ಈ ಬುಡಕಟ್ಟಿನ ಮಹಿಳೆಯರ ಸೌಂದರ್ಯವೇ ಈ ಕುತ್ತಿಗೆ, ವಯಸ್ಸು ಆದಂತೆ ಹೆಚ್ಚಾಗುತ್ತೆ ಈ ಉಂಗುರಗಳ ಸಂಖ್ಯೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 20, 2024 | 4:08 PM

Kayan Tribe : ಪ್ರಪ್ರಪಂಚದಲ್ಲಿರುವ ಕೆಲವು ಜನರ ಆಚಾರ ವಿಚಾರ, ಸಂಪ್ರದಾಯಗಳನ್ನು ಕಂಡಾಗ ಅಚ್ಚರಿಯು ಆಗುತ್ತದೆ. ಅಂತಹ ಜನರಲ್ಲಿ ಮಯಾನ್ಮಾರ್ ದೇಶದ ಈ ಬುಡಕಟ್ಟಿನ ಜನರು ತನ್ನ ವಿಭಿನ್ನ ಆಚರಣೆಯ ಮೂಲಕ ಗಮನ ಸೆಳೆಯುತ್ತಾರೆ. ಮ್ಯಾನ್ಮಾರ್‌ನಲ್ಲಿರುವ ಈ ಕಾಯನ್ ಜನಾಂಗದ ಮಹಿಳೆಯ ಕುತ್ತಿಗೆಯೇ ಆಕರ್ಷಣೆಯಾಗಿದೆ. ಕುತ್ತಿಗೆಗೆ ಹಿತ್ತಾಳೆಯ ರಿಂಗ್​​​ನ್ನು ಧರಿಸುವ ಈ ಆಚರಣೆಯ ಹಿಂದೆ ಕುತೂಹಲಕಾರಿ ಅಂಶಗಳು ಸೇರಿವೆ.

1 / 5
ಕಾಯನ್ ಬುಡಕಟ್ಟು ಜನಾಂಗದ ಮಹಿಳೆಯರ ವೇಷಭೂಷಣಗಳು ವಿಭಿನ್ನವಾಗಿದ್ದು ಆಕರ್ಷಕವಾಗಿದೆ. ಅದಲ್ಲದೇ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುತ್ತಿಗೆಗೆ ರಿಂಗ್​​ಗಳನ್ನು ಧರಿಸಿರುವುದೇ ಇವರ ಸೌಂದರ್ಯ ಗುಟ್ಟಾಗಿದೆ.

2 / 5
ಈ ಜನಾಂಗದ ಮಹಿಳೆಯರ ಕುತ್ತಿಗೆಯು ಜಿರಾಫೆಯಂತೆ ಉದ್ದವಾಗಿ ಬೆಳೆಯುತ್ತದೆ. ಈ ಕುತ್ತಿಗೆಯ ಅಂದವನ್ನು ಹೆಚ್ಚಿಸಲು ತಮ್ಮ ಕುತ್ತಿಗೆಗೆ ಹಿತ್ತಾಳೆಯ ರಿಂಗ್​​​ನ್ನು ಧರಿಸುತ್ತಾರೆ. ಮಹಿಳೆಯರ ಕುತ್ತಿಗೆ ತೆಳ್ಳಗೆ ಮತ್ತು ಉದ್ದವಾಗಿದ್ದರೆ, ಅವರು ಹೆಚ್ಚು ಸುಂದರವಾಗಿ ಕಾಣುತ್ತಾರೆ ಎನ್ನುವುದು ಈ ಬುಡಕಟ್ಟು ಜನಾಂಗದ ನಂಬಿಕೆ.

3 / 5
ವಯಸ್ಸು ಹೆಚ್ಚಾದಂತೆ ಕುತ್ತಿಗೆಗೆ ಧರಿಸುವ ರಿಂಗ್​​ಗಳ ಸಂಖ್ಯೆಯು ಹೆಚ್ಚಾಗುತ್ತದೆ. 25 ರಿಂಗ್​​​ಗಳನ್ನು ಧರಿಸುವ ಮಹಿಳೆಯರನ್ನು ಸುಂದರವೆಂದು ಪರಿಗಣಿಸಲಾಗುತ್ತದೆ. ಇಲ್ಲಿ 28 -29 ರಿಂಗ್​​ಗಳನ್ನು ಧರಿಸಿರುವ ಮಹಿಳೆಯರು ಇದ್ದಾರೆ.

4 / 5
ಆರು ವರ್ಷವಿರುವಾಗಲೇ ಕುತ್ತಿಗೆಗೆ ರಿಂಗ್​ನ್ನು ಧರಿಸಲು ಪ್ರಾರಂಭಿಸುತ್ತಾರೆ. ಈ ಹಿತ್ತಾಳೆ ರಿಂಗ್​​​ಗಳು ಸರಿಸುಮಾರು 20 ಕೆ.ಜಿ.ವರೆಗೂ ತೂಕವನ್ನು ಹೊಂದಿದೆ. ಬುಡಕಟ್ಟಿನ ಮಹಿಳೆಯರು ಈ ರಿಂಗ್​​​ಗಳನ್ನು ಒಂದರ ಮೇಲೊಂದರಂತೆ ಒಂದು ಅಡಿ ಉದ್ದಕ್ಕೂ ತಮ್ಮ ಕುತ್ತಿಗೆಗೆ ಹಾಕಿಕೊಳ್ಳುತ್ತಾರೆ.

5 / 5
ದ್ದನೆಯ ಕುತ್ತಿಗೆಯನ್ನು ಹೊಂದಿರುವ ಮಹಿಳೆ ಕುರೂಪವಾಗಿ ಕಾಣುತ್ತಾಳೆ. ಹೀಗಾಗಿ ಬುಡಕಟ್ಟು ಜನಾಂಗದ ಜನರು ಅಪಹರಿಸುವುದಿಲ್ಲ ಎನ್ನುವ ನಂಬಿಕೆಯಿತ್ತು. ಹೀಗಾಗಿ ಕಯಾನ್ ಜನಾಂಗದ ಮಹಿಳೆಯರು ರಿಂಗ್ ಧರಿಸುವ ಮೂಲಕ ಕುತ್ತಿಗೆಯನ್ನು ಉದ್ದವಾಗಿಸುತ್ತಿದ್ದರು. ಆದರೆ ಇದೀಗ ಈ ರಿಂಗ್​​ಗಳು  ಅಂದವನ್ನು ಹೆಚ್ಚಿಸುತ್ತದೆ ಎನ್ನುವಂತಾಗಿದೆ.