
ಇಂದು (ಮೇ 15) ಮಾಧುರಿ ದೀಕ್ಷಿತ್ ಅವರಿಗೆ ಜನ್ಮದಿನದ ಸಂಭ್ರಮ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಅವರ ಫೋಟೋ ಹಂಚಿಕೊಂಡ ವಿಶ್ ಮಾಡಲಾಗುತ್ತಿದೆ.

ಕೆಲವು ದಶಕಗಳಿಂದ ಮಾಧುರಿ ದೀಕ್ಷಿತ್ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಈಗ 56 ವರ್ಷ ವಯಸ್ಸು. ಅವರು ಪ್ರತಿ ಚಿತ್ರಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಮಾಧುರಿ ದೀಕ್ಷಿತ್ ಆಸ್ತಿ ಮೌಲ್ಯ 250 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರತಿ ಚಿತ್ರಕ್ಕೆ ಅವರು 4-5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಮಾಧುರಿ ದೀಕ್ಷಿತ್ ರಿಯಾಲಿಟಿ ಶೋ ಜಡ್ಜ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಪ್ರತಿ ಸೀಸನ್ಗೆ 25 ಕೋಟಿ ರೂಪಾಯಿ ಪಡೆಯುತ್ತಾರೆ.

ಮಾಧುರಿ ದೀಕ್ಷಿತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಬಗೆಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ.