Updated on: Aug 17, 2022 | 6:35 PM
ನಟಿ ಕೃತಿ ಶೆಟ್ಟಿ ಅವರು ಸಖತ್ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ ‘ಉಪ್ಪೇನಾ’. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿತು. ಇದರಿಂದ ಅವರ ಜನಪ್ರಿಯತೆ ಹೆಚ್ಚಿತು.
ಆ ಬಳಿಕ ತೆರೆಗೆ ಬಂದ ‘ಶ್ಯಾಮ್ ಸಿಂಗ ರಾಯ್’ ಕೂಡ ಹಿಟ್ ಆಯಿತು. ನಾನಿ ನಟನೆಯ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತು. ‘ಶ್ಯಾಮ್ ಸಿಂಗ ರಾಯ್ಗೂ’ ಸಕ್ಸಸ್ ಸಿನಿಮಾ ಎಂಬ ಲೇಬಲ್ ಸಿಕ್ಕಿತು. ಹೀಗಾಗಿ ಅವರಿಗೆ ಬೇಡಿಕೆ ಹೆಚ್ಚಿದೆ.
ಇತ್ತೀಚೆಗೆ ತೆರೆಗೆ ಬಂದ ‘ದಿ ವಾರಿಯರ್’ ಸಿನಿಮಾ ಸೋತಿದೆ. ಆದರೆ, ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಹಲವು ಆಫರ್ಗಳು ಅವರನ್ನು ಹುಡುಕಿ ಬರುತ್ತಿವೆ.
ಈಗ ಕೃತಿ ಶೆಟ್ಟಿ ಅವರು ಸೀರೆ ಉಟ್ಟ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಸಾಕಷ್ಟು ಲೈಕ್ಸ್ ಬರುತ್ತಿದೆ.
ಕೃತಿ ಶೆಟ್ಟಿ