯಿ ಸಾಲ ತೋರಿಸಿರೋ ನಿಖಿಲ್, 2019 ಲೋಕಸಭೆ ಚುನಾವಣೆವೇಳೆ ನಿಖಿಲ್ ಆಸ್ತಿ 74 ಕೋಟಿ ರೂಪಾಯಿ ಇತ್ತು.

4 / 11
ಬರೋಬ್ಬರಿ 27ಕೋಟಿ 88 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ  ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ ಸೋಮಶೇಖರ್ ಘೋಷಿಸಿದ್ದಾರೆ. 5ಕೋಟಿ 46ಲಕ್ಷ ಚರಾಸ್ತಿ, 8ಕೋಟಿ 91ಲಕ್ಷ ಸ್ಥಿರಾಸ್ತಿ ಇರೋದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ ಪತ್ನಿ ರಾಧಾ ಹೆಸರಲ್ಲಿ ಚರಾಸ್ತಿ 48 ಲಕ್ಷದ 18 ಸಾವಿರ, 8 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಅಲ್ಲದೇ ಪುತ್ರ ನಿಶಾಂತ್ ಹೆಸರಲ್ಲಿ ಚರಾಸ್ತಿ 48 ಲಕ್ಷದ 18 ಸಾವಿರ ರೂಪಾಯಿ ಚರಾಸ್ತಿ, 3 ಕೋಟಿ 75 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 1ಕೋಟಿ 22 ಲಕ್ಷ ಸಾಲವಿದ್ದು, ಕುಟುಂಬದದ ವಿವಿಧ ಸದಸ್ಯರಿಗೆ 2ಕೋಟಿ 46 ಲಕ್ಷ ಸಾಲ ನೀಡಿರುವುದಾಗಿ ಘೋಷಿಸಿದ್ದಾರೆ. 2019ರ ಬೈ ಎಲೆಕ್ಷನ್‌ ವೇಳೆ 18 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇರೋದಾಗಿ ಘೋಷಿಸಿಕೊಂಡಿದ್ದರು.

5 / 11
ವಿ ಸೋಮಣ್ಣ

ವಿ ಸೋಮಣ್ಣ

6 / 11
ಪದ್ಮನಾಭನಗರದಿಂದ ನಾಮಿನೇಷನ್ ಫೈಲ್ ಮಾಡಿರುವ ಸಚಿವ ಆರ್‌.ಅಶೋಕ್, ತಮ್ಮ ಬಳಿ ಒಟ್ಟು 5ಕೋಟಿ 28 ಲಕ್ಷ ರೂ. ಆಸ್ತಿ ಮೌಲ್ಯ ಹೊಂದಿರುವುದಾಗಿ ಘೋಷಿಸಿದ್ದಾರೆ. ಚರಾಸ್ತಿ 2ಕೋಟಿ 18ಲಕ್ಷ, ಸ್ಥಿರಾಸ್ತಿ 3ಕೋಟಿ 10 ಲಕ್ಷ, ಒಟ್ಟು ಸಾಲ 97 ಲಕ್ಷದ 78 ಸಾವಿರ ಸಾಲವಿದ್ದು, ಇದರಲ್ಲಿ ಪತ್ನಿಯಿಂದ 42 ಲಕ್ಷದ 10 ಸಾವಿರ ರೂಪಾಯಿ ಪಡೆದಿದ್ದಾಗಿ ತಿಳಿಸಿದ್ದಾರೆ. 21ಲಕ್ಷ 60 ಸಾವಿರ ಮೌಲ್ಯದ ಚಿನ್ನ, 18 ಲಕ್ಷ 80 ಸಾವಿರದ ಬೆಳ್ಳಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ.

