Updated on: Jan 07, 2022 | 5:04 PM
ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಬಳಿಕ ಮಂಗಳಸೂತ್ರ ಧರಿಸುತ್ತಾರೆ. ಇತ್ತೀಚೆಗೆ ಮದುವೆ ಆದ ಕತ್ರಿನಾ ಕೈಫ್ ಅವರಿಂದ ಹಿಡಿದು ಅನೇಕ ಸೆಲೆಬ್ರಿಟಿಗಳು ದುಬಾರಿ ಮಂಗಳಸೂತ್ರ ಧರಿಸಿ ಮಿಂಚಿದ ಉದಾಹರಣೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.
ಕತ್ರಿನಾ ಕೈಫ್ ಇತ್ತೀಚೆಗೆ ವಿಕ್ಕಿ ಕೌಶಲ್ ಜತೆ ವಿವಾಹವಾಗಿದ್ದಾರೆ. ಇವರು ಧರಿಸಿರುವ ತಾಳಿಯ ಬೆಲೆ ಬರೋಬ್ಬರಿ 7 ಲಕ್ಷ ರೂಪಾಯಿ ಎನ್ನಲಾಗಿದೆ.
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಆಗಿ ಕೆಲ ವರ್ಷ ಕಳೆದಿದೆ. ಇವರ ಮಂಗಳಸೂತ್ರದ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ.
ಪ್ರಿಯಾಂಕಾ ಚೋಪ್ರಾ ಅವರು ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ಮದುವೆ ಆಗಿದ್ದಾರೆ. ಅವರು ಡೈಮಂಡ್ ತಾಳಿ ಧರಿಸುತ್ತಾರೆ. ಇದರ ಬೆಲೆ ಲಕ್ಷಾಂತರ ರೂಪಾಯಿ ಇದೆ ಎನ್ನಲಾಗಿದೆ. ಆದರೆ ನಿಖರ ಬೆಲೆ ತಿಳಿದುಬಂದಿಲ್ಲ
ಸೋನಮ್ ಕಪೂರ್ ವಿಭಿನ್ನವಾದದ್ದನ್ನು ಮಾಡುತ್ತಿರುತ್ತಾರೆ. ಇವರು ತಮ್ಮ ರಾಶಿ ಚಕ್ರಕ್ಕೆ ಅನುಸಾರವಾಗಿ ಮಂಗಳಸೂತ್ರ ಮಾಡಿಕೊಂಡಿದ್ದಾರೆ. ಇದರ ಬೆಲೆ ನಿಖರವಾಗಿ ತಿಳಿದಿಲ್ಲ.
ಯಾಮಿ ಗೌತಮ್ ಅವರು 3.40 ಲಕ್ಷ ರೂಪಾಯಿ ಮಂಗಳಸೂತ್ರ ಹಾಕಿಕೊಳ್ಳುತ್ತಾರೆ. ಈ ಫೋಟೋ ವೈರಲ್ ಆಗಿತ್ತು.
ರಾಜ್ಕುಮಾರ್ ರಾವ್ ವಿವಾಹವಾದ ಪತ್ರಲೇಖಾ ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅವರು ಧರಿಸಿದ ಮಂಗಳಸೂತ್ರದ ಬೆಲೆ 1.50 ಲಕ್ಷ ರೂಪಾಯಿ.