ನಟನ ಮಗಳಿಗೂ ತಪ್ಪಿಲ್ಲ ಕಾಸ್ಟಿಂಗ್ ಕೌಚ್; ಭಯಾನಕ ಸತ್ಯ ಬಿಚ್ಚಿಟ್ಟ ನಟಿ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Mar 09, 2022 | 5:10 PM
ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳಾದರೆ ಚಿತ್ರರಂಗದಲ್ಲಿ ಅವಕಾಶಗಳು ಸುಲಭವಾಗಿ ಸಿಗುತ್ತವೆ. ನಿರ್ಮಾಪಕರು ಸ್ಟಾರ್ ಕಿಡ್ಗಳ ಸಿನಿಮಾ ನಿರ್ಮಾಣ ಮಾಡೋಕೆ ಮುಂದೆ ಬರುತ್ತಾರೆ. ಆದರೆ, ಅಸಲಿಯತ್ತು ಆ ರೀತಿ ಇಲ್ಲ ಅನ್ನೋದು ಲಕ್ಷ್ಮೀ ಮಂಚು ಅನುಭವದ ಮಾತು.
1 / 6
ಚಿತ್ರರಂಗಕ್ಕೆ ಕಾಸ್ಟಿಂಗ್ ಕೌಚ್ ಪಿಡುಗು ಅಂಟಿಕೊಂಡಿದೆ. ಇದನ್ನು ಸಂಪೂರ್ಣವಾಗಿ ನಾಶಮಾಡೋಕೆ ಸಾಧ್ಯವಾಗಿಲ್ಲ. ಅನೇಕ ನಟಿಯರು, ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದಾರೆ. ನಟಿ ಲಕ್ಷ್ಮೀ ಮಂಚು ಅವರು ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ. ಅವರಿಗೂ ಕಾಸ್ಟಿಂಗ್ ಕೌಚ್ ಆಗಿತ್ತು ಅನ್ನೋದು ಶಾಕಿಂಗ್ ವಿಚಾರ.
2 / 6
ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳಾದರೆ ಚಿತ್ರರಂಗದಲ್ಲಿ ಅವಕಾಶಗಳು ಸುಲಭವಾಗಿ ಸಿಗುತ್ತವೆ. ನಿರ್ಮಾಪಕರು ಸ್ಟಾರ್ ಕಿಡ್ಗಳ ಸಿನಿಮಾ ನಿರ್ಮಾಣ ಮಾಡೋಕೆ ಮುಂದೆ ಬರುತ್ತಾರೆ. ಆದರೆ, ಆ ಅಸಲಿಯತ್ತು ಆ ರೀತಿ ಇಲ್ಲ ಅನ್ನೋದು ಲಕ್ಷ್ಮೀ ಮಂಚು ಅಭಿಪ್ರಾಯ.
3 / 6
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ ಖ್ಯಾತಿ ಮೋಹನ್ ಬಾಬು ಅವರದ್ದು. ಇವರ ಮಗಳು ಲಕ್ಷ್ಮೀ ಮಂಚು. ಇವರಿಗೂ ಚಿತ್ರರಂಗದಲ್ಲಿ ಕಹಿ ಅನುಭವ ಆಗಿದೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
4 / 6
‘ಹೌದು, ಕಾಸ್ಟಿಂಗ್ ಕೌಚ್ಅನ್ನು ನಾನು ಎಲ್ಲಾ ಸಮಯದಲ್ಲೂ ಎದುರಿಸುತ್ತೇನೆ. ಈ ರೀತಿಯ ಅನುಭವ ನನಗೆ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಯಾರು, ಎಲ್ಲಿಯೂ ನ್ಯಾಯಯುತರಾಗಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ ಲಕ್ಷ್ಮೀ ಮಂಚು.
5 / 6
ಅವರ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ನಟರ ಮಕ್ಕಳಿಗೆ ಈ ರೀತಿ ಆದರೆ, ಇನ್ನು ಸಾಮಾನ್ಯರ ಕಥೆ ಏನು ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಯಾವಾಗ ಈ ರೀತಿಯ ಕಹಿ ಅನುಭವ ಉಂಟಾಗಿದೆ, ಇದನ್ನು ಮಾಡಿದ್ದು ಯಾರು ಎಂಬುದನ್ನು ಅವರು ಬಿಟ್ಟುಕೊಟ್ಟಿಲ್ಲ.
6 / 6
ಲಕ್ಷ್ಮೀ ಮಂಚು