- Kannada News Photo gallery Khanapur Congress candidate Anjali Nimbalkar made Jolada rotti during campaigning in handur Village of Belagavi
Belagavi: ಪ್ರಚಾರದ ವೇಳೆ ಜೋಳದ ರೊಟ್ಟಿ ಮಾಡಿದ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್
ಬೆಳಗಾವಿ ಜಿಲ್ಲೆ ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಹಂದೂರ ಗ್ರಾಮದಲ್ಲಿ ಮನೆಯೊಂದರಲ್ಲಿ ಜೋಳದ ರೊಟ್ಟಿ ಕೂಡ ಮಾಡಿದರು.
Updated on: May 01, 2023 | 7:01 PM

ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಖಾನಾಪುರ ಕ್ಷೇತ್ರದ ಹಂದುರ, ಹುಲಿಕೊತ್ತಲ, ಸುರಪುರ ಕೆರವಾಡ ಗ್ರಾಮದಲ್ಲಿ ಇಂದು ಭರ್ಜರಿ ಕ್ಯಾಂಪೇನ್ ಮಾಡಿದ ಅಂಜಲಿ ನಿಂಬಾಳ್ಕರ್, ತೆರೆದ ವಾಹನದಲ್ಲಿ ರೋಡ್ ಶೋ ಮಾಡಿ ಮತಯಾಚನೆ ಮಾಡಿದರು.

ಹಂದೂರ ಗ್ರಾಮದಲ್ಲಿ ಇಂದು ಪ್ರಚಾರ ನಡೆಸಿದರು. ಈ ವೇಳೆ ಬಡ ಮಹಿಳೆಯ ಮನೆಗೆ ತೆರಳಿದ ಡಾ.ಅಂಜಲಿ ನಿಂಬಾಳ್ಕರ್ ಜೋಳದ ರೊಟ್ಟಿ ಮಾಡಿದರು.

ಸ್ವತಃ ಕೈಯಲ್ಲಿ ರೊಟ್ಟಿ ತಟ್ಟಿ ಒಲೆ ಮೇಲೆ ಕಾಯಿಸಿದ ಖಾನಾಪುರ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್.

ರೊಟ್ಟಿ ತಟ್ಟುತ್ತಾ 'ನನ್ನ ಅಜ್ಜಿ ರೊಟ್ಟಿ ಮಾಡಲು ಕಳಿಸಿದ್ದಳು' ಎಂದು ಅಂಜಲಿ ನಿಂಬಾಳ್ಕರ್ ಅವರು ನೆನಪಿಸಿಕೊಂಡರು.

ಸುರಪುರ ಕೆರವಾಡ ಗ್ರಾಮದಲ್ಲಿ ಜನರ ಉದ್ದೇಶಿಸಿ ಮಾತನಾಡಿದ ಅಂಜಲಿ ನಿಂಬಾಳ್ಕರ್, ಕಂದಾಯ ಗ್ರಾಮವಾಗಲು ಅವಕಾಶ ಮಾಡಿ ಕೊಟ್ಟಿದ್ದು ನಾನು, ಎಷ್ಟೋ ಜನ ನಿಮಗೆ ಆಶ್ವಾಸನೆ ಕೊಟ್ಟು ಹೋಗಿದ್ದಾರೆ, ಆದರೆ ಏನೂ ಮಾಡಿರಲಿಲ್ಲ. ಕಂದಾಯ ಗ್ರಾಮ ಆಗದಿದ್ದರೆ ನಿಮ್ಮ ಊರಿನ ಬಗ್ಗೆ ಯಾರಿಗೂ ಗೊತ್ತಾಗುತ್ತಿರಲಿಲ್ಲ ಎಂದರು.




