ಕನ್ನಡ ಸೇರಿದಂತೆ ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು

Updated on: May 03, 2025 | 1:05 PM

OTT Release this week: ಕನ್ನಡ ಸಿನಿಮಾಗಳನ್ನು ಒಟಿಟಿಗಳು ನಿರ್ಲಕ್ಷಿಸುತ್ತಿವೆ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಇದು ನಿಜವೂ ಹೌದು. ಕನ್ನಡದ ಸ್ಟಾರ್ ನಟರ ಸಿನಿಮಾಗಳನ್ನು ಖರೀದಿಸಲು ಸಹ ಒಟಿಟಿಗಳು ಹಿಂದೆ-ಮುಂದೆ ನೋಡುತ್ತವೆ. ಆದರೆ ಕಳೆದ ಕೆಲ ವಾರಗಳಿಂದ ಪ್ರತಿವಾರವೂ ಕನ್ನಡ ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಈ ವಾರವೂ ಸಹ ಎರಡು ಕನ್ನಡ ಸಿನಿಮಾಗಳು ಒಟಿಟಿಗೆ ಬಂದಿವೆ. ಇಲ್ಲಿದೆ ಪಟ್ಟಿ...

1 / 5
ಮಲಯಾಳಂ ಸಿನಿಮಾ ‘ಬ್ರೋಮ್ಯಾನ್ಸ್’ ಇದೇ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿದ್ದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಇದೀಗ ಸೋನಿ ಲಿವ್​ನಲ್ಲಿ ವೀಕ್ಷಣೆಗೆ ಲಭ್ಯವಿದೆ.

2 / 5
ನವಾಜುದ್ಧೀನ್ ಸಿದ್ಧಿಖಿ ನಟನೆಯ ‘ಕೋಸ್ಟೊ’ ಸಿನಿಮಾ ಜೀ5ನಲ್ಲಿ ನೇರವಾಗಿ ಬಿಡುಗಡೆ ಆಗಿದೆ. ನಿಜ ವ್ಯಕ್ತಿಯ ಜೀವನ ಆಧರಿಸಿದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಕಸ್ಟಮ್ಸ್ ಅಧಿಕಾರಿ ಕೋಸ್ಟೊ ಫರ್ನಾಂಡೀಸ್ ಅವರ ಕರ್ತವ್ಯ ನಿಷ್ಠೆ, ಧೈರ್ಯದಿಂದ ದೊಡ್ಡ ಚಿನ್ನ ಕಳ್ಳಸಾಗಣೆದಾರರನ್ನು ಹೆಡೆಮುರಿ ಕಟ್ಟಿದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

3 / 5
ವಿಕ್ಕಿ ನಿರ್ದೇಶನ ಮಾಡಿ ನಟನೆ ಸಹ ಮಾಡಿದ್ದ ‘ಕಾಲಾಪತ್ಥರ್’ ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆದಾಗ ವಿಮರ್ಶಕರಿಂದ ಮೆಚ್ಚುಗೆ ಸಹ ಪಡೆದಿತ್ತು. ಚಿತ್ರಮಂದಿರದಲ್ಲಿ ಸಾಧಾರಣ ಪ್ರದರ್ಶನ ಕಂಡ ಈ ಸಿನಿಮಾ ಇದೀಗ ಸನ್ ನೆಕ್ಸ್ಟ್ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.

4 / 5
ಸಿನಿಮಾ ಬಿಡುಗಡೆಗೆ ಮುನ್ನ ಟ್ರೈಲರ್, ಸಿನಿಮಾದ ಹೆಸರು ಹಾಗೂ ಪ್ರಚಾರದಿಂದ ಸಖತ್ ಸದ್ದು ಮಾಡಿದ್ದ ಸಿನಿಮಾ ‘ಕೆರೆಬೇಟೆ’. ಈ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ‘ಕೆರೆಬೇಟೆ’ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಆದರೆ ಸಿನಿಮಾ ನೋಡಲು ಬಯಸುವವರು 99 ರೂಪಾಯಿ ಪಾವತಿಸಬೇಕು.

5 / 5
ಹೊಸ ಹಿಂದಿ ವೆಬ್ ಸರಣಿ ‘ಕುಲ್’ ಇದೇ ವಾರ ಜಿಯೋ ಹಾಟ್​ಸ್ಟಾರ್​​ನಲ್ಲಿ ಬಿಡುಗಡೆ ಆಗಿದೆ. ಒಂದು ರಾಯಲ್ ಕುಟುಂಬದ ಹಿರಿಯ ವ್ಯಕ್ತಿ ನಿಧನ ಹೊಂದಿದ ಬಳಿಕ ಆ ಮನೆಯಲ್ಲಿ ಅಧಿಕಾರಕ್ಕಾಗಿ, ಆಸ್ತಿಗಾಗಿ ನಡೆಯುವ ಘಟನೆಗಳನ್ನು ಈ ವೆಬ್ ಸರಣಿ ಒಳಗೊಂಡಿದೆ.