Kavyashree Gowda: ‘ಎಲ್ರೂ ಜೋಡಿಯಾಗಿ ಓಡಾಡ್ತಾರೆ, ನಂಗೂ ಜೋಡಿ ಬೇಕು’; ಗೋಳು ತೋಡಿಕೊಂಡ ಕಾವ್ಯಶ್ರೀ

Edited By:

Updated on: Oct 22, 2022 | 7:47 PM

Bigg Boss Kannada season 9: ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ಜೋಡಿ ಆಗುತ್ತಾರೆ. ಈ ವಿಚಾರವನ್ನು ಲೇವಡಿ ಮಾಡುವ ರೀತಿಯಲ್ಲಿ ಕಾವ್ಯಶ್ರೀ ಅವರು ಮಾತನಾಡಿದ್ದಾರೆ.

1 / 5
ಕಿರುತೆರೆ ನಟಿ ಕಾವ್ಯಶ್ರೀ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಗಮನ ಸೆಳೆಯುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ಅವರು ಗುರುತಿಸಿಕೊಂಡಿದ್ದಾರೆ.

ಕಿರುತೆರೆ ನಟಿ ಕಾವ್ಯಶ್ರೀ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಗಮನ ಸೆಳೆಯುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ಅವರು ಗುರುತಿಸಿಕೊಂಡಿದ್ದಾರೆ.

2 / 5

ಎಲ್ಲರ ಜೊತೆಗೂ ಕಾವ್ಯಶ್ರೀ ಬೆರೆಯುತ್ತಿದ್ದಾರೆ. ಅವರ ಹಾಸ್ಯಪ್ರಜ್ಞೆ ಕೂಡ ಚೆನ್ನಾಗಿದೆ. ಹಾಗಾಗಿ ದೊಡ್ಮನೆಯಲ್ಲಿ ಅವರು ಮನರಂಜನೆ ನೀಡುತ್ತಿದ್ದಾರೆ. ಇತ್ತೀಚೆಗೆ ಅವರ ಮಾತು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

3 / 5

ಸಾಮಾನ್ಯವಾಗಿ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ಜೋಡಿ ಆಗುತ್ತಾರೆ. ತಮಗೆ ಕಂಫರ್ಟ್​ ಎನಿಸುವವರ ಜೊತೆಗೇ ಹೆಚ್ಚು ಕಾಲ ಕಳೆಯುತ್ತಾರೆ. ಈ ವಿಚಾರದ ಬಗ್ಗೆ ಕಾವ್ಯಶ್ರೀ ಕಾಮಿಡಿ ಮಾಡಿದ್ದಾರೆ.

4 / 5

ರಾಕೇಶ್​ ಅಡಿಗ ಮತ್ತು ಅಮೂಲ್ಯ ಗೌಡ ಅವರು ಇತ್ತೀಚೆಗೆ ಹೆಚ್ಚು ಜೊತೆಯಾಗಿ ಇರಲು ಆರಂಭಿಸಿದ್ದಾರೆ. ಇದು ಎಲ್ಲರ ಗಮನಕ್ಕೂ ಬಂದಿದೆ ಇದೇ ವಿಷಯದ ಬಗ್ಗೆ ಕಾವ್ಯಶ್ರೀ ಹಾಸ್ಯಮಯವಾಗಿ ಮಾತನಾಡಿ ಎಲ್ಲರನ್ನೂ ನಗಿಸಿದ್ದಾರೆ.

5 / 5

‘ಇಲ್ಲಿ ಎಲ್ಲರೂ ಜೋಡಿಯಾಗಿ ಓಡಾಡುತ್ತಾರೆ. ನಂಗೂ ಒಂದು ಜೋಡಿ ಬೇಕು. ಆಟ ಆಡುವಾಗಲೂ ನಾನು ಸಿಂಗಲ್​. ಗ್ರೂಪಲ್ಲಿ ಇದ್ದರೂ ಸಿಂಗಲ್​’ ಎಂದು ಕಣ್ಣೀರು ಹಾಕುವ ರೀತಿಯಲ್ಲಿ ನಟಿಸಿ ಅವರು ನಗು ಉಕ್ಕಿಸಿದ್ದಾರೆ.

Loading...
Unable to load recommendations.
Follow Us