ಟೀಂ ಇಂಡಿಯಾದಲ್ಲಿ ಅವಕಾಶ ಸಿಗದೆ ಯುಎಸ್​ಎ ತಂಡ ಸೇರಿಕೊಂಡ ಐವರು ಭಾರತೀಯರು

ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬೇಕು ಎಂಬುದು ಪ್ರತಿಯೊಬ್ಬ ಭಾರತೀಯ ಕ್ರಿಕೆಟಿಗನ ಕನಸಾಗಿರುತ್ತದೆ. ಆದರೆ ಅಧಿಕ ಪೈಪೋಟಿಯಿಂದಾಗಿಯೋ ಅಥವಾ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದೆ ವಿಫಲರಾಗಿಯೋ ಅನೇಕ ಕ್ರಿಕೆಟಿಗರು ದೇಶವನ್ನು ತೊರೆದು ವಿದೇಶಿ ತಂಡಗಳ ಪರ ಕಣಕ್ಕಿಳಿಯುತ್ತಿದ್ದಾರೆ.

|

Updated on: Aug 25, 2024 | 4:54 PM

1 / 7
ಹೀಗೆ ಅವಕಾಶ ವಂಚಿತರಾಗಿಯೋ ಅಥವಾ ಇನ್ನ್ಯಾವುದೋ ಕಾರಣದಿಂದಾಗಿಯೋ ಭಾರತವನ್ನು ತೊರೆದು ವಿದೇಶಿ ತಂಡಗಳನ್ನು ಸೇರಿಕೊಂಡಿರುವ ಕೆಲವು ಆಟಗಾರರು ಆ ತಂಡದ ನಾಯಕರೂ ಆಗಿದ್ದಾರೆ. ಇದರಲ್ಲಿ ಈಗ ತಾನೇ ಕ್ರಿಕೆಟ್​ ಲೋಕದಲ್ಲಿ ಕಣ್ತೇರೆಯುತ್ತಿರುವ ಅಮೆರಿಕ, ನೆದರ್ಲ್ಯಾಂಡ್ಸ್ ಹಾಗೂ ಕೆನಡಾ ತಂಡಗಳಲ್ಲಿ ಭಾರತೀಯ ಮೂಲದ ಆಟಗಾರರ ಪಾರುಪತ್ಯ ಹೆಚ್ಚಿದೆ. ಅಂತಹ ಐವರು ಆಟಗಾರರ ಬಗ್ಗೆ ವಿವರ ಇಲ್ಲಿದೆ.

2 / 7
ಮೊನಾಂಕ್ ಪಟೇಲ್: 1993 ರಲ್ಲಿ ಗುಜರಾತ್‌ನ ಜನಿಸಿದ ಮೊನಾಂಕ್ ಪಟೇಲ್, ಗುಜರಾತ್ ಪರ ಅಂಡರ್-16 ಮತ್ತು ಅಂಡರ್-18 ಕ್ರಿಕೆಟ್ ಆಡಿದ್ದಾರೆ. ಆದರೆ 2010 ರಲ್ಲಿ ಯುಎಸ್‌ಎಗೆ ತೆರಳಿದ ಅವರು ಇದೀಗ ಯುಎಸ್‌ಎ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲ್ಲದೆ ನಾಯಕರೂ ಆಗಿದ್ದಾರೆ. ಇದೀಗ ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಮೊನಾಂಕ್ ಅಮೆರಿಕ ತಂಡವನ್ನು ಮುನ್ನಡೆಸುತ್ತಿದ್ದಾರೆ.

3 / 7
ಹರ್ಮೀತ್ ಸಿಂಗ್: ಮುಂಬೈನಲ್ಲಿ ಜನಿಸಿದ ಹರ್ಮೀತ್ ಸಿಂಗ್, 2012 ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದಿದ್ದ ಭಾರತ ತಂಡದ ಭಾಗವಾಗಿದ್ದರು. ಶಾಲೆಯಲ್ಲಿ ರೋಹಿತ್ ಶರ್ಮಾ ಅವರ ಜೂನಿಯರ್ ಆಗಿದ್ದ ಹರ್ಮೀತ್ ಸಿಂಗ್ ಅವಕಾಶ ಸಿಗದ ಕಾರಣ ಭಾರತವನ್ನು ತೊರೆದು, ಯುಎಸ್ಎ ತಂಡವನ್ನು ಸೇರಿಕೊಂಡಿದ್ದರು. ಇದೀಗ ಯುಎಸ್ಎ ತಂಡದಲ್ಲಿ ವೇಗದ ಬೌಲರ್ ಆಗಿರುವ ಹರ್ಮೀತ್, ಪ್ರಸ್ತುತ ನೆದರ್ಲ್ಯಾಂಡ್ಸ್ನಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಆಡುತ್ತಿದ್ದಾರೆ.

