Updated on: Nov 05, 2022 | 3:56 PM
ಜೋಗ್ ಫಾಲ್ಸ್‌ನಿಂದ ಕೇವಲ 6 ಕಿಮೀ ದೂರದಲ್ಲಿರುವ ಕಾಡುಗಳ ಪ್ರಶಾಂತತೆ ಮತ್ತು ಪರ್ವತಗಳು ಹಾಗೂ ನಿಸರ್ಗವನ್ನು ಅನುಭವಿಸಲು ಇರುವ ಕ್ಯಾಂಪ್ ಇದಾಗಿದೆ. ಶರಾವತಿ ಅಡ್ವೇನ್ಚರ್ ಕ್ಯಾಂಪ್ ನಿಮ್ಮ ರಜಾದಿನಗಳಲ್ಲಿ ಮನಸ್ಸಿಗೆ ಶಾಂತಿ ನೀಡುವ ಸ್ಥಳವಾಗಿದೆ. ಹೊಳೆಯುವ ಸೂರ್ಯನ ಬೆಳಕು ಮತ್ತು ಶಾಂತಿಯುತ ನೀರಿನ ಹರಿವು ಕಿವಿಗೆ ಇಂಪು ನೀಡುತ್ತದೆ.
ಬನ್ನೇರುಘಟ್ಟ ನೇಚರ್ ಕ್ಯಾಂಪ್ ಎಂದರೆ ಸದಾ ಒತ್ತಡದ ಜೀವನ ನಡೆಸುತ್ತಿರುವ ಬೆಂಗಳೂರಿನವರಿಗೆ ಒಂದು ಉತ್ತಮ ಸ್ಥಳವಾಗಿದೆ. ಇಲ್ಲಿನ ಕ್ಯಾಂಪ್ ನೈಸರ್ಗಿಕ ಹಸಿರಿನ ಸೌಂದರ್ಯದ ಮಧ್ಯೆ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಇಲ್ಲಿ ಸುಂದರವಾದ ಚಿಟ್ಟೆಗಳು, ಆನೆಗಳು, ಕರಡಿಗಳು ಮತ್ತು ಜಿಂಕೆಗಳನ್ನು ಹತ್ತಿರದಿಂದ ಕಣ್ತುಂಬಿಸಬಹುದು.
ಸದಾಶಿವಗಡವು 1715 ರಿಂದಲೂ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಈ ಸ್ಥಳವನ್ನು ಪ್ರವಾಸಿಗರಿಗೆ ಅನುಕೂಲವಾಗುವಂತೆ ಅಭಿವೃದ್ದಿಪಡಿಸಿದ್ದು, ಕಡಲ ತೀರದ ಉತ್ತಮ ನೋಟ ಮತ್ತು ಸಾಹಸ ಕ್ರೀಡೆಗಳನ್ನು ಅನುಭವಿಸುವ ಅವಕಾಶವನ್ನು ನೀಡುತ್ತದೆ.
ಓಂ ಬೀಚ್ ರೆಸಾರ್ಟ್ ಗೋಕರ್ಣದ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಬೀಚ್‌ಗಳಲ್ಲಿ ಒಂದಾಗಿದೆ. ಇಲ್ಲಿನ ಬೀಚ್ ಓಂ ರೀತಿಯ ಆಕೃತಿಯನ್ನು ಹೊಂದಿದ್ದು, ಆದ್ದರಿಂದ ಈ ರೀತಿಯ ಹೆಸರನ್ನು ಪಡೆದುಕೊಂಡಿದೆ. ಎತ್ತರದ ಬೆಟ್ಟಗಳು ಮತ್ತು ಹೊಳೆಯುವ ಸಮುದ್ರದ ನಡುವೆ ಇರುವ ಓಂ ಬೀಚ್ ಬೀಚ್ ಪ್ರಿಯರಿಗೆ ಪರಿಪೂರ್ಣ ದೃಶ್ಯವಾಗಿದೆ.
ಬಂಡೀಪುರ ಸಫಾರಿ ಲಾಡ್ಜ್ ವನ್ಯಜೀವಿ ಅನ್ವೇಷಕರಿಗೆ ಒಂದು ಉತ್ತಮ ಸ್ಥಳವಾಗಿದೆ. ಮೂಲತಃ ರಾಜಮನೆತನದವರಿಂದ ಬೇಟೆಯಾಡುವ ಸ್ಥಳವಾಗಿ ಬಳಸಲ್ಪಟ್ಟ ಈ ಸ್ಥಳವು ಈಗ ಜಿಂಕೆಗಳು, ಆನೆಗಳು ಮತ್ತು ನವಿಲುಗಳಿಂದ ಕೂಡಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಈ ಕಬಿನಿ ರಿವರ್ ಲಾಡ್ಜ್ ಇಲ್ಲಿನ ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ದೋಣಿ ಸವಾರಿ, ಜೀಪ್ ಸಫಾರಿಗಳನ್ನು ಹೊಂದಿದ್ದು, ಇಲ್ಲಿ ಜಿಂಕೆ, ಆನೆ ಮುಂತಾದ ಪ್ರಾಣಿಗಳನ್ನು ಕಣ್ತುಂಬಿಸಬಹುದು.
ಈ ರೆಸಾರ್ಟ್ ವಿಲಾಸಪುರ ಕೆರೆಯ ಬಳಿ ಮತ್ತು ಹೊನ್ನಿಕೇರಿ ಮೀಸಲು ಅರಣ್ಯದ ಸಮೀಪದಲ್ಲಿದೆ. ಭವ್ಯವಾದ ವಾಸ್ತುಶಿಲ್ಪದ ತಾಣಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
Published On - 3:25 pm, Sat, 5 November 22