
ಚಾಮರಾಜನಗರ ಜಿಲ್ಲೆಯಲ್ಲಿ ಈ ಬಾರಿ ಪೂರ್ವಮುಂಗಾರು ಮಳೆ ಉತ್ತಮವಾಗಿದೆ. ಹಾಗಾಗಿ ಗುಂಡ್ಲುಪೇಟೆ ತಾಲೂಕಿನಲ್ಲಿ ಭರ್ಜರಿ ಸೂರ್ಯಕಾಂತಿ,ಚೆಂಡು ಹೂ ಬೆಳೆದು ನಿಂತಿದೆ.

ಮೈಸೂರು-ಊಟಿ-ಕೇರಳ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜಮೀನಿನಲ್ಲಿ ಈ ರೈತ ಸೂರ್ಯಕಾಂತಿ ಬೆಳೆ ಬೆಳೆದಿದ್ದು, ಇದು ಈಗ ಸುಂದರವಾದ ಹೂ ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಪ್ರವಾಸಿಗರೆಲ್ಲ ಸೂರ್ಯಕಾಂತಿ ಬೆಳೆದಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯ ಸೂರ್ಯಕಾಂತಿ ಜಮೀನುಗಳಿಗೆ ಅತಿಕ್ರಮವಾಗಿ ಪ್ರವೇಶಿಸಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಸೂರ್ಯಕಾಂತಿ ಹೊಲದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಜಮೀನಿನ ಮಾಲೀಕ ದರ ನಿಗದಿ ಮಾಡಿದ್ದಾರೆ.

ಫೋಟೋ ಕ್ಲಿಕ್ಕಿಸಿಕೊಳ್ಳಲು ಬರುತ್ತಿರುವ ಪ್ರತಿಯೊಬ್ಬರಿಗೂ 10 ರೂ ಸಂಗ್ರಹ ಮಾಡುತ್ತಿರುವ ಜಮೀನು ಮಾಲೀಕ.

ಇನ್ನೂ ಪ್ರವಾಸಿಗರು ಸೆಲ್ಪಿ ಹೊಡೆದುಕೊಳ್ಳುವ ವೇಳೆ ಗಿಡಗಳು ಹಾನಿಗೀಡಾಗುವ ಸಂಭವವಿದೆ. ಫೋಟೋ ಹಾಗೂ ಸೆಲ್ಪಿ ತೆಗೆದುಕೊಳ್ಳುಲು ಬರುವವರಿಂದ ಸೂರ್ಯಕಾಂತಿ ಗಿಡಗಳು ಮುರಿದು ಹಾಳಾಗಿ ರೈತರಿಗೆ ನಷ್ಟವಾಗುವ ಸಂಭವ ಇದೆ. ಹಾಗಾಗಿ ಈ ನಷ್ಟ ತಪ್ಪಿಸಿಕೊಳ್ಳಲು ರೈತರು ಉಪಾಯವೊಂದನ್ನು ಕಂಡುಕೊಂಡಿದ್ದಾರೆ.

ಯಾರೇ ಆಗಲಿ ಸೂರ್ಯಕಾಂತಿ ಹೊಲದಲ್ಲಿ ಫೋಟೋ ಅಥವಾ ಸೆಲ್ಪಿ ತೆಗೆದುಕೊಳ್ಳಲು ಜಮೀನಿನ ರೈತನಿಗೆ ತಲಾ ಹತ್ತು ರೂಪಾಯಿ ನೀಡಬೇಕು.

ಸೆಲ್ಪಿಗೆ ದರ ನಿಗಧಿಪಡಿಸಿರುವುದರಿಂದ ಒಂದೆಡೆ ರೈತರಿಗೆ ವರಮಾನವೂ ಬಂದಂತೆ ಆಗುತ್ತಿದೆ.

ಇನ್ನೊಂದೆಡೆ ರೈತರಿಗೆ ತಮ್ಮ ಬೆಳೆಯನ್ನು ಕಾದು ರಕ್ಷಣೆ ಮಾಡಿದಂತೆ ಆಗುತ್ತಿದೆ

ಈ ಬಾರಿ ಉತ್ತಮವಾಗಿ ಬೆಳೆದಿರುವ ಸೂರ್ಯಕಾಂತಿ ಬೆಳೆ ತನ್ನ ಅಂದ ಚಂದದಿಂದ ಪ್ರವಾಸಿಗರಿಗೆ ಮುದ ನೀಡಿದರೆ, ಬೆವರು ಸುರಿಸಿ ಬೆಳೆದ ರೈತನಿಗೂ ಲಾಭ ಮಾಡಿಕೊಡುತ್ತಿದೆ..

ಒಟ್ಟಾರೆ ಕರ್ನಾಟಕ, ತಮಿಳುನಾಡು ಹಾಗು ಕೇರಳ ರಾಜ್ಯಗಳಿಗೆ ಈ ಹೆದ್ದಾರಿಗಳಲ್ಲಿ ಸಂಚರಿಸುವಾಗ ರಸ್ತೆಯ ಎರಡು ಕಡೆ ಹೂವಿನ ಚೆಲುವನ್ಬು ಸವಿಯದ ಪ್ರವಾಸಿಗನಿಲ್ಲ, ಮನಸ್ಸಿನಲ್ಲಿ ಎಷ್ಟೆ ಬೇಸರವಿದ್ದರು ಹೂವಿನ ಬಣ್ಣ ಸುವಾಸನೆ ಸೆಳೆದು ಬಿಡುತ್ತದೆ. ಪ್ರವಾಸಿಗರ ಮನಸ್ಸನ್ನು ಉಲ್ಲಾಸಗೊಳಿಸಿ ಯಾವುದೋ ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಪ್ರವಾಸಿಗರನ್ನು ಸೂರ್ಯಕಾಂತಿ ತನ್ನ ಅಂದಚಂದದಿಂದ ಕೈ ಬೀಸಿ ಕರೆಯುತ್ತಿದೆ