- Kannada News Photo gallery Lionel Messi Gunmen leave threatening note for Lionel Messi at in laws store
Lionel Messi: ‘ಮೆಸ್ಸಿ ನಿನಗಾಗಿ ಕಾಯುತ್ತಿದ್ದೇವೆ’; 14 ಸುತ್ತು ಗುಂಡಿನ ದಾಳಿ! ಫುಟ್ಬಾಲ್ ದೈತ್ಯನಿಗೆ ಕೊಲೆ ಬೆದರಿಕೆ
Lionel Messi: ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸೂಪರ್ ಮಾರ್ಕೆಟ್ ಮೇಲೆ ಗುಂಡು ಹಾರಿಸಿದ್ದಾರೆ. ಆ ಬಳಿಕ ಮೆಸ್ಸಿ ನಾವು ನಿಮಗಾಗಿ ಕಾಯುತ್ತಿದ್ದೇವೆ ಎಂಬ ಸಂದೇಶವನ್ನು ಕಾರ್ಡ್‌ಬೋರ್ಡ್‌ನಲ್ಲಿ ಬರೆದು ಅಲ್ಲಿಂದ ತೆರಳಿದ್ದಾರೆ ಎಂದಿದ್ದಾರೆ.
Updated on: Mar 03, 2023 | 11:45 AM

ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿಗೆ ಇಬ್ಬರು ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲ, ಮೆಸ್ಸಿ ಕುಟುಂಬದ ಸೂಪರ್ ಮಾರ್ಕೆಟ್ ಮೇಲೂ ದುಷ್ಕರ್ಮಿಗಳು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.

ವಾಸ್ತವವಾಗಿ ಅರ್ಜೆಂಟೀನಾದಲ್ಲಿಯೇ, ಮೆಸ್ಸಿ ಅವರ ಪತ್ನಿ ಆಂಟೋನೆಲ್ಲಾ ಅವರ ಕುಟುಂಬವು ಸೂಪರ್ ಮಾರ್ಕೆಟ್ ನಡೆಸುತ್ತಿದ್ದು, ಈ ಸೂಪರ್ಮಾರ್ಕೆಟ್ನ ಹೊರಗೆ ಇದೀಗ ಇಬ್ಬರು ದುಷ್ಕರ್ಮಿಗಳು 14 ಬಾರಿ ಗುಂಡಿನ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸೂಪರ್ ಮಾರ್ಕೆಟ್ ಮೇಲೆ ಗುಂಡು ಹಾರಿಸಿದ್ದಾರೆ. ಆ ಬಳಿಕ ಮೆಸ್ಸಿ ನಾವು ನಿಮಗಾಗಿ ಕಾಯುತ್ತಿದ್ದೇವೆ ಎಂಬ ಸಂದೇಶವನ್ನು ಕಾರ್ಡ್‌ಬೋರ್ಡ್‌ನಲ್ಲಿ ಬರೆದು ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಗುಂಡಿನ ದಾಳಿಯಾದ ಯಾರು ಇರದ ಕಾರಣ ಯಾವುದೇ ಪ್ರಾಣಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕಿತರನ್ನು ಗುರುತಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲವಾದರೂ, ಈ ಬಗ್ಗೆ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಲಾಗಿದೆ.

ಮೆಸ್ಸಿ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅರ್ಜೆಂಟೀನಾದಲ್ಲಿ ಪ್ರತಿ ಮನೆಯಲ್ಲೂ ಮನೆ ಮಾತಾಗಿರುವ ಮೆಸ್ಸಿಗೆ ಇಡೀ ದೇಶವೇ ಗೌರವ ನೀಡುತ್ತದೆ. ಅದರಲ್ಲೂ ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಗೆದ್ದ ಬಳಿಕ ಮೆಸ್ಸಿ ಇಡೀ ದೇಶಕ್ಕೆ ಸೂಪರ್ಮ್ಯಾನ್ ಆಗಿಬಿಟ್ಟಿದ್ದಾರೆ.
