Updated on: Jan 12, 2023 | 2:33 PM
ಮಧುರೈ, ತಮಿಳುನಾಡು: ಮಕರ ಸಂಕ್ರಾಂತಿಯನ್ನು ಆಚರಿಸಲು ಉತ್ತಮವಾದ ಸ್ಥಳಗಳಲ್ಲಿ ಮಧುರೈ ಪ್ರಮುಖವಾಗಿದೆ. ಇಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಪೊಂಗಲ್ ಎಂದು ಆಚರಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಜಲ್ಲಿಕಟ್ಟು, ಸಾಂಪ್ರದಾಯಿಕ ಕ್ರೀಡೆಯಾಗಿದೆ.
ಹರಿದ್ವಾರ, ಉತ್ತರಾಖಂಡ: ಮಕರ ಸಂಕ್ರಾಂತಿಯ ದಿನ ಹರಿದ್ವಾರದ ಪವಿತ್ರ ಗಂಗಾನದಿಯ ದಡದಲ್ಲಿ ಆಧ್ಯಾತ್ಮಿಕ ಆಚರಣೆಯನ್ನು ಆನಂದಿಸಬಹುದು. ಸಂಜೆಯ ಹೊತ್ತಿನ ಆರತಿ ಬೆಳಗುವಿಕೆ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ಜೈಪುರ, ರಾಜಸ್ಥಾನ: ರಾಜಧಾನಿ ಜೈಪುರದಲ್ಲಿ ಮಕರ ಸಂಕ್ರಾಂತಿಯನ್ನು ವರ್ಣರಂಜಿತವಾಗಿ ಆಚರಿಸುವುದರಿಂದ ಪ್ರಪಂಚದಾದ್ಯಂತದ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಬಣ್ಣ ಬಣ್ಣದ ಗಾಳಿಪಟ ಉತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತದೆ. ಜೊತೆಗೆ ಕುದುರೆ, ಒಂಟೆ ಸವಾರಿ ನೃತ್ಯಗಾರರು ಮತ್ತು ಸಂಗೀತಗಾರರ ಮೆರವಣಿಗೆಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
ಉಡುಪಿ, ಕರ್ನಾಟಕ: ಈ ಪಟ್ಟಣವು ತನ್ನ ಕೃಷ್ಣ ದೇವಾಲಯಕ್ಕೆ ಹೆಸರುವಾಸಿಯಾಗಿದ್ದು, ವರ್ಷವಿಡೀ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಈ ನಗರಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯವೆಂದರೆ ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಇಡೀ ನಗರವನ್ನು ಅಲಂಕರಿಸಲಾಗುತ್ತದೆ. ಇಲ್ಲಿನ ರಥೋತ್ಸವನ್ನು ಕಣ್ತುಂಬಿಸಬಹುದು.
ಅಹಮದಾಬಾದ್, ಗುಜರಾತ್: ಸಂಕ್ರಾಂತಿ ಹಬ್ಬದ ಸಮಯದಲ್ಲಿ ಎಲ್ಲಾ ಆಕಾರಗಳು, ಬಣ್ಣಗಳು ಮತ್ತು ಗಾತ್ರದ ಗಾಳಿಪಟಗಳನ್ನು ನೀವು ಗುಜರಾತ್ನ ಅಹಮದಾಬಾದ್ನಲ್ಲಿ ಕಾಣಬಹುದು. ಗುಜರಾತ್‌ನಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಎಂದು ಆಚರಿಸಲಾಗುತ್ತದೆ.
ಅಮೃತಸರ, ಪಂಜಾಬ್: ನೀವು ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹಾಡು , ನೃತ್ಯದೊಂದಿಗೆ ಸಂಭ್ರಮಿಸಲು ಬಯಸಿದರೆ ಪಂಜಾಬ್ನ ಅಮೃತಸರಕ್ಕೆ ಭೇಟಿ ನೀಡಿ. ಜೊತೆಗೆ ನೀವಿಲ್ಲಿ ಬೆಲ್ಲ, ಎಳ್ಳು ಮತ್ತು ಕಡಲೆಕಾಯಿಯಿಂದ ಮಾಡಿದ ಸಿಹಿತಿಂಡಿಗಳನ್ನು ಕೂಡ ಸವಿಯಬಹುದಾಗಿದೆ. ಜೊತೆಗೆ ಇಲ್ಲಿನ ಸಾಂಪ್ರದಾಯಿಕ ನೃತ್ಯ ಭಾಂಗ್ರಾ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ವಡೋದರಾ, ಗುಜರಾತ್: ಗುಜರಾತ್‌ನಲ್ಲಿ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಎಂದು ಆಚರಿಸಲಾಗುತ್ತದೆ. ವೈವಿಧ್ಯಮಯ ಗಾಳಿಪಟಗಳ ಹಾರಾಟ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜೊತೆಗೆ ಇಲ್ಲಿನ ಹಬ್ಬದ ಸಮಯದ ವಿಶೇಷ ಆಹಾರಗಳನ್ನು ಕೂಡ ಸವಿಯಿರಿ.
Published On - 2:32 pm, Thu, 12 January 23