
ಕೃತಿ ಶೆಟ್ಟಿ ನಟಿಸಿರುವ ಕೆಲವೇ ಸಿನಿಮಾಗಳು ಈವರೆಗೆ ಬಿಡುಗಡೆ ಆಗಿವೆ, ಅವುಗಳಲ್ಲಿ ಹಿಟ್ ಆಗಿರುವುದು ಸಹ ಕಡಿಮೆಯೇ.

ಆದರೆ ಕೃತಿ ಶೆಟ್ಟಿ ಅತಿ ಹೆಚ್ಚು ಸಂಭಾವನೆ ಪಡೆಯುವ ಯುವನಟಿಯರಲ್ಲಿ ಒಬ್ಬರು. ವಾರಗೆಯ ನಟಿಯರಿಗಿಂತಲೂ ಹೆಚ್ಚಂತೆ ಕೃತಿಯ ಸಂಭಾವನೆ.

ಕೃತಿ ಶೆಟ್ಟಿ ಪ್ರತಿ ಸಿನಿಮಾಕ್ಕೆ ಎರಡು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಸಮಂತಾ ಅಂಥಹಾ ನಟಿಯರು ಸಹ ಮೂರು ಅಥವಾ ನಾಲ್ಕು ಕೋಟಿಯಷ್ಟೆ ಸಂಭಾವನೆ ಪಡೆಯುತ್ತಿದ್ದಾರೆ.

ವಾರಗೆಯ ನಟಿಯರಾದ ಶ್ರೀಲೀಲಾ ಹಾಗೂ ಇತರೆ ಕೆಲವು ಯುವನಟಿಯರಿಗಿಂತಲೂ ಕೃತಿಯ ಸಂಭಾವನೆ ಹೆಚ್ಚೆನ್ನಲಾಗುತ್ತಿದೆ.

ಕೃತಿ ಶೆಟ್ಟಿ ಮೂಲತಃ ಮಂಗಳೂರಿನ ಮೂಲದವರೇ, ಆದರೆ ಬೆಳೆದಿದ್ದು, ಕಲಿತದ್ದೆಲ್ಲ ಮುಂಬೈನಲ್ಲಿ.

ಬಾಲನಟಿಯಾಗಿ ಸಿನಿಮಾಕ್ಕೆ ಎಂಟ್ರಿ ನೀಡಿ, 'ಉಪ್ಪೆನ' ತೆಲುಗು ಸಿನಿಮಾ ಮೂಲಕ ನಾಯಕಿಯಾಗಿದ್ದಾರೆ. ಈಗ ತೆಲುಗಿನ ಬೇಡಿಕೆಯ ಯುವನಟಿಯರಲ್ಲಿ ಒಬ್ಬರು.