4 / 7
ಅಭಿಷೇಕ್ ಪರಾಡ್ಕರ್: ಹೈದರಾಬಾದ್ ಪರ ಕ್ರಿಕೆಟ್ ವೃತ್ತಿಜೀವನ ಆರಂಭಿಸಿದ್ದ ಅಭಿಷೇಕ್ ಈಗ ಯುಎಸ್ಎ ತಂಡದ ವೇಗದ ಬೌಲರ್ ಆಗಿದ್ದಾರೆ. ಸದ್ಯ ನೆದರ್ಲೆಂಡ್ಸ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲೂ ಆಡುತ್ತಿದ್ದಾರೆ.

5 / 7
ಉತ್ಕರ್ಷ್ ಶ್ರೀವಾಸ್ತವ: ಲಕ್ನೋದಲ್ಲಿ ಜನಿಸಿದ್ದ ಉತ್ಕರ್ಷ್ ಶ್ರೀವಾಸ್ತವ ಅವರ ಕುಟುಂಬ ಯುಎಸ್​ಎನಲ್ಲಿ ನೆಲೆನಿಂತ ಕಾರಣದಿಂದಾಗಿ ಯುಎಸ್​ಎ ಪರ ಕ್ರಿಕೆಟ್​ ಲೋಕಕ್ಕೆ ಕಾಲಿಟ್ಟರು. ಉತ್ಕರ್ಷ್ ಅವರ ತಂದೆ ಭಾವುಕ್ ಶ್ರೀವಾಸ್ತವ ಯುಎಸ್ಎನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಕಾರಣ 2016 ರಲ್ಲಿ ದೇಶವನ್ನು ತೊರೆದು ಅಮೆರಿಕದಲ್ಲಿ ವಾಸಿಸಲು ಆರಂಭಿಸಿದರು. ಹೀಗಾಗಿ ಉತ್ಕರ್ಷ್ ಕೂಡ ಅಮೆರಿಕದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದಲ್ಲದೆ ಯುಎಸ್​ಎ ಪರ  19 ವರ್ಷದೊಳಗಿನ ಕ್ರಿಕೆಟ್ ಕೂಡ ಆಡಿದ್ದಾರೆ.

6 / 7
ಜಸ್ದೀಪ್ ಸಿಂಗ್: ವೇಗದ ಬೌಲರ್ ಜಸ್ದೀಪ್ ಸಿಂಗ್ ಅಮೆರಿದ ನ್ಯೂಯಾರ್ಕ್‌ನಲ್ಲಿ ಜನಿಸಿದರಾದರೂ ಅವರು 3 ವರ್ಷದವರಿದ್ದಾಗ ಅವರ ಕುಟುಂಬ ಪಂಜಾಬ್​ಗೆ ಬಂದು ನೆಲೆಸಿತು.  ಆದರೆ, 10 ವರ್ಷಗಳ ನಂತರ, ಜಸ್ದೀಪ್ ತಮ್ಮ 13 ನೇ ವಯಸ್ಸಿನಲ್ಲಿ ಮತ್ತೆ ಯುಎಸ್ಎಗೆ ಹೋಗಿ ಅಲ್ಲಿ ತಮ್ಮ ಕ್ರಿಕೆಟ್ ಬದುಕನ್ನು ಆರಂಭಿಸಿದರು. ಪ್ರಸ್ತುತ ಅವರು ನೆದರ್ಲ್ಯಾಂಡ್ಸ್ನಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಯುಎಸ್ಎ ಪರ ಆಡುತ್ತಿದ್ದಾರೆ.

7 / 7
Follow us