7 / 11
ದಾವಣಗೆರೆ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಮ್ಮ ಪತ್ನಿಯೊಂದಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಅವರು ಬರೋಬ್ಬರಿ 152 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ 81.93 ಕೋಟಿ ರೂ. ಚರಾಸ್ತಿ, 70.78 ಕೋಟಿ ರೂ. ಸ್ಥಿರಾಸ್ತಿ ಸೇರಿದ್ದು, 23. 60 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. 15.35 ಕೋಟಿ ರೂ. ಮೌಲ್ಯದ ವಜ್ರ, ಚಿನ್ನ, ಬೆಳ್ಳಿಯ ಆಭರಣಗಳೂ ತಮ್ಮ ಬಳಿ ಇರುವುದಾಗಿ ತಿಳಿಸಿರುವ ಮಲ್ಲಿಕಾರ್ಜುನ್‌, ಇದರಲ್ಲಿ 16.54 ಕೆ.ಜಿ ಚಿನ್ನ, 6.28 ಕ್ವಿಂಟಾಲ್‌ ಬೆಳ್ಳಿ ಹಾಗೂ ವಜ್ರ ಸೇರಿ ಇತರ ಬೆಲೆಬಾಳುವ ವಸ್ತುಗಳು ಇವೆ ಎಂದು ಹೇಳಿದ್ದಾರೆ. ಪತ್ನಿ ಬಳಿ 1 ಕೋಟಿ ರೂ. ಮೌಲ್ಯದ ಆಭರಣಗಳಿದ್ದು ಇದರಲ್ಲಿ 3.19 ಕೆಜಿ ಚಿನ್ನ ಇರುವುದಾಗಿ ಮಾಹಿತಿ ನೀಡಿದ್ದಾರೆ.

8 / 11
ದಾವಣಗೆರೆ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ 292.84 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಈ ಮೂಲಕ ಮಗನಿಗಿಂತ ದುಪ್ಪಟ್ಟು ಹೆಚ್ಚಿನ ಮೊತ್ತದ ಆಸ್ತಿ ಇರುವುದಾಗಿ 91 ವರ್ಷದ ಶಾಮನೂರು ಪ್ರಮಾಣಪತ್ರ ಸಲ್ಲಿಸಿದ್ದಾರೆ.  ತಮ್ಮ ಕೈಯಲ್ಲಿ 8 ಲಕ್ಷ ರೂ. ನಗದು ಇದೆ. ತಮ್ಮ ಬ್ಯಾಂಕ್‌ ಖಾತೆಯಲ್ಲಿ ಬರೋಬ್ಬರಿ 63.96 ಕೋಟಿ ರೂ. ನಗದು ಠೇವಣಿ ಇರುವುದಾಗಿ ಹೇಳಿದ್ದಾರೆ. 73 ಲಕ್ಷ ರೂ. ಮೌಲ್ಯದ ವಾಹನಗಳೂ ತಮ್ಮ ಬಳಿ ಇದ್ದು, 2.24 ಕೋಟಿ ರೂ. ಮೊತ್ತದ ಚಿನ್ನಾಭರಣಗಳನ್ನು ಹೊಂದಿದ್ದೇನೆ. ಹೀಗೆ ಒಟ್ಟು 257.83 ಕೋಟಿ ರೂ. ಚರಾಸ್ತಿ ಇರುವುದಾಗಿ ಶಾಮನೂರು ಶಿವಶಂಕರಪ್ಪ ಘೋಷಿಸಿಕೊಂಡಿದ್ದಾರೆ.

