Updated on:Feb 25, 2022 | 3:04 PM
ತುಳಸಿ ಪುರುಷರಲ್ಲಿ ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಅಲ್ಲದೆ, ಮಹಿಳೆಯರು ಗರ್ಭಾಶಯದಲ್ಲಿ ಫಲವತ್ತಾದ ಮೊಟ್ಟೆಯನ್ನು ಹೊಂದುವ ಸಾಧ್ಯತೆ ಕಡಿಮೆ. ನೀವು ಬಂಜೆತನಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆ, ತಜ್ಞರನ್ನು ಸಂಪರ್ಕಿಸಿದ ನಂತರವೇ ತುಳಸಿಯನ್ನು ಸೇವಿಸಿ.
ತುಳಸಿಯು ಬಿಸಿ ಸ್ವಭಾವವನ್ನು ಹೊಂದಿದೆ, ಆದ್ದರಿಂದ ಗರ್ಭಿಣಿಯರು ಇದನ್ನು ಹೆಚ್ಚು ಸೇವಿಸಬಾರದು. ಯುಜೆನಾಲ್ ತುಳಸಿಯಲ್ಲಿ ಕಂಡುಬರುತ್ತದೆ, ಇದು ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗಬಹುದು. ಇದು ಗರ್ಭಪಾತದ ಅಪಾಯವನ್ನೂ ಹೆಚ್ಚಿಸಬಹುದು. ಅಂತಹ ಸಂದರ್ಭಗಳಲ್ಲಿ, ತುಳಸಿಯನ್ನು ಸೇವಿಸುವ ಮೊದಲು, ತಜ್ಞರನ್ನು ಸಂಪರ್ಕಿಸಿ.
ತುಳಸಿ ಎಲೆಗಳಲ್ಲಿ ಆರ್ಸೆನಿಕ್ ಅಂಶವಿದೆ, ಹೀಗಾಗಿ ನೇರವಾಗಿ ಹಲ್ಲುಗಳಿಂದ ಅಗೆಯಬೇಡಿ. ಇದು ಹಲ್ಲುಗಳಿಗೆ ಹಾನಿ ಮಾಡುತ್ತದೆ. ತುಳಸಿಯನ್ನು ನೀರು ಅಥವಾ ಚಹಾದಲ್ಲಿ ಕುದಿಸಿ ಸೇವಿಸಿ.
Published On - 2:49 pm, Fri, 25 February 22