India’s 1st AC Primary School: ಅ. 19ರಂದು ಭಾರತದ ಮೊದಲ AC ಸರ್ಕಾರಿ ಶಾಲೆ ಉದ್ಘಾಟನೆ, ಎಲ್ಲಿ ಗೊತ್ತಾ?

Updated on: Oct 15, 2025 | 5:21 PM

ಕೇರಳವು ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ (AC) ಪ್ರಾಥಮಿಕ ಶಾಲೆಯನ್ನು ಮಲಪ್ಪುರಂನಲ್ಲಿ ಆರಂಭಿಸಲು ಸಜ್ಜಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಶಾಲೆಯಲ್ಲಿ AC ಕೊಠಡಿಗಳು, ಡಿಜಿಟಲ್ ಸ್ಕ್ರೀನ್​, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಆಧುನಿಕ ಸೌಲಭ್ಯಗಳಿವೆ. ಸ್ಥಳೀಯ ಸಂಸದ ಇ.ಟಿ. ಮುಹಮ್ಮದ್ ಬಶೀರ್ ಅಕ್ಟೋಬರ್ 19 ರಂದು ಈ ಶಾಲೆಯನ್ನು ಉದ್ಘಾಟಿಸುವುದಾಗಿ ವರದಿಯಾಗಿದೆ.

1 / 6
ಕೇರಳ ಸರ್ಕಾರವು ದೇಶದ ಮೊದಲ ಸಂಪೂರ್ಣ ಹವಾನಿಯಂತ್ರಿತ(AC) ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಈ ಶಾಲೆಯನ್ನು ಮಲ್ಲಪ್ಪುರಂನ ಮೇಲ್ಮುರಿ ಮುತ್ತಿಪಾಡುವಿನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ಸ್ಥಳೀಯ ಸಂಸದ ಇ.ಟಿ. ಮುಹಮ್ಮದ್ ಬಶೀರ್ ಅಕ್ಟೋಬರ್ 19 ರಂದು ಸಂಜೆ 4 ಗಂಟೆಗೆ ಶಾಲೆಯನ್ನು ಉದ್ಘಾಟಿಸಲಿದ್ದಾರೆ.

2 / 6
ಈ ಶಾಲೆಯು ಎಂಟು ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಸಿಬ್ಬಂದಿ ಕೊಠಡಿ ಮತ್ತು ಮುಖ್ಯ ಶಿಕ್ಷಕ ಕೊಠಡಿಯನ್ನು ಹೊಂದಿದ್ದು, ಇವೆಲ್ಲವೂ ಹವಾನಿಯಂತ್ರಿತವಾಗಿವೆ. ಸುಮಾರು 10,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಎರಡು ಅಂತಸ್ತಿನ ಕಟ್ಟಡವು ಆಧುನಿಕ FRP ಬೆಂಚುಗಳು ಮತ್ತು ಮೇಜುಗಳಿಂದ ಸಂಪೂರ್ಣವಾಗಿ ಸುಸಜ್ಜಿತವಾಗಿದೆ.

3 / 6
ಪ್ರತಿ ಮಹಡಿಯಲ್ಲಿ ಟ್ಯಾಪ್ ವಾಟರ್, ಪ್ರತಿ ತರಗತಿಯಲ್ಲಿ ಡಿಜಿಟಲ್ ಡಿಸ್ಪ್ಲೇ ಸ್ಕ್ರೀನ್‌ಗಳು ಮತ್ತು ಕ್ಯಾಂಪಸ್‌ನಾದ್ಯಂತ ಸಂಯೋಜಿತ ಧ್ವನಿ ವ್ಯವಸ್ಥೆಯಂತಹ ಹೆಚ್ಚುವರಿ ಸೌಲಭ್ಯಗಳನ್ನು ಸಹ ಸ್ಥಾಪಿಸಲಾಗಿದೆ.

4 / 6
ಇದಲ್ಲದೆ, ಪ್ರತಿ ತರಗತಿಯಲ್ಲಿ ಒಂದು ಸಣ್ಣ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಶೂಗಳು ಅಥವಾ ಚಪ್ಪಲಿಗಳನ್ನು ಇಡಲು ಶೂ ರ್ಯಾಕ್‌ಗಳನ್ನು ಸ್ಥಾಪಿಸಲಾಗಿದೆ.

5 / 6
ಈ ಶಾಲೆಯಲ್ಲಿ ಆಧುನಿಕ ಪೀಠೋಪಕರಣಗಳು ಮತ್ತು ಇತರ ಸೌಲಭ್ಯಗಳಿಗಾಗಿ ಸರ್ಕಾರ 5 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಸ್ಥಳೀಯ ಶಾಸಕ ಪಿ. ಉಬೈದುಲ್ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳನ್ನು ಕೊಡುಗೆ ನೀಡಿದ್ದಾರೆ.

6 / 6
ಕೇರಳ ಸರ್ಕಾರದಿಂದ ನಿರ್ಮಿಸಲಾದ ಈ ಶಾಲೆಯು ಸರ್ಕಾರಿ ಶಾಲೆಗಳಲ್ಲಿ ಆಧುನಿಕ ಸೌಲಭ್ಯಗಳಿಗೆ ಒಂದು ಹೆಗ್ಗುರುತಾಗಿ ನಿಲ್ಲಲಿದೆ. ಇದು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣವನ್ನು ಒದಗಿಸುತ್ತದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಾದರಿಯಾಗಲಿದೆ.

Published On - 5:15 pm, Wed, 15 October 25