ಬೆಂಗಳೂರಲ್ಲಿ ಒಟ್ಟಿಗೆ ಕುಳಿತು ಐಪಿಎಲ್ ಮ್ಯಾಚ್ ನೋಡಿದ ಶಿವಣ್ಣ-ಧನುಷ್; ಇಲ್ಲಿವೆ ಫೋಟೋಸ್
RCB vs CSK Match: ಶಿವಣ್ಣ ಹಾಗೂ ತಮಿಳು ನಟ ಧನುಷ್ ಐಪಿಎಲ್ ಮ್ಯಾಚ್ ವೀಕ್ಷಿಸಿದ್ದಾರೆ. ಧನುಷ್ ಸಿಎಸ್ಕೆ ಬೆಂಬಲಿಸಿದರೆ, ಶಿವಣ್ಣ ಆರ್ಸಿಬಿ ಪರ ಇದ್ದರು.
Updated on: Apr 18, 2023 | 6:52 AM
Share

ಏಪ್ರಿಲ್ 17ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ಪಂದ್ಯ ನಡೆಯಿತು. ರೋಚಕ ಪಂದ್ಯದಲ್ಲಿ ಆರ್ಸಿಬಿ ಹೋರಾಡಿ ಸೋಲೊಪ್ಪಿಕೊಂಡಿತು. ಈ ಮ್ಯಾಚ್ ನೋಡಲು ಶಿವಣ್ಣ ತೆರಳಿದ್ದರು.

ವಿಶೇಷ ಎಂದರೆ ಶಿವಣ್ಣ ಮಾತ್ರ ಅಲ್ಲದೆ ತಮಿಳು ನಟ ಧನುಷ್ ಕೂಡ ಇದ್ದರು. ಧನುಷ್ ಸಿಎಸ್ಕೆ ಬೆಂಬಲಿಸಿದರೆ, ಶಿವಣ್ಣ ಆರ್ಸಿಬಿ ಪರ ಇದ್ದರು.

ಶಿವರಾಜ್ಕುಮಾರ್ ಅವರು ಆರ್ಸಿಬಿ ಜರ್ಸಿ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಅಭಿಮಾನಿಗಳ ಪೇಜ್ನಲ್ಲಿ ವೈರಲ್ ಆಗಿದೆ.

ಶಿವರಾಜ್ಕುಮಾರ್ ಅವರ ಎನರ್ಜಿಗೆ ಬೇರೊಬ್ಬರು ಸಾಟಿ ಇಲ್ಲ. ಆರ್ಸಿಬಿ ಆಟಗಾರರು ಸಿಕ್ಸ್ ಹೊಡೆದಾಗೆಲ್ಲ ಶಿಳ್ಳೆ, ಚಪ್ಪಾಳೆ ಹಾಕಿ ಅವರು ಸಂಭ್ರಮಿಸುತ್ತಿದ್ದರು.

ಧನುಷ್ ಹಾಗೂ ಶಿವರಾಜ್ಕುಮಾರ್ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ಗಾಗಿ ಧನುಷ್ ಬೆಂಗಳೂರಿಗೆ ಬಂದಿದ್ದರೇ ಎನ್ನುವ ಪ್ರಶ್ನೆ ಮೂಡಿದೆ.
Related Photo Gallery
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ
ಮೂರು ತಿಂಗಳ ಗರ್ಭಿಣಿಯ ಕಪಾಳಕ್ಕೆ ಹೊಡೆದ ಪೊಲೀಸ್ ಅಧಿಕಾರಿ
ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ: ಹಾಲಿಗೆ ಪ್ರೋತ್ಸಾಧನ ಏರಿಕೆ
ಬಾಲಕನ ಮೇಲೆ ಇದೆಂತಾ ವಿಕೃತಿ?: ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತೆ
ಚಪ್ಪಲಿ ವಿಚಾರಕ್ಕೆ ವೈದ್ಯನ ಮೇಲೆ ಮನಸೋ ಇಚ್ಛೆ ಹಲ್ಲೆ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಕೆಎಸ್ಆರ್ಟಿಸಿ ಬಸ್ ಬೆಂಕಿಗಾಹುತಿ: ಪ್ರಯಾಣಿಕರು ಪಾರಾಗಿದ್ದೇ ರೋಚಕ
ಸೈಲೆಂಟ್ ಆಗಿ ಬಿಗ್ ಬಾಸ್ ಮನೆ ಒಳಗೆ ಬಂದು ಅಧ್ವಾನ ಮಾಡಿದ ರಕ್ಷಿತಾ ಶೆಟ್ಟಿ
ಅಮೆರಿಕದ ಉತ್ತರ ಕೆರೊಲಿನಾದಲ್ಲಿ ವಿಮಾನ ಪತನ
ಎರಡನೇ ಚಳಿಗಾಲದ ಅನುಭವ ಕೇಳಿದ ಭಟ್ರು; ನಾಚಿ ನೀರಾದ ಸೋನಲ್




