ಮಡಿಕೇರಿಯಲ್ಲಿ ತಲೆಎತ್ತಿದ ಸ್ಕೈ ಬ್ರಿಡ್ಜ್; ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವ ಅನುಭವ

ಕೊಡಗು ಜಿಲ್ಲೆ ಇತ್ತೀಚೆಗೆ ಸಾಹ ಪ್ರವಾಸೋಧ್ಯಮಕ್ಕೆ ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿದೆ. ಜಲಸಾಹಸ ಕ್ರಿಡೆ ಬೆನ್ನಿಗೇ ಇದೀಗ ಅತ್ಯದ್ಭುತ ಎನ್ನಬಹುದಾದ ಸ್ಕೈ ವೇ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಸಖತ್ ಥ್ರಿಲ್ ನೀಡಲು ಸಜ್ಜಾಗಿರೋ ಈ ಸೇತುವೆ ಇದೀಗ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

Gopal AS
| Updated By: ಕಿರಣ್ ಹನುಮಂತ್​ ಮಾದಾರ್

Updated on:May 01, 2024 | 4:22 PM

ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವಂತಹ ಅನುಭವ, ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್. ಇದು ಯಾವುದೋ ವಿದೇಶದಲ್ಲಿ ಕಂಡು ಬರೋ ದೃಶ್ಯವಲ್ಲ. ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸೀತಾಣ ಇರುವುದು ನಮ್ಮ ಮಡಿಕೇರಿಯಲ್ಲಿ.

ಹೆಜ್ಜೆ ಇಟ್ಟರೆ ಎದೆ ಝಲ್ ಎನಿಸುವಂತಹ ಅನುಭವ, ಗಾಳಿಯಲ್ಲಿ ನಡೆಯುತ್ತಿದ್ದೇವೇನೋ ಎಂದೆನಿಸುವಷ್ಟು ಥ್ರಿಲ್. ಇದು ಯಾವುದೋ ವಿದೇಶದಲ್ಲಿ ಕಂಡು ಬರೋ ದೃಶ್ಯವಲ್ಲ. ಇಂತಹ ಒಂದು ಥ್ರಿಲ್ಲಿಂಗ್ ಪ್ರವಾಸೀತಾಣ ಇರುವುದು ನಮ್ಮ ಮಡಿಕೇರಿಯಲ್ಲಿ.

1 / 6
ಹೌದು,ಮಡಿಕೇರಿ ನಗರದಿಂದ 5 ಕಿಲೋ ಮೀಟರ್ ದೂರದ ನಂದಿ​ಮೊಟ್ಟೆ ಗ್ರಾಮದಲ್ಲಿ ಇಂತಹ ಒಂದು ಸುಂದರ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಅಬ್ಬಿ ಜಲಪಾತ ಹಾಗೂ ಮಾಂದಲಪಟ್ಟಿ ರೆಸ್ತೆಯಲ್ಲೇ ಈ ಸ್ಕೈ ಬ್ರಿಡ್ಜ್​ ಇದೆ.

ಹೌದು,ಮಡಿಕೇರಿ ನಗರದಿಂದ 5 ಕಿಲೋ ಮೀಟರ್ ದೂರದ ನಂದಿ​ಮೊಟ್ಟೆ ಗ್ರಾಮದಲ್ಲಿ ಇಂತಹ ಒಂದು ಸುಂದರ ಗ್ಲಾಸ್ ಬ್ರಿಡ್ಜ್​ ತಲೆ ಎತ್ತಿದೆ. ಅಬ್ಬಿ ಜಲಪಾತ ಹಾಗೂ ಮಾಂದಲಪಟ್ಟಿ ರೆಸ್ತೆಯಲ್ಲೇ ಈ ಸ್ಕೈ ಬ್ರಿಡ್ಜ್​ ಇದೆ.

