Lionel Messi Birthday: 36ನೇ ವಸಂತಕ್ಕೆ ಕಾಲಿಟ್ಟ ಲಿಯೋನೆಲ್ ಮೆಸ್ಸಿ; ಕಾಲ್ಚೆಂಡಿನ ಚತುರನ ಟಾಪ್ 10 ದಾಖಲೆಗಳಿವು

|

Updated on: Jun 24, 2023 | 11:55 AM

Happy Birthday Lionel Messi: ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಇಂದು ತಮ್ಮ 36 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1 / 11
ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಇಂದು ತಮ್ಮ 36 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕತಾರ್ ವಿಶ್ವಕಪ್​ನಲ್ಲಿ ಫ್ರಾನ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 2 ಗೋಲು ಬಾರಿಸಿದ್ದ ಮೆಸ್ಸಿ ಅರ್ಜೆಂಟೀನಾ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ್ದರು. ಫುಟ್ಬಾಲ್ ಜಗತ್ತಿನ ಸಾಮ್ರಾಟನಾಗಿ ಮೆರೆಯುತ್ತಿರುವ ಮೆಸ್ಸಿ ಲೆಕ್ಕವಿಲ್ಲದಷ್ಟು ದಾಖಲೆ ಬರೆದಿದ್ದಾರೆ. ಅವುಗಳಲ್ಲಿ ಟಾಪ್ 10 ದಾಖಲೆಗಳ ವಿವರ ಇಲ್ಲಿದೆ.

2 / 11
ಮೆಸ್ಸಿ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು (ವರ್ಷದ ಆಟಗಾರ) ದಾಖಲೆಯ 7 ಬಾರಿ ಗೆದ್ದಿದ್ದಾರೆ.

3 / 11
ಬಾರ್ಸಿಲೋನಾ ಪರವಾಗಿ 672 ಗೋಲುಗಳು - ಮೆಸ್ಸಿ ಒಂದೇ ಕ್ಲಬ್‌ ಪರ ಅತಿ ಹೆಚ್ಚು ಗೋಲುಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.

4 / 11
474 ಗೋಲುಗಳು- ಲಾ ಲಿಗಾದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆಯನ್ನು ಮೆಸ್ಸಿ ಹೊಂದಿದ್ದಾರೆ.

5 / 11
ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆಯನ್ನೂ ಮೆಸ್ಸಿ ಹೊಂದಿದ್ದಾರೆ. ಲಿಯೋನೆಲ್ ಮೆಸ್ಸಿ ಇದುವರೆಗೆ ವಿಶ್ವಕಪ್ ವೇದಿಕೆಯಲ್ಲಿ ಒಟ್ಟು 26 ಪಂದ್ಯಗಳನ್ನು ಆಡಿದ್ದಾರೆ.

6 / 11
ಮೆಸ್ಸಿ ವಿಶ್ವಕಪ್‌ನಲ್ಲಿ 11 ಬಾರಿ ಪಂದ್ಯ ಶ್ರೇಷ್ಠರಾಗಿದ್ದಾರೆ. ಅದರಲ್ಲಿ ಅವರು ಕತಾರ್ ವಿಶ್ವಕಪ್‌ನಲ್ಲಿ ಐದು ಬಾರಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

7 / 11
ತಮ್ಮ ವೃತ್ತಿಜೀವನದಲ್ಲಿ 807 ಗೋಲು ಬಾರಿಸಿರುವ ಮೆಸ್ಸಿ ಅತಿ ಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ (838 ಗೋಲುಗಳು) ನಂತರದ ಸ್ಥಾನದಲ್ಲಿದ್ದಾರೆ

8 / 11
ಹಾಗೆಯೇ ಲಾ ಲಿಗಾದಲ್ಲಿ ಅತಿ ಹೆಚ್ಚು (192) ಅಸಿಸ್ಟ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ.

9 / 11
ಮೆಸ್ಸಿ ಲಾ ಲಿಗಾ (36) ಮತ್ತು ಕೋಪಾ ಅಮೇರಿಕಾ (17) ನಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್‌ಗಳ ದಾಖಲೆಯನ್ನು ಹೊಂದಿದ್ದಾರೆ.

10 / 11
ಮೆಸ್ಸಿ ಬಾರ್ಸಿಲೋನಾ ಕ್ಲಬ್ ಪರ ದಾಖಲೆಯ 34 ಟ್ರೋಫಿಗಳನ್ನು ಗೆದ್ದಿದ್ದಾರೆ.

11 / 11
ಫಿಫಾ ಗೋಲ್ಡನ್ ಬಾಲ್ (ಟೂರ್ನಮೆಂಟ್ ಆಟಗಾರ) ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ಏಕೈಕ ಆಟಗಾರ ಮೆಸ್ಸಿ.