Updated on: May 02, 2022 | 4:06 PM
ಬಾಲಿವುಡ್ ಚಿತ್ರರಂಗ ಕಂಡ ಅಪ್ರತಿಮ ಕಲಾವಿದೆ ಮಾಧುರಿ ದೀಕ್ಷಿತ್. ರೆಟ್ರೋ ಕಾಲದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಈ ಚೆಲುವೆಗೆ ಬೇರೆ ಯಾರೂ ಸಾಟಿ ಇಲ್ಲ. 54ನೇ ವಯಸ್ಸಲ್ಲೂ ಯುವತಿಯರನ್ನು ನಾಚಿಸುವಂತಿದ್ದಾರೆ.
‘ಏಕ್ ದೋ ತೀನ್..’ ಎಂದು ಕುಣಿದು, ಪಡ್ಡೆಗಳ ನಿದ್ದೆ ಕೆಡಿಸಿದ ಮಾಧುರಿ ದೀಕ್ಷಿತ್ ಅಂದು ಭಾರತೀಯ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಅವರು ಸೀರೆ ತೊಟ್ಟು ಹೊಸ ಫೋಟೋ ಹಂಚಿಕೊಂಡಿದ್ದಾರೆ.
1984ರಲ್ಲಿ ‘ಅಬೋದ್’ ಸಿನಿಮಾ ಮೂಲಕ ಮಾಧುರಿ ದೀಕ್ಷಿತ್ ಅವರು ಬಾಲಿವುಡ್ಗೆ ಕಾಲಿಟ್ಟರು. ಆರಂಭದಲ್ಲೇ ತಮ್ಮ ನಟನೆ ಮೂಲಕ ಅವರು ಗಮನ ಸೆಳೆದರು.
‘ತೇಜಾಬ್’ ಚಿತ್ರದ ‘ಏಕ್ ದೋ ತೀನ್..’ ಹಾಡು ಸೂಪರ್ ಹಿಟ್ ಆಯಿತು. ಆ ಮೂಲಕ ಮಾಧುರಿ ದೀಕ್ಷಿತ್ ದೇಶಾದ್ಯಂತ ಖ್ಯಾತಿ ಗಳಿಸಿದರು. ಸಿನಿಪ್ರೇಮಿಗಳಿಗೆ ಇಂದಿಗೂ ಆ ಹಾಡು ಫೇವರಿಟ್ ಆಗಿ ಉಳಿದುಕೊಂಡಿದೆ.
‘ತೇಜಾಬ್’ ಚಿತ್ರದ ನಂತರ ಮಾಧುರಿ ದೀಕ್ಷಿತ್ ಅವರ ಸ್ಟಾರ್ಗಿರಿ ದೊಡ್ಡ ಮಟ್ಟಕ್ಕೆ ಏರಿತು. ಸ್ಟಾರ್ ನಟರಿಗಿಂತಲೂ ಅವರು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎಂಬುದು ಅಚ್ಚರಿಯ ವಿಷಯ.