ಮಹಾರಾಷ್ಟ್ರದಲ್ಲಿ ‘ಲಖ್ಪತಿ ದೀದಿ ಸಮ್ಮೇಳನ’: ಪ್ರಧಾನಿ ಮೋದಿಗೆ ನಾರಿ ಶಕ್ತಿ ಆಶೀರ್ವಾದ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಜಲಗಾಂವ್ನಲ್ಲಿ ನಡೆದ ಲಖ್ಪತಿ ದೀದಿ ಸಮ್ಮೇಳನಲ್ಲಿ ಭಾಗಿಯಾಗಿದ್ದರು. ಈ ಯೋಜನೆಯು ಮಹಿಳೆಯರ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಭವಿಷ್ಯದ ಪೀಳಿಗೆಯನ್ನು ಸಬಲೀಕರಣಗೊಳಿಸುವುದು. ನಾನು ಮಹಿಳಾ ಶಕ್ತಿಯಿಂದ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದ್ದಾರೆ.
1 / 7
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ಜಲಗಾಂವ್ನಲ್ಲಿ ನಡೆದ ಲಖ್ಪತಿ ದೀದಿ ಸಮ್ಮೇಳನಲ್ಲಿ ಭಾಗಿಯಾಗಿದ್ದರು. ಈ ವೇಳೆ 11 ಲಕ್ಷ ಹೊಸ ಲಖ್ಪತಿ ದೀದಿಗಳಿಗೆ ಸನ್ಮಾನಿಸಿ ಪ್ರಮಾಣ ಪತ್ರ ವಿತರಣೆ ಮಾಡಲಾಗಿದೆ.
2 / 7
ಪ್ರಧಾನಿ ಮೋದಿ ದೇಶಾದ್ಯಂತದ ಲಖ್ಪತಿ ದೀದಿಗಳೊಂದಿಗೆ ಸಂವಾದ ಮಾಡಿದ್ದಾರೆ.
3 / 7
ಲಖ್ಪತಿ ದೀದಿ ಯೋಜನೆಯು ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಒಂದು ಕೋಟಿ ಮಹಿಳೆಯರು ಒಳಗೊಂಡಿದ್ದಾರೆ. ಆದರೆ ಸರ್ಕಾರವು ಮೂರು ಕೋಟಿ ಲಖ್ಪತಿ ದೀದಿಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ.
4 / 7
ಲಖ್ಪತಿ ದೀದಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು 2,500 ಕೋಟಿ ರೂ. ನಿಧಿಯನ್ನು ಬಿಡುಗಡೆ ಮಾಡಿದರು. ಇದರಿಂದ 4.3 ಲಕ್ಷ ಸ್ವ-ಸಹಾಯ ಗುಂಪುಗಳ ಸುಮಾರು 48 ಲಕ್ಷ ಸದಸ್ಯರಿಗೆ ಪ್ರಯೋಜನವಾಗಲಿದೆ. ಇದಲ್ಲದೆ 2.35 ಲಕ್ಷ ಸ್ವಸಹಾಯ ಗುಂಪುಗಳ 25.8 ಲಕ್ಷ ಸದಸ್ಯರಿಗೆ 5,000 ಕೋಟಿ ರೂ.ಗಳ ಬ್ಯಾಂಕ್ ಸಾಲವನ್ನು ಬಿಡುಗಡೆ ಮಾಡಿದ್ದಾರೆ.
5 / 7
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನನ್ನ ಎಲ್ಲಾ ಸಹೋದರಿಯರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇಲ್ಲಿಂದ ದೇಶಾದ್ಯಂತ ಸಹೋದರಿಯರಿಗೆ ಹಣ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಲಾಗಿರುವ ಹಣವು ಸಾಕಷ್ಟು ಸಹೋದರಿಯರನ್ನು ಲಕ್ಷಾಧಿಪತಿಗಳನ್ನಾಗಿಸಲು ನೆರವಾಗಲಿದೆ.
6 / 7
ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲೆಂಡ್‌ನ ಸಾವಿರಾರು ತಾಯಂದಿರು ಮತ್ತು ಮಕ್ಕಳಿಗೆ ಕೊಲ್ಹಾಪುರದ ರಾಜಮನೆತನವು ಆಶ್ರಯ ನೀಡಿತ್ತು ಎಂದು ನಿಮ್ಮಲ್ಲಿ ಕೆಲವರಿಗೆ ಗೊತ್ತಿದೆ. ಅಲ್ಲಿನ ಮಹಾರಾಷ್ಟ್ರದವರ ಹೊಗಳಿಕೆಯನ್ನು ಕೇಳುತ್ತಿದ್ದರೆ ನನಗೆ ಹೆಮ್ಮೆ ಆಗುತ್ತದೆ. ಮಹಾರಾಷ್ಟ್ರವನ್ನು ಈ ರೀತಿ ಅಭಿವೃದ್ಧಿಪಡಿಸುವ ಮೂಲಕ ಇಡೀ ವಿಶ್ವದಲ್ಲಿ ರಾಜ್ಯದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಏರಿಸಬೇಕಿದೆ ಎಂದಿದ್ದಾರೆ.
7 / 7
ಪ್ರಧಾನಿ ಮೋದಿ ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಮಹಿಳಾ ವೈದ್ಯ ಮತ್ತು ಬದ್ಲಾಪುರದಲ್ಲಿ ಹೆಣ್ಣುಮಕ್ಕಳ ಲೈಂಗಿಕ ಶೋಷಣೆ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ಘಟನೆಗಳ ಬಗ್ಗೆ ಪ್ರಸ್ತಾಪಸಿದ್ದಾರೆ. ಇಂದು ದೇಶದ ಪ್ರತಿಯೊಂದು ರಾಜ್ಯವು ತನ್ನ ಹೆಣ್ಣುಮಕ್ಕಳ ನೋವು ಮತ್ತು ಕೋಪವನ್ನು ಅರ್ಥಮಾಡಿಕೊಳ್ಳುತ್ತಿದೆ ಎಂದಿದ್ದಾರೆ.