- Kannada News Photo gallery Makar Sankranti 2023: Here are some mouth watering festive sweet dishes in kannada news
Makar Sankranti 2023: ಬಾಯಲ್ಲಿ ನಿರೂರಿಸುವ ಹಬ್ಬದ ಸಿಹಿ ಭಕ್ಷ್ಯಗಳು ಇಲ್ಲಿವೆ
ಹಬ್ಬ ಸಮೀಪಿಸುತ್ತಿದೆ, ಗೃಹಿಣಿಯರಂತೂ ಒಂದು ವಾರದ ಮುಂಚೆಯೇ ಹಬ್ಬದ ಅಡುಗೆ ತಯಾರಿಯಲ್ಲಿರುತ್ತಾರೆ. ಆದ್ದರಿಂದ ಹಬ್ಬಗಳ ಸಮಯದಲ್ಲಿ ತಯಾರಿಸುವ ಸಿಂಪಲ್ ರೆಸಿಪಿಗಳ ಕುರಿತು ಮಾಹಿತಿ ಇಲ್ಲಿದೆ.
Updated on: Jan 12, 2023 | 1:08 PM

ಹಬ್ಬ ಸಮೀಪಿಸುತ್ತಿದೆ, ಗೃಹಿಣಿಯರಂತೂ ಒಂದು ವಾರದ ಮುಂಚೆಯೇ ಹಬ್ಬದ ಅಡುಗೆ ತಯಾರಿಯಲ್ಲಿರುತ್ತಾರೆ. ಆದ್ದರಿಂದ ಹಬ್ಬಗಳ ಸಮಯದಲ್ಲಿ ತಯಾರಿಸುವ ಸಿಂಪಲ್ ರೆಸಿಪಿಗಳ ಕುರಿತು ಮಾಹಿತಿ ಇಲ್ಲಿದೆ.

ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಆದ್ದರಿಂದ ಆ ಸಮಯದಲ್ಲಿ ಹಳ್ಳಿಯಲ್ಲಿ ದವಸ ಧಾನ್ಯಗಳಿಂದ ರುಚಿ ರುಚಿಯಾದ ಆಹಾರಗಳನ್ನು ತಯಾರಿಸುವುದು ವಾಡಿಕೆ.

ಅಕ್ಕಿ ಪಾಯಸ: ಅಕ್ಕಿಯನ್ನು ಮುಂಚಿನ ದಿನ ನೆನೆಸಿ, ಹಾಲು, ತುಪ್ಪ, ಒಣ ದ್ರಾಕ್ಷಿ, ಗೋಡಂಬಿ, ಕೇಸರಿಯಿಂದ ರುಚಿಕರ ಅಕ್ಕಿ ಪಾಯಸವನ್ನು ತಯಾರಿಸಲಾಗುತ್ತದೆ. ಇದಕ್ಕೆ ತೆಂಗಿನ ಹಾಲು ಸೇರಿಸಿದರಂತೂ ರುಚಿ ಅದ್ಬುತ.

ಕ್ಯಾರೆಟ್ ಹಲ್ವಾ: ಹಾಲು, ಸಕ್ಕರೆ ತುಪ್ಪದ ಘಮದೊಂದಿಗೆ ಸುಲಭವಾಗಿ ತಯಾರಿಸುವ ಸಿಹಿಯೇ ಕ್ಯಾರೆಟ್ ಹಲ್ವಾ. ಜೊತೆಗೆ ಒಣ ದ್ರಾಕ್ಷಿ, ಗೋಡಂಬಿಗಳಿಂದ ಅಲಂಕರಿಸಲಾಗುತ್ತದೆ. ಇದು ಬಾಯಲ್ಲಿ ನಿರೂರಿಸುವ ರುಚಿಯನ್ನು ನೀಡುವುದರ ಜೊತೆಗೆ ನಿಮ್ಮ ಆರೋಗ್ಯಕ್ಕೂ ಉತ್ತಮವಾಗಿದೆ.

ಎಳ್ಳು ಬೆಲ್ಲ: ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪ್ರತಿ ಮನೆಮನೆಗೆ ಹೋಗಿ ಎಳ್ಳು ಬೆಲ್ಲ ನೀಡುವುದು ಹಳೆಯ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿ. ಜೊತೆಗೆ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಹೇಳುವುದುಂಟು.

ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಸಿಹಿ ತಿಂಡಿ ಸಕ್ಕರೆ ಪೊಂಗಲ್. ಕರ್ನಾಟಕದಲ್ಲಿ ಹುಗ್ಗಿ ಎಂದು ಕರೆಯುವ ಈ ಸಿಹಿ ಖಾದ್ಯವನ್ನು ಸಂಕ್ರಾಂತಿ ಹಬ್ಬದಂದು ಆಗ ತಾನೆ ಬೆಳೆದ ತಾಜಾ ಧಾನ್ಯ, ಅಕ್ಕಿಯಿಂದ ತಯಾರಿಸುವುದು ವಾಡಿಕೆ.

ಕಡಲೇ ಬೀಜದ ಚಿಕ್ಕಿ: ಇದು ಎಳ್ಳು,ಬೆಲ್ಲ ಮತ್ತು ಕಡಲೆಕಾಳುಗಳಿಂದ ತಯಾರಿಸಲಾಗುವ ಸುಲಭವಾದ ಸಿಹಿಯಾಗಿದೆ. ಇದರಲ್ಲಿ ಪೋಷಕಾಂಶಗಳು ಸಮೃದ್ದವಾಗಿರುವುದರಿಂದ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ.



















