ಮೊದಲ ದಿನ ನವದಂಪತಿ ಜಾತ್ರೆ: 7 ದಿನ ನಡೆಯುವ ಕೊಡಿ ಹಬ್ಬ ಜಾತ್ರೆಯ ವಿಶೇಷತೆ ಏನು?

Edited By:

Updated on: Dec 04, 2025 | 8:44 PM

ಸಪ್ತ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ರಥೋತ್ಸವ ಅನಾದಿಕಾಲದಿಂದಲೂ ಕೊಡಿ ಹಬ್ಬವೆಂದೇ ಪ್ರಸಿದ್ಧಿ. ಇದೀಗ ಈ ಕೊಡಿ ಹಬ್ಬ ಆರಂಭವಾಗಿದ್ದು, 7 ದಿನಗಳ ಕಾಲ ಬಹಳ ಅದ್ಧೂರಿಯಿಂದ ನಡೆಯುತ್ತದೆ. ಈ ಹಬ್ಬಕ್ಕೆ ಹೆಚ್ಚಾಗಿ ನವದಂಪತಿ ಆಗಮಿಸಿ ಕೋಟಿಲಿಂಗೇಶ್ವರನ ದರ್ಶನ ಪಡೆದುಕೊಳ್ಳುತ್ತಾರೆ.

1 / 6
ಕರಾವಳಿಯ ಅತಿದೊಡ್ಡ ಜಾತ್ರೆ ಆರಂಭವಾಗಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ಕೊಡಿ ಹಬ್ಬವೆಂದರೆ ಹಲವು ನಂಬಿಕೆಗಳ ಪ್ರತೀಕ. ಮದುವೆ ಆಗದವರಿಗೆ ಕೋಟಿಲಿಂಗೇಶ್ವರ ಅಭಯ ನೀಡುವ ದೇವರು. ನವದಂಪತಿಗಳಿಗೆ ಸುಖ ದಾಂಪತ್ಯದ ಕನಸು ಕಟ್ಟಿಕೊಡುವ ಕೇಂದ್ರ. ಇಲ್ಲಿನ ರಥೋತ್ಸವ ಅಂದರೆ ಅದ್ದೂರಿತನಕ್ಕೆ ಇನ್ನೊಂದು ಹೆಸರು.

2 / 6
ಹೊಸದಾಗಿ ಮದುವೆಯಾದವರಿಗೆ ತಮ್ಮ ಸುಖ ದಾಂಪತ್ಯದ ಬಗ್ಗೆ ಸಾವಿರ ಕನಸುಗಳಿರುತ್ತವೆ. ಈ  ಸನ್ನಿಧಿಯಲ್ಲಿ ದಾಂಪತ್ಯಗೀತೆ ಆರಂಭವಾದರೆ ಜೀವನ ಪೂರ್ಣ ಸುಖವಾಗಿರುತ್ತೆ ಅನ್ನೋದು ಜನರ ವಿಶ್ವಾಸ. ಹಾಗಂತಲೇ ನವ ದಂಪತಿ ಕುಂದಾಪುರದ ಕೋಟಿಲಿಂಗೇಶ್ವರ ದರ್ಶನಕ್ಕೆ ಬರುತ್ತಾರೆ.

3 / 6
ಕೊಡಿ ಹಬ್ಬ ಕರಾವಳಿ-ಮಲೆನಾಡು ಭಾಗದ ಅತಿದೊಡ್ಡ ಹಬ್ಬ. 7 ದಿನಗಳ ಕಾಲ ನಡೆಯುವ ಈ ರಥೋತ್ಸವದಲ್ಲಿ ಮೊದಲ ದಿನ ನವದಂಪತಿಗಳ ಜಾತ್ರೆ ನಡೆಯುತ್ತೆ. ಹೊಸದಾಗಿ ಮದುವೆಯಾದ ದಂಪತಿ ಕೈಕೈಹಿಡಿದು ಬಂದು, ನೂರಾರು ಹರಕೆ ಹೊತ್ತು ದೇವರಿಗೆ ಕೈ ಮುಗಿಯುತ್ತಾರೆ. ಪುಷ್ಕರಣಿಗೆ ಪ್ರದಕ್ಷಿಣೆ ಹಾಕಿ ಸುತ್ತಲೂ ಅಕ್ಕಿ ಚೆಲ್ಲಿ ಹರಕೆ ತೀರಿಸುತ್ತಾರೆ. ಆ ಮೂಲಕ ಹೊಸ ಜೀವನ ಆರಂಭಿಸುತ್ತಾರೆ.

4 / 6
ಸಂತಾನದ ಆಸೆ ಹೊತ್ತವರೇ ಹೆಚ್ಚು ಸಂಖ್ಯೆಯಲ್ಲಿ ಬರೋದ್ರಿಂದ ಇದನ್ನು ಕೊಡಿ ಹಬ್ಬ ಎಂದಲೂ ಕರೆಯಲಾಗುತ್ತದೆ. ಜಾತ್ರೆಗೆ ಬಂದವರೆಲ್ಲಾ ಕಬ್ಬಿನ ಜಲ್ಲೆ ತೆಗೆದುಕೊಂಡು ಹೋಗುವುದು ಇಲ್ಲಿನ ಪದ್ಧತಿ. ಕಬ್ಬಿನ ಜಲ್ಲೆಯ ಕೊಡಿ ತೆಗೆದುಕೊಂಡು ಹೋಗುವುದರಿಂದ ಇದನ್ನು ಕೊಡಿ ಹಬ್ಬವೆಂದು ಕರೆಯಲಾಗುತ್ತೆ.

5 / 6
ಗಾತ್ರದಲ್ಲಿ ಅತಿದೊಡ್ಡದೆನಿಸಿದ ಬ್ರಹ್ಮರಥವನ್ನು ಭಕ್ತರೆಲ್ಲಾ ಸೇರಿ ಎಳೆಯುತ್ತಾರೆ. ಇಲ್ಲಿ ಶಿವ ಕೋಟಿ ಲಿಂಗ ಸ್ವರೂಪದಲ್ಲಿ ನೆಲೆ ನಿಂತಿದ್ದಾನೆ ಎನ್ನುವುದು ಜನರ ನಂಬಿಕೆ. ಗ್ರಾಮೀಣ ಜನರು ಕೊಡಿ ಹಬ್ಬಕ್ಕಾಗಿ ವರ್ಷವೆಲ್ಲಾ ಕಾಯ್ತಾರೆ. 7 ದಿನದ ಜಾತ್ರೆಯಲ್ಲಿ ನಿತ್ಯ ಪಾಲ್ಗೊಂಡು ಸಂಭ್ರಮಿಸುತ್ತಾರೆ.

6 / 6
ಗ್ರಾಮೀಣ ಜನರ ಬದುಕಿನಲ್ಲಿ ಕೊಡಿ ಹಬ್ಬ ಅವಿನಾಭಾವ ಸ್ಥಾನ ಪಡೆದಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಹಬ್ಬದ ವೈಭವ ಹೆಚ್ಚುತ್ತಿದೆ.