ವೈಭವದಿಂದ ಜರುಗಿದ ಕೊಪ್ಪಳ ಗವಿಮಠದ ತೆಪ್ಪೋತ್ಸವ, ಗಂಗಾರತಿ

| Updated By: ವಿವೇಕ ಬಿರಾದಾರ

Updated on: Jan 13, 2025 | 7:29 AM

ಕೊಪ್ಪಳದ ಗವಿಮಠದ ವಾರ್ಷಿಕ ಜಾತ್ರೆ, ತನ್ನ ಅದ್ದೂರಿ ತೆಪ್ಪೋತ್ಸವ ಮತ್ತು ಗಂಗಾರತಿಯಿಂದ ಪ್ರಸಿದ್ಧವಾಗಿದೆ. ಲಕ್ಷಾಂತರ ಭಕ್ತರು ಈ ಜಾತ್ರೆಗೆ ಆಗಮಿಸುತ್ತಾರೆ. ಜನವರಿ 15ರಂದು ಮಹಾರಥೋತ್ಸವ ನಡೆಯಲಿದೆ. ಈ ವರ್ಷದ ಗಂಗಾರತಿ ಮತ್ತು ತೆಪ್ಪೋತ್ಸವ ಅತ್ಯಂತ ಭವ್ಯವಾಗಿ ನಡೆದಿದ್ದು, ಭಕ್ತರನ್ನು ಆಕರ್ಷಿಸಿದೆ. ಗವಿಸಿದ್ದೇಶ್ವರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಈ ಜಾತ್ರೆ ಮುಂದುವರಿಯುತ್ತದೆ.

1 / 8
ಕೊಪ್ಪಳ ನಗರದಲ್ಲಿರುವ ಸುಪ್ರಸಿದ್ದ ಗವಿಮಠ, ತನ್ನ ವೈಚಾರಿಕ, ಜನಪರ ಕೆಲಸಗಳು, ದಾಸೋಹದಿಂದ ನಾಡಿನಲ್ಲಿ ದೊಡ್ಡ ಹೆಸರು ಮಾಡಿದೆ. ಗವಿಮಠದ 11 ಪೀಠಾದಿಪತಿಯಾಗಿದ್ದ ಗವಿಸಿದ್ದೇಶ್ವರರ ಸ್ಮರಣಾರ್ಥ ಪ್ರತಿವರ್ಷ ಅದ್ದೂರಿಯಾಗಿ ಜಾತ್ರೆಯನ್ನು ನಡೆಸಲಾಗುತ್ತದೆ.

2 / 8
ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಅಂತಲೇ ಕರೆಯುತ್ತಾರೆ. ಈ ಜಾತ್ರೆಗೆ ಲಕ್ಷ ಲಕ್ಷ ಜನ ಬರುತ್ತಾರೆ. ಈ ವರ್ಷ ಜನವರಿ 15 ರಂದು ಮಹಾರಥೋತ್ಸವ ನಡೆಯಲಿದೆ.  ಅದರ ಮೊದಲ ಭಾಗವಾಗಿ ಮಠದ ಆವರಣದಲ್ಲಿರುವ ಕೆರೆಯಲ್ಲಿ ಅದ್ಧೂರಿ ತೆಪ್ಪೊತ್ಸವ ಮತ್ತು ಗಂಗಾರತಿ ನಡೆಯಿತು.

3 / 8
2017 ರಿಂದ ಮಠದಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದರೆ, ಕಳೆದ ಮೂರು ವರ್ಷಗಳಿಂದ ಕಾಶಿ ಮಾದರಿಯಲ್ಲಿ ಗಂಗಾರತಿ ನಡೆಯುತ್ತಿದೆ. ಈ ವರ್ಷವೂ ಅದ್ದೂರಿಯಾಗಿ ಗಂಗಾರತಿ ನಡೆಯಿತು. ಮಠದ ಅರ್ಚಕರ ತಂಡ, ಸರಿಸುಮಾರು ಅರ್ಧಗಂಟೆ ಕಾಲ, ಕೆರೆಯ ದಡದಲ್ಲಿ ವಾದ್ಯಘೋಷಗಳ ಜೊತೆ ಗಂಗಾರತಿ ಮಾಡುತ್ತಿದ್ದರೆ, ಕಾಶಿಯಲ್ಲಿ ಗಂಗಾರತಿ ನೋಡಿದ ಅನುಭವ ಭಕ್ತರು ಪಡೆದರು.

