ಬಾಲಿವುಡ್ನ ಕ್ಯೂಟ್ ಜೋಡಿ ಎನಿಸಿಕೊಂಡ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅದ್ದೂರಿಯಾಗಿ ನಡೆದ ಅವರ ವಿವಾಹ ಸಂಭ್ರಮದ ಫೋಟೋಗಳು ವೈರಲ್ ಆಗಿವೆ.
ಮದುವೆ ಆಗಿ ಒಂದು ವಾರ ಕಳೆದ ಬಳಿಕ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತುಂಬ ಕಲರ್ಫುಲ್ ಆಗಿರುವ ಈ ಫೋಟೋಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆ ನಡೆಯಿತು. ಕೆಲವೇ ಮಂದಿಗೆ ಮಾತ್ರ ಈ ವಿವಾಹ ಸಮಾರಂಭದಲ್ಲಿ ಭಾಗಿ ಆಗುವ ಅವಕಾಶ ಸಿಕ್ಕಿತ್ತು. ಮದುವೆಯ ಕ್ಷಣಗಳು ಹೇಗಿದ್ದವು ಎಂಬುದನ್ನು ಈ ಫೋಟೋಗಳೇ ವಿವರಿಸುತ್ತಿವೆ.
ಹಿಂದಿ ಚಿತ್ರರಂಗದಲ್ಲಿ ಬಹುಬೇಡಿಕೆಯ ಕಲಾವಿದರಾಗಿ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರು ಗುರುತಿಸಿಕೊಂಡಿದ್ದಾರೆ. ಇಬ್ಬರ ಕೈಯಲ್ಲೂ ಹಲವು ಆಫರ್ಗಳಿವೆ. ಜಾಹೀರಾತು ಕ್ಷೇತ್ರದಲ್ಲೂ ಈ ಸೆಲೆಬ್ರಿಟಿ ಜೋಡಿಗೆ ಡಿಮ್ಯಾಂಡ್ ಇದೆ.
‘ಶೇರ್ಷಾ’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರು ಜೋಡಿಯಾಗಿ ನಟಿಸಿದ್ದರು. ಆ ವೇಳೆ ಇಬ್ಬರ ನಡುವೆ ಆಪ್ತತೆ ಹೆಚ್ಚಿತು. ಕಡೆಗೂ ಅವರಿಬ್ಬರ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿದೆ. ನವ ದಂಪತಿಗೆ ಪ್ಯಾನ್ಸ್ ಶುಭ ಕೋರುತ್ತಿದ್ದಾರೆ.