2 / 6
ಈ ಗ್ರಾಮದ ಭೀಮಯ್ಯ ಎಂಬುವವರು ಕಳೆದ 8 ತಿಂಗಳಿನಿಂದ ಯೋಜನೆ ರೂಪಿಸಿ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್​ನ್ನು ನಿರ್ಮಿಸಿದ್ದಾರೆ. ಇದಕ್ಕೆ 33 ಎಂಎಂ ದಪ್ಪದ ಗ್ಲಾಸ್ ಅನ್ನ ಮೂರು ಲೇಯರ್​ನಲ್ಲಿ ಬಳಸಲಾಗಿದ್ದು
ಒಟ್ಟು 80 ಅಡಿ ಉದ್ದವಿದ್ದು 250 ಅಡಿ ಎತ್ತರವಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ದೊಡ್ಡದಾದ ಗ್ಲಾಸ್ ಬ್ರಿಡ್ಜ್​​ ಆಗಿ ಹೊರಹೊಮ್ಮಿದೆ.

ಈ ಗ್ರಾಮದ ಭೀಮಯ್ಯ ಎಂಬುವವರು ಕಳೆದ 8 ತಿಂಗಳಿನಿಂದ ಯೋಜನೆ ರೂಪಿಸಿ ಕೇರಳದಿಂದ ತಂತ್ರಜ್ಞರನ್ನ ಕರೆಸಿ ಇಂತಹ ಒಂದು ಗ್ಲಾಸ್ ಬ್ರಿಡ್ಜ್​ನ್ನು ನಿರ್ಮಿಸಿದ್ದಾರೆ. ಇದಕ್ಕೆ 33 ಎಂಎಂ ದಪ್ಪದ ಗ್ಲಾಸ್ ಅನ್ನ ಮೂರು ಲೇಯರ್​ನಲ್ಲಿ ಬಳಸಲಾಗಿದ್ದು ಒಟ್ಟು 80 ಅಡಿ ಉದ್ದವಿದ್ದು 250 ಅಡಿ ಎತ್ತರವಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ದೊಡ್ಡದಾದ ಗ್ಲಾಸ್ ಬ್ರಿಡ್ಜ್​​ ಆಗಿ ಹೊರಹೊಮ್ಮಿದೆ.

3 / 6
ಕಳೆದ ಭಾನುವಾರ ಈ ಸೇತುವೆ ಲೋಕಾರ್ಪಣಗೊಂಡಿದೆ. ಇದರ ಮೇಲೆ ಹೆಜ್ಜೆ ಇಟ್ಟರೆ ಅಕ್ಷರಶಃ ಆಕಾಶದ ಮೇಲೆ ನಡೆಯುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಮಾತ್ರವಲ್ಲ ಸೇತುವೆ ವೀವ್ ಪಾಯಿಂಟ್​ಗೆ ತಲುಪಿದ ಮೇಲೆ
ಕೆಳಗಡೆ ನೋಡಿದರೆ ಆಳ ಪ್ರಪಾತದ ಮೇಲೆ ನಿಂತಂತೆ ಭಾಸವಾಗಿ ಎದೆ ಝಲ್ಲೆನಿಸುತ್ತದೆ.

ಕಳೆದ ಭಾನುವಾರ ಈ ಸೇತುವೆ ಲೋಕಾರ್ಪಣಗೊಂಡಿದೆ. ಇದರ ಮೇಲೆ ಹೆಜ್ಜೆ ಇಟ್ಟರೆ ಅಕ್ಷರಶಃ ಆಕಾಶದ ಮೇಲೆ ನಡೆಯುತ್ತಿದ್ದೇವೇನೋ ಎಂಬಂತೆ ಭಾಸವಾಗುತ್ತದೆ. ಮಾತ್ರವಲ್ಲ ಸೇತುವೆ ವೀವ್ ಪಾಯಿಂಟ್​ಗೆ ತಲುಪಿದ ಮೇಲೆ ಕೆಳಗಡೆ ನೋಡಿದರೆ ಆಳ ಪ್ರಪಾತದ ಮೇಲೆ ನಿಂತಂತೆ ಭಾಸವಾಗಿ ಎದೆ ಝಲ್ಲೆನಿಸುತ್ತದೆ.