4 / 8
ಗಂಗಾರತಿ ನಂತರ ತೆಪ್ಪೋತ್ಸವ ಜರುಗಿತು. ಮಠದ ಗವಿಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ಅದ್ದೂರಿಯಾಗಿ ಪಲ್ಲಕ್ಕಿಯಲ್ಲಿ ತೆಗದುಕೊಂಡು ಬಂದು, ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಉತ್ಸವ ಮೂರ್ತಿಯ ತೆಪ್ಪೋತ್ಸವ ನಡೆಯಿತು. ಅಲಂಕೃತ ತೆಪ್ಪದಲ್ಲಿ ಗವಿಸಿದ್ದೇಶ್ವರರ ಉತ್ಸವ ಮೂರ್ತಿ ಸಾಗುತ್ತಿದ್ದರೆ, ಭಕ್ತರು ಗವಿಸಿದ್ದೇಶ್ವರ ಮಹರಾಜ್ ಕಿ ಜೈ, ಗವಿಸಿದ್ದೇಶ್ವರ ಪಾಹಿಮಾಮ್ ಅಂತ ಘೋಷಣೆ ಕೂಗಿ, ಭಕ್ತಿಯಿಂದ ನಮಿಸಿದರು.

5 / 8
ತಿರುಪತಿಯಲ್ಲಿ ನಡೆಯುವ ಬ್ರಹ್ಮೋತ್ಸವದಂತೆ ತಿರುಪತಿಯ ತೆಪ್ಪೋತ್ಸವ ನೋಡುವದೆ ಕಣ್ಣಿಗೆ ಹಬ್ಬ, ಮನಸಿಗೆ ಆನಂದ ಅನ್ನೋದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಹೀಗಾಗಿ ಗವಿಮಠದ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು.

6 / 8
ಗವಿಮಠದ ಇಂದಿನ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಸಮ್ಮುಖದಲ್ಲಿ ನಡೆದ ತೆಪ್ಪೋತ್ಸವವನ್ನು ನೋಡಲು ಕೊಪ್ಪಳ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಸಂಜೆ ಐದು ಗಂಟೆಯಿಂದಲೇ ಮಠಕ್ಕೆ ಭಕ್ತರ ದಂಡೆ ಆಗಮಿಸಲು ಆರಂಭವಾಗಿತ್ತು.

7 / 8
ಆರಂಭದಲ್ಲಿ ಜಾನಪದ ಹಾಡುಗಳು, ಭಕ್ತರ ಮನಸೊರೆಗೊಳಿಸಿದರೇ, ನಂತರ ರಾತ್ರಿ ಸಮಯದಲ್ಲಿ ಅದ್ದೂರಿಯಾಗಿ ನಡೆದ ತೆಪ್ಪೋತ್ಸವ ಮತ್ತು ಗಂಗಾರತಿ, ಭಕ್ತರ ಸಂಭ್ರಮ ಹೆಚ್ಚಿಸಿತು. ಗವಿಸಿದ್ದೇಶ್ವರಲ್ಲಿ ಭಕ್ತಿಯಿಂದ ಬೇಡಿಕೊಂಡರೆ, ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಸಾವಿರಾರು ಭಕ್ತರು, ತೆಪ್ಪೋತ್ಸವ ನೋಡಿ, ಗವಿಸಿದ್ದೇಶ್ವರರ ದರ್ಶನ ಪಡೆದು ಕೃತಾರ್ಥರಾದರು.

8 / 8
ಮಠದಲ್ಲಿ ಈಗಾಗಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ತೆಪ್ಪೋತ್ಸವ ಮತ್ತು ಗಂಗಾರತಿ ಅದ್ದೂರಿಯಾಗಿ ನಡೆದರೆ, ಇಂದಿನಿಂದ ಮಠದ ಆವರಣದಲ್ಲಿ ಮುತ್ತೈದಯರಿಗೆ ಉಡಿ ತುಂಬವ ಕಾರ್ಯಕ್ರಮದಿಂದ ಹಿಡಿದು ವಿವಿಧ ಕಾರ್ಯಕ್ರಮ ನಡೆಯುತ್ತವೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುವ ಈ ಜಾತ್ರೆಗೆ ಈ ವರ್ಷ ಇನ್ನೂ ಹೆಚ್ಚು ಭಕ್ತರು ಭಾಗವಹಿಸುವ ನೀರಿಕ್ಷೆ ಇದೆ.

Published On - 7:28 am, Mon, 13 January 25