37ನೇ ವಯಸ್ಸಿನಲ್ಲಿ ಶತಕ ಸಿಡಿಸಿ 5 ಭರ್ಜರಿ ದಾಖಲೆ ಬರೆದ ಮುಶ್ಫಿಕುರ್ ರಹೀಮ್

Mushfiqur Rahim Records: ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್​ನಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮುಶ್ಫಿಕುರ್ ರಹೀಮ್ 341 ಎಸೆತಗಳನ್ನು ಎದುರಿಸಿದ್ದರು. ಈ ವೇಳೆ 1 ಸಿಕ್ಸ್ ಹಾಗೂ 22 ಫೋರ್​ಗಳೊಂದಿಗೆ 191 ರನ್ ಬಾರಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ 37 ವರ್ಷದ ಮುಶ್ಫಿಕುರ್ ಹಲವು ರೆಕಾರ್ಡ್​ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

|

Updated on: Aug 25, 2024 | 1:30 PM

ರಾವಲ್ಪಿಂಡಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ್ ಬ್ಯಾಟರ್ ಮುಶ್ಫಿಕುರ್ ರಹೀಮ್ 191 ರನ್​ ಬಾರಿಸಿ ಮಿಂಚಿದ್ದರು. ಈ ಭರ್ಜರಿ ಶತಕದೊಂದಿಗೆ ಬಾಂಗ್ಲಾ ವಿಕೆಟ್ ಕೀಪರ್ ಬ್ಯಾಟರ್ ಟೆಸ್ಟ್​ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

1 / 6
ಗರಿಷ್ಠ ಸ್ಕೋರ್: ಪಾಕಿಸ್ತಾನದಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಬಾಂಗ್ಲಾದೇಶ್ ಬ್ಯಾಟರ್ ಎಂಬ ದಾಖಲೆ ಮುಶ್ಫಿಕುರ್ ರಹೀಮ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ 2003 ರಲ್ಲಿ 119 ರನ್ ಬಾರಿಸಿದ ಜಾವೇದ್ ಒಮರ್ ಹೆಸರಿನಲ್ಲಿತ್ತು. ಇದೀಗ 191 ರನ್​ಗಳೊಂದಿಗೆ ಮುಶ್ಫಿಕುರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

2 / 6
ವಿದೇಶದಲ್ಲಿ ಅತ್ಯಧಿಕ ಸೆಂಚುರಿ: ವಿದೇಶಿ ಟೆಸ್ಟ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬಾಂಗ್ಲಾ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಮುಶ್ಫಿಕುರ್ ರಹೀಮ್ ಪಾತ್ರರಾಗಿದ್ದಾರೆ. ಈ ಹಿಂದೆ ತಮೀಮ್ ಇಕ್ಬಾಲ್ ವಿದೇಶದಲ್ಲಿ 4 ಶತಕಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 5ನೇ ಸೆಂಚುರಿ ಸಿಡಿಸುವ ಮೂಲಕ ಮುಶ್ಫಿಕುರ್ ರಹೀಮ್ ಹೊಸ ದಾಖಲೆ ಬರೆದಿದ್ದಾರೆ.

3 / 6
ಅತ್ಯಂತ ಹಿರಿಯ ಆಟಗಾರ: ಟೆಸ್ಟ್​ನಲ್ಲಿ ಶತಕ ಬಾರಿಸಿದ ಬಾಂಗ್ಲಾದೇಶದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆ ಕೂಡ ಮುಶ್ಫಿಕುರ್ ರಹೀಮ್ ಪಾಲಾಗಿದೆ. ಇದಕ್ಕೂ ಮುನ್ನ ಈ ರೆಕಾರ್ಡ್ ಮಹಮದುಲ್ಲಾ ಹೆಸರಿನಲ್ಲಿತ್ತು. 2021 ರಲ್ಲಿ 35 ವರ್ಷದ ಮಹಮದುಲ್ಲಾ ಝಿಂಬಾಬ್ವೆ ವಿರುದ್ಧ ಶತಕ ಬಾರಿಸಿ ಈ ದಾಖಲೆ ಬರೆದಿದ್ದರು. ಇದೀಗ 37ನೇ ವಯಸ್ಸಿನಲ್ಲಿ ಸೆಂಚುರಿ ಸಿಡಿಸಿ ಮುಶ್ಫಿಕುರ್ ರಹೀಮ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

4 / 6
ಅತ್ಯಧಿಕ ಶತಕ: ಟೆಸ್ಟ್​ನಲ್ಲಿ ಬಾಂಗ್ಲಾದೇಶ್ ಪರ ಅತ್ಯಧಿಕ ಶತಕ ಬಾರಿಸಿದ 2ನೇ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಮುಶ್ಪಿಕುರ್ ರಹೀಮ್ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 12 ಶತಕ ಬಾರಿಸಿದ ಮೊಮಿನುಲ್ ಹಕ್ ಮೊದಲ ಸ್ಥಾನದಲ್ಲಿದ್ದರೆ, ಇದೀಗ 11 ಶತಕಗಳೊಂದಿಗೆ ಮುಶ್ಪಿಕುರ್ ದ್ವಿತೀಯ ಸ್ಥಾನಕ್ಕೇರಿದ್ದಾರೆ.

5 / 6
ಅತ್ಯಧಿಕ ಸ್ಕೋರ್: ಪಾಕಿಸ್ತಾನ್ ವಿರುದ್ಧ ಟೆಸ್ಟ್​ನಲ್ಲಿ ಗರಿಷ್ಠ ಸ್ಕೋರ್​ಗಳಿಸಿದ 2ನೇ ಬಾಂಗ್ಲಾದೇಶ್ ಬ್ಯಾಟರ್ ಎಂಬ ಹಿರಿಮೆಗೂ ಮುಶ್ಪಿಕುರ್ ರಹೀಮ್ ಪಾತ್ರರಾಗಿದ್ದಾರೆ. 2015 ರಲ್ಲಿ ಬಾಂಗ್ಲಾದಲ್ಲಿ ನಡೆದ ಟೆಸ್ಟ್​ನಲ್ಲಿ 206 ರನ್ ಬಾರಿಸಿದ ತಮೀಮ್ ಇಕ್ಬಾಲ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಇದೀಗ 191 ರನ್​ಗಳೊಂದಿಗೆ ಮುಶ್ಫಿಕುರ್ ದ್ವಿತೀಯ ಸ್ಥಾನಕ್ಕೇರಿದ್ದಾರೆ.

6 / 6
Follow us