
ಮಳೆಯನ್ನು ಎಂಜಾಯ್ ಮಾಡಬೇಕು ಅನ್ನೋದು ಅನೇಕರ ಆಸೆ. ಈ ಆಸೆಯನ್ನು ಕೃತಿ ಶೆಟ್ಟಿ ಅವರು ಈಡೇರಿಸಿಕೊಂಡಿದ್ದಾರೆ. ಮಳೆಯಲ್ಲಿ ನೆನೆದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೃತಿ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಈಗ ಕೃತಿ ಶೆಟ್ಟಿ ಅವರು ಪಿಂಕ್ ಬಣ್ಣದ ಬಟ್ಟೆ ಧರಿಸಿ ಮಳೆಯಲ್ಲಿ ನೆನೆದಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ಕೃತಿ ಶೆಟ್ಟಿ ಅವರು ‘ಉಪ್ಪೇನಾ’ ಸಿನಿಮಾ ಮೂಲಕ ನಾಯಕಿ ಆದರು. ಈ ಸಿನಿಮಾ ಮೂಲಕ ಅವರು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು.

‘ಶ್ಯಾಮ ಸಿಂಘ ರಾಯ್’ ಚಿತ್ರ ಕೂಡ ಕೃತಿ ಶೆಟ್ಟಿ ಅವರ ಜನಪ್ರಿಯತೆ ಹೆಚ್ಚಿಸಿತು. ಹಲವು ಸಿನಿಮಾ ಕೆಲಸಗಳಲ್ಲಿ ಕೃತಿ ತೊಡಗಿಕೊಂಡಿದ್ದಾರೆ.

ಕೃತಿ ಶೆಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರ ಜನಪ್ರಿಯತೆ ದಿನಕಳೆದಂತೆ ಹೆಚ್ಚುತ್ತಲೇ ಇದೆ.

ವೈರಲ್ ಆಗುತ್ತಿದೆ ಕೃತಿ ಶೆಟ್ಟಿ ಫೋಟೋಸ್