ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ 2023 ರ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ರನ್ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಸಿಎಸ್‌ಕೆ ಮೂರನೇ ಸ್ಥಾನಕ್ಕೇರಿದೆ.
ಡೆವೋನ್ ಕಾನ್ವೆ ಅವರ 83 ರನ್, ಶಿವಂ ದುಬೆ ಅವರ ಸ್ಫೋಟಕ 52 ರನ್ಗಳ ನೆರವಿನಿಂದ ಚೆನ್ನೈ 226 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ಪರ ಗ್ಲೆನ್ ಮ್ಯಾಕ್ಸ್ವೆಲ್ (76) ಹಾಗೂ ನಾಯಕ ಫಾಫ್ ಡುಪ್ಲೆಸಿಸ್ (62) ಅಬ್ಬರಿದ ಬ್ಯಾಟಿಂಗ್ ನಡೆಸಿ ಗೆಲುವಿಗೆ ಹೋರಾಡಿದರೂ ಇವರ ಪತನದ ಬಳಿಕ ತಂಡ ದಿಢೀರ್ ಕುಸಿತ ಕಂಡಿತು.
ಪಂದ್ಯ ಮುಗಿದ ಬಳಿಕ ಸಿಎಸ್‌ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಆರ್ಸಿಬಿ ಪರ ಮ್ಯಾಕ್ಸ್ವೆಲ್ ಮತ್ತು ಫಾಫ್ ಡುಪ್ಲೆಸಿಸ್ ನೀಡಿದ ಬ್ಯಾಟಿಂಗ್ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.
ಯಾವಾಗ ನೀವು 220 ರನ್ಗಳ ಟಾರ್ಗೆಟ್ ನೀಡುತ್ತಿರೊ ಆಗ ಗುರಿ ಬೆನ್ನಟ್ಟುವ ತಂಡ ಸತತವಾಗಿ ದೊಡ್ಡ ಹೊಡೆತಗಳನ್ನು ಹೊಡೆಯುತ್ತಲೇ ಇರಬೇಕು. ಒಂದುವೇಳೆ ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಔಟಾಗದೆ ಅದೇ ಮಾದರಿಯಲ್ಲಿ ಬ್ಯಾಟ್ ಬೀಸುತ್ತಿದ್ದರೆ ಆರ್ಸಿಬಿ 18ನೇ ಓವರ್ನಲ್ಲೇ ಗೆಲುವು ಸಾಧಿಸುತ್ತಿತ್ತು ಎಂದು ಧೋನಿ ಹೇಳಿದ್ದಾರೆ.
ನಾನು ವಿಕೆಟ್ ಹಿಂದಿನಿಂದ ಮೌಲ್ಯಮಾಪನ ಮಾಡುತ್ತಲೇ ಇರುತ್ತೇನೆ. ಯಾವತ್ತೂ ಫಲಿತಾಂಶದ ಬಗ್ಗೆ ಯೋಚಿಸುವುದಿಲ್ಲ. ಬದಲಾಗಿ ಆ ಸಂದರ್ಭಕ್ಕೆ ಏನು ಉತ್ತಮವಾಗಿ ಮಾಡಬಹುದು ಎಂಬುದನ್ನಷ್ಟೆ ಯೋಚಿಸುತ್ತಿರುತ್ತೇನೆ. ಡೆತ್ ಓವರ್ ಯುವ ಬೌಲರ್ಗಳಿಗೆ ಕಷ್ಟಕರವಾಗಿದೆ. ಈ ಸಮಯದಲ್ಲಿ ಸುತ್ತಲೂ ಇಬ್ಬನಿ ಇರುತ್ತದೆ. ಹೀಗಿದ್ದರೂ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಎಂಬುದು ಧೋನಿ ಮಾತು.
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆ ಬಗ್ಗೆ ಮಾತನಾಡಿದ ಧೋನಿ, ದುಬೆ ಅತ್ಯುತ್ತಮ ಶಾಟ್ ಹೊಡೆಯುವ ಆಟಗಾರರಲ್ಲಿ ಒಬ್ಬ. ವೇಗದ ಬೌಲಿಂಗ್ನಲ್ಲಿ ಆತನಿಗೆ ಕೊಂಚ ಸಮಸ್ಯೆಯಿದೆ. ಆದರೆ, ಸ್ಪಿನ್ನರ್ಗಳಿಗೆ ತುಂಬಾ ಚೆನ್ನಾಗಿ ಆಡುತ್ತಾರೆ. ದುಬೆಯನ್ನು ಆಡಿಸುವಾಗ ನಮ್ಮಲ್ಲಿ ವಿಶೇಷ ಯೋಜನೆಗಳು ಇರುತ್ತವೆ ಎಂದು ಹೇಳಿದ್ದಾರೆ.
ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಸಿಎಸ್‌ಕೆ ಬೌಲರ್ಗಳ ಪ್ರದರ್ಶನಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಕೊನೆಯ 5 ಓವರ್‌ಗಳಲ್ಲಿ ಪಂದ್ಯ ಮುಗಿಸಲು ಅತ್ಯುತ್ತಮ ವೇದಿಕೆ ರೂಪಿಸಲಾಗಿತ್ತು. ಆದರೆ, ಸಿಎಸ್‌ಕೆ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ ನಮಗೆ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದು ಫಾಫ್ ಮಾತು.
Published On - 10:12 am, Tue, 18 April 23