AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಪೋಸ್ಟ್ ಮ್ಯಾಚ್​ನಲ್ಲಿ ಡುಪ್ಲೆಸಿಸ್-ಮ್ಯಾಕ್ಸ್​ವೆಲ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಎಂಎಸ್ ಧೋನಿ

CKS vs RCB, IPL 2023: ಆರ್​ಸಿಬಿ-ಸಿಎಸ್​ಕೆ ಪಂದ್ಯ ಮುಗಿದ ಬಳಿಕ ಚೆನ್ನೈ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಆರ್​ಸಿಬಿ ಪರ ಮ್ಯಾಕ್ಸ್​ವೆಲ್ ಮತ್ತು ಫಾಫ್ ಡುಪ್ಲೆಸಿಸ್ ನೀಡಿದ ಬ್ಯಾಟಿಂಗ್ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.

Vinay Bhat
|

Updated on:Apr 18, 2023 | 10:12 AM

Share
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಐಪಿಎಲ್ 2023 ರ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ರನ್​ಗಳ ರೋಚಕ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್ ಟೇಬಲ್​ನಲ್ಲಿ ಸಿಎಸ್​ಕೆ ಮೂರನೇ ಸ್ಥಾನಕ್ಕೇರಿದೆ.

1 / 7
ಡೆವೋನ್ ಕಾನ್ವೆ ಅವರ 83 ರನ್, ಶಿವಂ ದುಬೆ ಅವರ ಸ್ಫೋಟಕ 52 ರನ್​ಗಳ ನೆರವಿನಿಂದ ಚೆನ್ನೈ 226 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಪರ ಗ್ಲೆನ್ ಮ್ಯಾಕ್ಸ್​ವೆಲ್ (76) ಹಾಗೂ ನಾಯಕ ಫಾಫ್ ಡುಪ್ಲೆಸಿಸ್ (62) ಅಬ್ಬರಿದ ಬ್ಯಾಟಿಂಗ್ ನಡೆಸಿ ಗೆಲುವಿಗೆ ಹೋರಾಡಿದರೂ ಇವರ ಪತನದ ಬಳಿಕ ತಂಡ ದಿಢೀರ್ ಕುಸಿತ ಕಂಡಿತು.

2 / 7
ಪಂದ್ಯ ಮುಗಿದ ಬಳಿಕ ಸಿಎಸ್​ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಆರ್​ಸಿಬಿ ಪರ ಮ್ಯಾಕ್ಸ್​ವೆಲ್ ಮತ್ತು ಫಾಫ್ ಡುಪ್ಲೆಸಿಸ್ ನೀಡಿದ ಬ್ಯಾಟಿಂಗ್ ಪ್ರದರ್ಶನವನ್ನು ಹಾಡಿಹೊಗಳಿದ್ದಾರೆ.

3 / 7
ಯಾವಾಗ ನೀವು 220 ರನ್​ಗಳ ಟಾರ್ಗೆಟ್ ನೀಡುತ್ತಿರೊ ಆಗ ಗುರಿ ಬೆನ್ನಟ್ಟುವ ತಂಡ ಸತತವಾಗಿ ದೊಡ್ಡ ಹೊಡೆತಗಳನ್ನು ಹೊಡೆಯುತ್ತಲೇ ಇರಬೇಕು. ಒಂದುವೇಳೆ ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಔಟಾಗದೆ ಅದೇ ಮಾದರಿಯಲ್ಲಿ ಬ್ಯಾಟ್ ಬೀಸುತ್ತಿದ್ದರೆ ಆರ್​ಸಿಬಿ 18ನೇ ಓವರ್​ನಲ್ಲೇ ಗೆಲುವು ಸಾಧಿಸುತ್ತಿತ್ತು ಎಂದು ಧೋನಿ ಹೇಳಿದ್ದಾರೆ.

4 / 7
ನಾನು ವಿಕೆಟ್ ಹಿಂದಿನಿಂದ ಮೌಲ್ಯಮಾಪನ ಮಾಡುತ್ತಲೇ ಇರುತ್ತೇನೆ. ಯಾವತ್ತೂ ಫಲಿತಾಂಶದ ಬಗ್ಗೆ ಯೋಚಿಸುವುದಿಲ್ಲ. ಬದಲಾಗಿ ಆ ಸಂದರ್ಭಕ್ಕೆ ಏನು ಉತ್ತಮವಾಗಿ ಮಾಡಬಹುದು ಎಂಬುದನ್ನಷ್ಟೆ ಯೋಚಿಸುತ್ತಿರುತ್ತೇನೆ. ಡೆತ್ ಓವರ್ ಯುವ ಬೌಲರ್​ಗಳಿಗೆ ಕಷ್ಟಕರವಾಗಿದೆ. ಈ ಸಮಯದಲ್ಲಿ ಸುತ್ತಲೂ ಇಬ್ಬನಿ ಇರುತ್ತದೆ. ಹೀಗಿದ್ದರೂ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಎಂಬುದು ಧೋನಿ ಮಾತು.