4 / 6
ಈ ವೀವ್ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸಂದರ್ಯ ಕಾಣಿಸಿದ್ರೆ, ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ.
ಒಮ್ಮೆಗೆ ಕೇವಲ 10 ಮಂದಿಯನ್ನ ಮಾತ್ರ ಸೇತುವೆ ಮೇಲೆ ತೆರಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದು, ಥ್ರಿಲ್ಲಿಂಗ್ ಅನುಭವ ಪಡೆಯುತ್ತಿದ್ದಾರೆ.

ಈ ವೀವ್ ಪಾಯಿಂಟ್​ನಲ್ಲಿ ನಿಂತು ಇಡೀ ಕೊಡಗಿನ ಸೌಂದರ್ಯ ಸವಿಯಬಹುದು. ಒಂದೆಡೆ ಬೆಟ್ಟದ ಮೇಲೆ ಮಡಿಕೇರಿಯ ಸಂದರ್ಯ ಕಾಣಿಸಿದ್ರೆ, ಉಳಿದಂತೆ ಕಣ್ಣು ಹಾಯಿಸಿದಷ್ಟು ದೂರವೂ ಪ್ರಕೃತಿಯ ಸೊಬಗು ಕಣ್ಮನ ಸೆಳೆಯುತ್ತದೆ. ಒಮ್ಮೆಗೆ ಕೇವಲ 10 ಮಂದಿಯನ್ನ ಮಾತ್ರ ಸೇತುವೆ ಮೇಲೆ ತೆರಳಲು ಅವಕಾಶ ನೀಡಲಾಗುತ್ತದೆ. ಈಗಾಗಲೇ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಶುರು ಮಾಡಿದ್ದು, ಥ್ರಿಲ್ಲಿಂಗ್ ಅನುಭವ ಪಡೆಯುತ್ತಿದ್ದಾರೆ.

5 / 6
 ಕೊಡಗಿನಲ್ಲಿ ವಿಶ್ದರ್ಜೆಯ ಸಾಹಸ ಪ್ರವಾಸೋಧ್ಯಮ ಬೇಕು ಎಂದು ಬಯಸುವವರಿಗೆ ಈ ಸ್ಕೈ ಬ್ರಿಡ್ಜ್​ ಸಖತ್​ ಥ್ರಿಲ್ ನೀಡಲಿದೆ. ಒಟ್ಟಾರೆ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾಗಿರೋದು ಕೊಡಗಿನ ಪ್ರವಾಸೋಧ್ಯಮಕ್ಕೆ ಹೊಸ ಭಾಷ್ಯ ಬರೆದಂತಾಗಿದೆ,

ಕೊಡಗಿನಲ್ಲಿ ವಿಶ್ದರ್ಜೆಯ ಸಾಹಸ ಪ್ರವಾಸೋಧ್ಯಮ ಬೇಕು ಎಂದು ಬಯಸುವವರಿಗೆ ಈ ಸ್ಕೈ ಬ್ರಿಡ್ಜ್​ ಸಖತ್​ ಥ್ರಿಲ್ ನೀಡಲಿದೆ. ಒಟ್ಟಾರೆ ಈ ಗ್ಲಾಸ್ ಬ್ರಿಡ್ಜ್ ನಿರ್ಮಾಣವಾಗಿರೋದು ಕೊಡಗಿನ ಪ್ರವಾಸೋಧ್ಯಮಕ್ಕೆ ಹೊಸ ಭಾಷ್ಯ ಬರೆದಂತಾಗಿದೆ,

6 / 6

Published On - 4:21 pm, Wed, 1 May 24

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