Sheep Breeding: ಕೊರೋನಾ ಮಾರಿ ಕಾಲದಲ್ಲಿ ಕೆಲಸ ಕಳೆದುಕೊಂಡ ಖಾಸಗಿ ಕಂಪನಿಯ ಉದ್ಯೋಗಿ, ಟಗರು ಸಾಕಾಣಿಕೆ ಮಾಡಿ ಸೈ ಎನಿಸಿಕೊಂಡಿದ್ದಾನೆ!
ಸಾವಿರಾರು ಜನರ ಜೀವಗಳನ್ನು ಬಲಿ ಪಡೆದುಕೊಂಡು, ಲಕ್ಷಾಂತರ ಕುಟುಂಬಗಳನ್ನು ಬೀದಿಪಾಲು ಮಾಡಿ, ಕಷ್ಟಕೋಟಲೆಗಳನ್ನು ಕಟ್ಟಿಕೊಟ್ಟ ಕೊರೋನಾ (Coronavirus) ಕೆಲವರಿಗೆ ಬದುಕಿನ ಪಾಠವನ್ನೂ ಸಹ ಕಲಿಸಿದ್ದು, ಬದುಕು ಕಟ್ಟಿಕೊಳ್ಳುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದೆ. ಬದುಕನ್ನು ಎದುರಿಸುವ ಕಲೆಯನ್ನು ನೀಡಿದೆ ಎಂದರೆ ತಪ್ಪಾಗದು. ಇಲ್ಲೊಬ್ಬ ಯುವಕನ ಉದಾಹರಣೆಯನ್ನೇ ನೋಡಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಅದೇ ಮಹಾಮಾರಿ ಕೊರೋನಾದ ಕಾರಣದಿಂದ ಇಂದು ಸ್ವಂತ ಕಾಲ ಮೇಲೆ ನಿಂತಿದ್ದಾನೆ. ಅದರಲ್ಲೂ ಟಗರು ಸಾಕಾಣಿಕೆ ಮಾಡಿ ಸೈ ಎನಿಸಿಕೊಂಡಿದ್ದಾನೆ. ದಾಖಲೆ ಪ್ರಮಾಣದಲ್ಲಿ ಇವರು ಸಾಕಿದ ಟಗರುಗಳು ತೂಕ ಹೊಂದಿವೆ ಹಾಗೂ ಉತ್ತಮ ಬೇಡಿಕೆಗೆ ಪಾತ್ರವಾಗಿದೆ, ಖಾಸಗಿ ಕಂಪನಿಯ ಉದ್ಯೋಗಿಯ ಟಗರು ಕೃಷಿಯ (Tagaru Breeding) ಕುರಿತ ಸ್ಟೋರಿ ಇಲ್ಲಿದೆ ನೋಡಿ. ಕೊರೊನಾ ಮಹಾಮಾರಿಯ ಕಾಟಕ್ಕೆ ವರ್ಕ್ ಫ್ರಮ್ ಹೋಂ ಮೂಲಕ ಕೆಲಸ ಮಾಡುತ್ತಿದ್ದ ಯುವಕ. ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದವ ಅದೊಂದು ದಿನ ಟಗರು ಕೃಷಿಯತ್ತ ಮುಖ ಮಾಡಿದ್ದ. ಇದೀಗ ಟಗರು ಸಾಕಾಣಿಕೆ ಮಾಡುವುದರಲ್ಲಿ ಪರಿಣಿತನಾಗಿದ್ದಾನೆ ಆ ಖಾಸಗಿ ಕಂಪನಿಯ ಉದ್ಯೋಗಿ. ಹೌದು ಇದು ವಿಜಯಪುರ ಜಿಲ್ಲೆಯ (Babaleshwar, Vijayapura) ಯುವಕನೋರ್ವನ ಸಾಧನೆಯ ಕಥೆ (Success Story).

1 / 9

2 / 9

3 / 9

4 / 9

5 / 9

6 / 9

7 / 9

8 / 9

9 / 9




