ಬಾಲಿವುಡ್ ಬೆಡಗಿ ಕೃತಿ ಸನೋನ್ ಈಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
‘ಮಿಮಿ’ ಖ್ಯಾತಿಯ ಈ ನಟಿ ಹಲವು ಖ್ಯಾತ ತಾರೆಯರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ.
ಅಕ್ಷಯ್ ಕುಮಾರ್ ಅಭಿನಯದ ‘ಬಚ್ಚನ್ ಪಾಂಡೆ’ ಚಿತ್ರಕ್ಕೆ ಕೃತಿ ಸನೋನ್ ನಾಯಕಿ.
ಪ್ರಭಾಸ್ ನಟನೆಯ ‘ಆದಿಪುರುಷ್’ ಮೂಲಕ ಪ್ಯಾನ್ ಇಂಡಿಯಾ ನಾಯಕಿಯಾಗಿ ಕೃತಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಆದಿಪುರುಷ್ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.
ಟೈಗರ್ ಶ್ರಾಫ್ ಅಭಿನಯದ ‘ಗಣಪತ್’ಗೂ ಕೃತಿ ಸನೋನ್ ನಾಯಕಿ.
ವರುಣ್ ಧವನ್ ನಟನೆಯ ‘ಭೇಡಿಯಾ’, ಕಾರ್ತಿಕ್ ಆರ್ಯನ್ ನಟನೆಯ ‘ಶೆಹ್ಜಾದಾ’ ಚಿತ್ರಗಳು ಕೃತಿ ಬತ್ತಳಿಕೆಯಲ್ಲಿವೆ.
Published On - 3:14 pm, Thu, 10 February 22