ARG vs MEX: ಮೆಸ್ಸಿ ಮ್ಯಾಜಿಕ್, ಮರಡೋನಾ ದಾಖಲೆ ಉಡೀಸ್..! ಮೆಕ್ಸಿಕೋ ಮಣಿಸಿದ ಅರ್ಜೆಂಟೀನಾ

Edited By:

Updated on: Nov 27, 2022 | 7:44 AM

FIFA World Cup 2022: ಮೆಕ್ಸಿಕೋ ವಿರುದ್ಧದ ಈ ಪಂದ್ಯದಲ್ಲಿ ಅರ್ಜೆಂಟೀನಾ 2-0 ಅಂತರದಲ್ಲಿ ಜಯ ಸಾಧಿಸಿತ್ತು. ಈ ಗೆಲುವಿಗಾಗಿ ಮೆಸ್ಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

1 / 6
2022 ರ ಫಿಫಾ ವಿಶ್ವಕಪ್‌ನ C ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಮೆಕ್ಸಿಕೋ ತಂಡವನ್ನು 0-2 ಅಂತರದಿಂದ ಮಣಿಸಿದ ಅರ್ಜೆಂಟೀನಾ ಗೆಲುವಿನ ಲಯಕ್ಕೆ ಮರಳಿದೆ. ಆಡಿದ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ಅರ್ಜೆಂಟೀನಾಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತ್ತಾಗಿತ್ತು. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಅರ್ಜೆಂಟೀನಾ ತಂಡಕ್ಕೆ ನಾಯಕ ಮೆಸ್ಸಿ ಆಟ ಅದ್ಭುತ ಗೆಲುವು ತಂದುಕೊಟ್ಟಿತು.

2022 ರ ಫಿಫಾ ವಿಶ್ವಕಪ್‌ನ C ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಮೆಕ್ಸಿಕೋ ತಂಡವನ್ನು 0-2 ಅಂತರದಿಂದ ಮಣಿಸಿದ ಅರ್ಜೆಂಟೀನಾ ಗೆಲುವಿನ ಲಯಕ್ಕೆ ಮರಳಿದೆ. ಆಡಿದ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ಅರ್ಜೆಂಟೀನಾಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತ್ತಾಗಿತ್ತು. ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಅರ್ಜೆಂಟೀನಾ ತಂಡಕ್ಕೆ ನಾಯಕ ಮೆಸ್ಸಿ ಆಟ ಅದ್ಭುತ ಗೆಲುವು ತಂದುಕೊಟ್ಟಿತು.

2 / 6

ಈ ಪಂದ್ಯದಲ್ಲಿ ಮೆಕ್ಸಿಕೊವನ್ನು ಸೋಲಿಸಿದ ಅರ್ಜೆಂಟೀನಾ ವಿಶ್ವಕಪ್​ ಪ್ರಯಾಣವನ್ನು ಜೀವಂತವಾಗಿರಿಸಿಕೊಂಡರೆ, ಈ ಗೆಲುವಿನಲ್ಲಿ ನಾಯಕ ಮೆಸ್ಸಿ ವಿಶೇಷ ದಾಖಲೆಯೊಂದನ್ನು ಸರಿಗಟ್ಟಿದರು. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅರ್ಜೆಂಟೀನಾ ಪರವಾಗಿ ಮರಡೋನಾ ಹೆಸರಿನಲ್ಲಿದ್ದ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದರು.

3 / 6

ಮೆಸ್ಸಿ, ಮೊದಲು ಮೆಕ್ಸಿಕೋ ವಿರುದ್ಧ ಮೈದಾನಕ್ಕಿಳಿಯುವ ಮೂಲಕ ಅರ್ಜೆಂಟೀನಾ ಪರ 21 ವಿಶ್ವಕಪ್ ಪಂದ್ಯಗಳನ್ನು ಆಡಿದ ಮರಡೋನಾ ಅವರ ದಾಖಲೆಯನ್ನು ಸರಿಗಟ್ಟಿದರು. ಇದರ ನಂತರ, ಅವರು ಅದೇ ಪಂದ್ಯದಲ್ಲಿ ತಮ್ಮ 8 ನೇ ವಿಶ್ವಕಪ್ ಗೋಲು ಗಳಿಸಿದರು. ಇದಕ್ಕೂ ಮುನ್ನ ಡಿಯಾಗೋ ಮರಡೋನಾ ಅರ್ಜೆಂಟೀನಾ ಪರ 8 ವಿಶ್ವಕಪ್ ಗೋಲು ಗಳಿಸಿದ್ದ ಸಾಧನೆ ಮಾಡಿದ್ದರು.

4 / 6

ಪಂದ್ಯದ ದ್ವಿತೀಯಾರ್ಧದಲ್ಲಿ ಮೆಕ್ಸಿಕೋ ವಿರುದ್ಧ ಗೋಲು ಗಳಿಸುವ ಮೂಲಕ ಮೆಸ್ಸಿ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಯಾವುದೇ ಗೋಲು ಗಳಿಸಿರಲಿಲ್ಲ. ಆದರೆ ದ್ವಿತೀಯಾರ್ಧದ 64ನೇ ನಿಮಿಷದಲ್ಲಿ ಮೆಸ್ಸಿ ಗೋಲು ಬಾರಿಸಿದ್ದರಿಂದ ಅರ್ಜೆಂಟೀನಾ 1-0 ಇಂದ ಮುನ್ನಡೆ ಸಾಧಿಸಿತು. 2022ರಲ್ಲಿ ಅರ್ಜೆಂಟೀನಾ ಪರ ಮೆಸ್ಸಿ ಗಳಿಸಿದ 13ನೇ ಗೋಲು ಇದಾಗಿದೆ.

5 / 6

ಪಂದ್ಯದ ದ್ವಿತೀಯಾರ್ಧದ 64ನೇ ನಿಮಿಷದಲ್ಲಿ ಮೆಸ್ಸಿ ಗೋಲು ಬಾರಿಸಿದರೆ, 87ನೇ ನಿಮಿಷದಲ್ಲಿ ಎಂಜೊ ಫೆರ್ನಾಂಡಿಸ್ ಗೋಲು ಬಾರಿಸುವುದರೊಂದಿಗೆ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು. ಈ ವಿಶ್ವಕಪ್‌ನಲ್ಲಿ ಫೆರ್ನಾಂಡಿಸ್ ಅವರ ಮೊದಲ ಗೋಲು ಇದಾಗಿತ್ತು.

6 / 6

ಮೆಕ್ಸಿಕೋ ವಿರುದ್ಧದ ಈ ಪಂದ್ಯದಲ್ಲಿ ಅರ್ಜೆಂಟೀನಾ 2-0 ಅಂತರದಲ್ಲಿ ಜಯ ಸಾಧಿಸಿತ್ತು. ಈ ಗೆಲುವಿಗಾಗಿ ಮೆಸ್ಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು.

Published On - 7:41 am, Sun, 27 November 22

Loading...
Unable to load recommendations.
Follow Us