5 / 7
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆ ಬಗ್ಗೆ ಮಾತನಾಡಿದ ಧೋನಿ, ದುಬೆ ಅತ್ಯುತ್ತಮ ಶಾಟ್ ಹೊಡೆಯುವ ಆಟಗಾರರಲ್ಲಿ ಒಬ್ಬ. ವೇಗದ ಬೌಲಿಂಗ್​ನಲ್ಲಿ ಆತನಿಗೆ ಕೊಂಚ ಸಮಸ್ಯೆಯಿದೆ. ಆದರೆ, ಸ್ಪಿನ್ನರ್​ಗಳಿಗೆ ತುಂಬಾ ಚೆನ್ನಾಗಿ ಆಡುತ್ತಾರೆ. ದುಬೆಯನ್ನು ಆಡಿಸುವಾಗ ನಮ್ಮಲ್ಲಿ ವಿಶೇಷ ಯೋಜನೆಗಳು ಇರುತ್ತವೆ ಎಂದು ಹೇಳಿದ್ದಾರೆ.

6 / 7
ಆರ್​ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಕೂಡ ಸಿಎಸ್​ಕೆ ಬೌಲರ್​ಗಳ ಪ್ರದರ್ಶನಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಕೊನೆಯ 5 ಓವರ್‌ಗಳಲ್ಲಿ ಪಂದ್ಯ ಮುಗಿಸಲು ಅತ್ಯುತ್ತಮ ವೇದಿಕೆ ರೂಪಿಸಲಾಗಿತ್ತು. ಆದರೆ, ಸಿಎಸ್‌ಕೆ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ ನಮಗೆ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದು ಫಾಫ್ ಮಾತು.

7 / 7

Published On - 10:12 am, Tue, 18 April 23

ರೆಸಾರ್ಟ್​ ನಲ್ಲಿ ಎಂಜಾಯ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಸಾಕು ನಾಯಿಯನ್ನು ಅಮಾನವೀಯವಾಗಿ ಥಳಿಸಿದ ಮನೆಕೆಲಸದಾಕೆ

ಉದ್ಯಮಿಗೆ ಹೃದಯಾಘಾತ:ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

VIDEO: ಫ್ಲೈಯಿಂಗ್ ಫಿಲಿಪ್: ಇದಪ್ಪಾ ಕ್ಯಾಚ್ ಅಂದ್ರೆ..!

‘ಕೆಡಿ’ ಸಿನಿಮಾದಲ್ಲಿ ಸುದೀಪ್ ನಟಿಸ್ತಾರಾ? ಪ್ರೇಮ್ ಕೊಟ್ಟ ಉತ್ತರ ಏನು?

ವಿದ್ಯಾರ್ಥಿಯನ್ನು ಎಳೆದು ಕಪಾಳಮೋಕ್ಷ ಮಾಡಿದ ಐಎಎಸ್ ಅಧಿಕಾರಿ

ಬಾಲಕನ ಕುತ್ತಿಗೆಗೆ ಕಚ್ಚಿದ ಬೀದಿ ನಾಯಿ, ಆತನ ಸ್ಥಿತಿ ಯಾರಿಗೂ ಬೇಡ

VIDEO: ಉಫ್... ಹೀಗೂ ಕ್ಯಾಚ್ ಹಿಡೀತಾರಾ... ಅದ್ಭುತ ಅತ್ಯದ್ಭುತ

ಓಪನ್ ಆಗಿ ಹೇಳ್ತೀನಿ, ಏನು ಬೇಕಾದ್ರೂ ಟ್ರೋಲ್ ಮಾಡಿಕೊಳ್ಳಿ: ಜೋಗಿ ಪ್ರೇಮ್

ಡೀಸೆಲ್ ಸಾಗಿಸುತ್ತಿದ್ದ ಗೂಡ್ಸ್​ ರೈಲಿನಲ್ಲಿ ಭಾರಿ ಅಗ್ನಿ ಅವಘಡ