9 / 11
ರಾಜಾಜಿನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಿನೇಷನ್ ಫೈಲ್ ಮಾಡಿರು ಪುಟ್ಟಣ್ಣ ಸುಮಾರು 49 ಕೋಟಿ 65 ಲಕ್ಷ ರೂಪಾಯಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಚರಾಸ್ತಿ 14 ಕೋಟಿ 65 ಲಕ್ಷ, ಸ್ಥಿರಾಸ್ತಿ ಸುಮಾರು 35 ಕೋಟಿ ಇದೆ. 29 ಲಕ್ಷ ಮೌಲ್ಯದ 550 ಗ್ರಾಂ ಗೋಲ್ಡ್, 30 ಲಕ್ಷ ಮೌಲ್ಯದ 294 ಗ್ರಾಂ ಡೈಮೆಂಡ್, 2 ಲಕ್ಷಕ್ಕೂ ಹೆಚ್ಚು ಮೌಲ್ಯದ ನಾಲ್ಕು ಕೆಜಿ ಬೆಳ್ಳಿ ಇದೆ, ತಮ್ಮ ಬಳಿ 88 ಸಾವಿರದ 967 ರೂಪಾಯಿ ನಗದು ಇರೋದಾಗಿ ಉಲ್ಲೇಖಿಸಿದ್ದಾರೆ. ಹಾಗೆಯೇ ವಾರ್ಷಿಕ ಆದಾಯ 35 ಲಕ್ಷದಿಂದ 46ಕ್ಕೆ ಏರಿಕೆಯಾಗಿದ್ದು, ವಿವಿಧ ಬ್ಯಾಂಕ್ ಷೇರುಗಳಲ್ಲಿ 2 ಕೋಟಿ 85 ಲಕ್ಷ ಹೊಡಿಕೆ, 9 ಕೋಟಿಯಷ್ಟು ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ.

10 / 11
ಬಿವೈ ವಿಜಯೇಂದ್ರ ಮತ್ತು ಅವರ ಪತ್ನಿ ಪ್ರೇಮಾ ವಿಜಯೇಂದ್ರ  ಒಟ್ಟು 126.18 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ, ದಂಪತಿಗೆ ಒಂದೇ ಒಂದು ಸ್ವಂತ ಕಾರು ಇಲ್ಲ. ವಿಜಯೇಂದ್ರ ಅವರು 46.82 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರ ಪತ್ನಿ 7.85 ಕೋಟಿ ಮೌಲ್ಯದ ಚರಾಸ್ತಿಯ ಒಡತಿಯಾಗಿದ್ದಾರೆ. ಇನ್ನು ಈ ದಂಪತಿ ಬಳಿ ಪ್ರಸ್ತುತ 70.11 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ನಾಮಪತ್ರದ ಅಫಿಡವಿಟ್​ನಲ್ಲಿ ತಿಳಿಸಲಾಗಿದೆ. ವಿಜಯೇಂದ್ರ ಒಟ್ಟು 1.75 ಲಕ್ಷ ರೂ. ಮೌಲ್ಯದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಹೊಂದಿದ್ದಾರೆ. ದಂಪತಿ ಬಳಿ ಒಟ್ಟು 2.29 ಕೋಟಿ ರೂ. ಮೌಲ್ಯದ ಚಿನ್ನ, ವಜ್ರ, ಬೆಳ್ಳಿ ವಸ್ತುಗಳು ಇವೆ. ವಿಜಯೇಂದ್ರ ಅವರ ಬಳಿ 1.34 ಕೆಜಿ ಚಿನ್ನ ಇದ್ದರೆ, ಅವರ ಪತ್ನಿ 1.25 ಕೆಜಿ ಚಿನ್ನಾಭರಣಗಳನ್ನು ಹೊಂದಿದ್ದಾರೆ.

11 / 11
ಒಂದ್ಕಡೆ ದಂಡಿ ದಂಡಿಯಾಗಿ ಕುಬೇರರೆಲ್ಲಾ ಅಷ್ಟು ಕೋಟಿ, ಇಷ್ಟು ಕೋಟಿ ಎಂದು ವಿವರ ಸಲ್ಲಿಸಿದ್ರೆ. ಹಾವೇರಿಯಲ್ಲಿ ವಿಚಿತ್ರ ಘಟನೆ ನಡೆದಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ್ ತಾವು ಕೂಡಿಟ್ಟ 10  ಸಾವಿರ ರೂಪಾಯಿಯಷ್ಟು ನಾಣ್ಯಗಳನ್ನ ತಂದು ಠೇವಣಿ ಕೊಟ್ಟಿದ್ದಾರೆ. ಆದ್ರೆ, 10 ಸಾವಿರ ನಾಣ್ಯ ಎಣಿಸುವಷ್ಟರಲ್ಲಿ ಸುಸ್ತಾಗಿ ಹೋಗಿದ್ದಾರೆ.