ಸರ್ಕಾರಿ ಶಾಲೆಯಿಂದ ಮುಖ್ಯಮಂತ್ರಿ ಕಚೇರಿವರೆಗಿನ ಜರ್ನಿಯ ಮೆಲುಕು ಹಾಕಿದ ಕೆವಿ ಪ್ರಭಾಕರ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 22, 2024 | 4:58 PM

ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಇಂದು(ಫೆ.22) ತಾನು ಓದಿದ ಕೋಲಾರ ನಗರದ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಮಕ್ಕಳೊಂದಿಗೆ ಕುಳಿತು ಪಾಠ ಆಲಿಸಿ ಕೆಲಕಾಲ ಶಾಲೆಯ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ 130 ವರ್ಷಗಳ ಹಳೆ ಕಟ್ಟಡ ಹಾಗೂ ಶಾಲೆಗೆ ಕಾಯಕಲ್ಪ ನೀಡುವುದಾಗಿ ತಿಳಿಸಿದರು.

1 / 6
ತಾನು ಓದಿದ ಕೋಲಾರ ನಗರದ ಸರ್ಕಾರಿ ಶಾಲೆಗೆ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭೇಟಿ ನೀಡಿ, ಮಕ್ಕಳೊಂದಿಗೆ ಕುಳಿತು ಪಾಠ ಆಲಿಸಿ ಕೆಲಕಾಲ ಶಾಲೆಯ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ 130 ವರ್ಷಗಳ ಹಳೆ ಕಟ್ಟಡ ಹಾಗೂ ಶಾಲೆಗೆ ಕಾಯಕಲ್ಪ ನೀಡುವುದಾಗಿ ತಿಳಿಸಿದರು.

2 / 6
 ನವೀಕರಣದ ಅಗತ್ಯವಿದ್ದು, ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದರಿಂದ ಇಲ್ಲೊಂದು ಸುಂದರ ಆಡಿಟೋರಿಯಂ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದರು.

3 / 6
ಅಲ್ಲದೆ ಅಗತ್ಯವಾಗಿರುವ ಸೌಲಭ್ಯಗಳ ಪಟ್ಟಿ ಕೊಟ್ಟರೆ, ಮುಖ್ಯಮಂತ್ರಿಗಳ ಸಹಕಾರದೊಂದಿಗೆ ಸಿಎಸ್‌ಆರ್ ನಿಧಿ ಪಡೆದು ನಾ ಓದಿದ ಶಾಲೆಗಳಾದ ಬಾಲಕರ ಜೂನಿಯರ್ ಕಾಲೇಜು ಹಾಗೂ ಹಳೆ ಮಾಧ್ಯಮಿಕ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಅವರು ಶಿಕ್ಷಕರಿಗೆ ಭರವಸೆ ನೀಡಿದರು.

4 / 6
ಇನ್ನು ಕೋಲಾರದಲ್ಲಿ ತಾವು ಪ್ರಾಥಮಿಕ ಶಿಕ್ಷಣ ಪಡೆದ ನಗರದ ಬಿಇಒ ಕಚೇರಿ ಆವರಣದಲ್ಲಿರುವ ಹಳೆ ಮಾಧ್ಯಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗ ತಾನು ಕೂರುತ್ತಿದ್ದ ಡೆಸ್ಟ್ ಮೇಲೆಯೇ ಮಕ್ಕಳೊಂದಿಗೆ ಕುಳಿತು ಪಾಠ ಆಲಿಸಿ ಗಮನಸೆಳೆದರು.

5 / 6
ಪ್ರಾಂಶುಪಾಲರ ಮನವಿಗೆ ಸ್ಪಂದಿಸಿದ ಪ್ರಭಾಕರ್, ‘ಕೂಡಲೇ ಈ ಕುರಿತು ಅಗತ್ಯ ಪ್ರಸ್ತಾವನೆ ನನಗೆ ಕಳುಹಿಸಿದರೆ ಕೂಡಲೇ ಅಗತ್ಯ ಅನುದಾನ ಒದಗಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿ, ನಾನು ಓದಿದ ಶಾಲೆಗೆ ಏನಾದರೂ ಮಾಡುವ ಆಸೆ ಇದೆ, ಅದಕ್ಕೆ ಅವಕಾಶ ಮಾಡಿಕೊಡಿ ಎಂದು ಕೋರಿದರು.

6 / 6
150 ವರ್ಷಗಳ ಹಳೆಯ ಕಟ್ಟಡ ಪಿಯು ಕಾಲೇಜಿಗೂ ಭೇಟಿ ನೀಡಿ ನವೀಕರಣ ಅಥವಾ ಸುಂದರ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲು ಮನವಿ ಮಾಡಿದರು. ನಂತರ ತಾವು ಓದಿದ ನಗರದ ಬಾಲಕರ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಪ್ರಾಂಶುಪಾಲ ಪರುಶುರಾಮ್ ಅವರನ್ನ ಭೇಟಿಯಾದರು.