ಕೆಂಪನೆಯ ಮೇಲ್ಭಾಗ, ಒಳಗೆ ಬಿಳಿಯ ತಿರುಳನ್ನು ಹೊಂದಿರುವ ಲಿಚಿ ಹಣ್ಣು ಅನೇಕ ಪೌಷ್ಟಿಕಾಂಶಗಳ ಆಗರ.
ಲಿಚಿ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತದ ಗುಣಲಕ್ಷಣಗಳ ಜೊತೆಗೆ ವಿಟಮಿನ್‌ಗಳು, ಮೆಗ್ನೀಸಿಯಮ್, ರಂಜಕ, ಕಬ್ಬಿಣ, ಮ್ಯಾಂಗನೀಸ್ ಮತ್ತು ತಾಮ್ರದಂತಹ ಖನಿಜಗಳು ನಮ್ಮನ್ನು ಹಲವಾರು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಪ್ರಯೋಜನಕಾರಿಯಾಗಿದೆ.
ಲಿಚಿ ಹಣ್ಣು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಉತ್ತಮ ಆಹಾರ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ಅಂಗಾಂಶ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಮೂಳೆಯ ಆರೋಗ್ಯವನ್ನು ಬೆಂಬಲಿಸುತ್ತದೆ. ರಕ್ತದೊತ್ತಡದ ಮಟ್ಟವನ್ನು ನಿರ್ವಹಿಸುತ್ತದೆ. ಕೂದಲ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.
ಲಿಚಿ ಹಣ್ಣು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
ಲಿಚಿ ಹಣ್ಣನ್ನು ಸೇವಿಸುವುದರಿಂದ ಕೆಲವು ಅಡ್ಡ ಪರಿಣಾಮಗಳು ಕೂಡ ಉಂಟಾಗಬಹುದು. ಅವುಗಳೆಂದರೆ, ಇದರಿಂದ ಹೈಪೊಗ್ಲಿಸಿಮಿಯಾ ಅಥವಾ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.
ಲಿಚಿ ಹಣ್ಣುಗಳನ್ನು ಸ್ವಲ್ಪ ಪ್ರಮಾಣದಲ್ಲಿ ಮತ್ತು ಆಗಾಗ ಸೇವಿಸಿದರೆ ಅದು ನಿಮ್ಮ ಆರೋಗ್ಯದ ಮೇಲೆ ಯಾವುದೇ ಹಾನಿಕಾರಕ ಪರಿಣಾಮಗಳನ್ನು ಬೀರುವುದಿಲ್ಲ.
ಲಿಚಿ ಹಣ್ಣಿನಲ್ಲಿರುವ ಕೆಲವು ಪ್ರೋಟೀನ್‌ಗಳು ಉಸಿರಾಟದ ತೊಂದರೆ, ತುಟಿಗಳು ಊದಿಕೊಳ್ಳುವುದು ಮತ್ತು ತುರಿಕೆ ಮುಂತಾದ ಅಲರ್ಜಿಯನ್ನು ಉಂಟುಮಾಡಬಹುದು.
ಆದರೂ ಲಿಚಿ ಹಣ್ಣಿನಿಂದ ಆಗುವ ಅಲರ್ಜಿಯ ಬಗ್ಗೆ ವಿಜ್ಞಾನದಲ್ಲಿ ಹೆಚ್ಚಿನ ಸಂಶೋಧನೆಗಳಿನ್ನೂ ಆಗಿಲ್ಲ.
ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಅವಧಿಯಲ್ಲಿ ಮಹಿಳೆಯರು ಲಿಚಿ ಸೇವಿಸುವ ಮೊದಲು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಬೇಕು.
ಸಂಶೋಧನೆಯ ಪ್ರಕಾರ, ಲಿಚಿಯಲ್ಲಿ ಕಂಡುಬರುವ ಹೈಪೊಗ್ಲಿಸಿನ್ ಎ ಎಂಬ ವಸ್ತುವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಲಿಚಿ ಹಣ್ಣಿನ ಸೇವನೆಯಿಂದ ಕೆಲವೊಮ್ಮೆ ಚರ್ಮದ ತುರಿಕೆ, ಗಂಟಲಿನಲ್ಲಿ ಊತ, ತುಟಿಗಳ ಊತ, ಚರ್ಮದಲ್ಲಿ ಗುಳ್ಳೆಗಳು, ಅತಿಸಾರ ಭೇದಿ ಉಂಟಾಗಬಹುದು.