
ಈ ಸೃಷ್ಟಿಯೇ ಅತ್ಯದ್ಭುತವಾದದ್ದು, ಪ್ರಕೃತಿಯ ನಡುವಿನಲ್ಲಿ ಹರಿಯುವ ನದಿಗಳು, ಕೆರೆ, ಹಳ್ಳ ಕೊಳ್ಳಗಳನ್ನು ಕಂಡಾಗ ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಎಷ್ಟೋ ನದಿ ತೀರಗಳು ನಾಗರಿಕತೆ ಹುಟ್ಟಿಗೆ ಕಾರಣವಾಗಿದೆ.

ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಗಂಗಾ, ಗೋದಾವರಿ, ನರ್ಮದಾ, ಸಿಂಧೂ, ತುಂಗಭದ್ರಾ ಪ್ರಸಿದ್ಧ ನದಿಗಳಿವೆ. ಸಾಮಾನ್ಯವಾಗಿ ಈ ಎಲ್ಲಾ ನದಿಗಳಿಗೂ ಮಹಿಳೆಯರ ಹೆಸರನ್ನೇ ಇಡಲಾಗಿದೆ. ಹೆಣ್ಣಿನ ಸ್ಥಾನ ನೀಡಲಾಗಿರುವ ಈ ನದಿಗಳನ್ನು ಬಹಳ ಪವಿತ್ರ ಎಂದು ಭಾವಿಸಲಾಗಿದೆ.

ಅದಲ್ಲದೇ ಈ ನದಿಗಳ ಇತಿಹಾಸವು ಬಹಳ ಪುರಾತನವಾದದ್ದು. ಇಷ್ಟೆಲ್ಲಾ ಇತಿಹಾಸಗಳನ್ನು ಹೊಂದಿರುವ ಭಾರತದ ಏಕೈಕ ನದಿಯೊಂದಿದ್ದು ಅದಕ್ಕೆ ಪುರುಷನ ಹೆಸರನ್ನು ಇಡಲಾಗಿದೆ. ಆದರೆ ಹೆಚ್ಚಿನ ಜನರಿಗೆ ಈ ಬಗ್ಗೆ ತಿಳಿದೇ ಇಲ್ಲ.

ಆ ನದಿಯೇ ಬ್ರಹ್ಮಪುತ್ರ ನದಿ, ಹೌದು, ಭಾರತದ ಅತ್ಯಂತ ಹಳೆಯ ನದಿಯಾಗಿರುವ ಈ ಪುರುಷ ನದಿಯನ್ನು ಬ್ರಹ್ಮನ ಪುತ್ರ, ಬ್ರಹ್ಮನ ಮಗು ಹೀಗೆ ನಾನಾ ಹೆಸರಿನಿಂದ ಕರೆಯಲಾಗುತ್ತದೆ.

ಬ್ರಹ್ಮಪುತ್ರ ನದಿಯೂ ಅಸ್ಸಾಂನಲ್ಲಿ ಹರಿಯುತ್ತದೆ ಸರಿಸುಮಾರು 2900 ಕಿಲೋಮೀಟರ್ ಉದ್ದವಿರುವ ಈ ನದಿಯ ಮೂಲ ಟಿಬೆಟ್‌ನಲ್ಲಿರುವ ಮಾನಸ ಸರೋವರ. ಈ ನದಿಯನ್ನು ಟಿಬೆಟ್‌ನಲ್ಲಿ ತ್ಸಾಂಗ್ಪೋ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

ಈ ನದಿಯೂ ಪುರಾಣದ ಕಥೆಯನ್ನು ಒಳಗೊಂಡಿದೆ. ಹೌದು, ಪುರಾಣದ ಹಿನ್ನಲೆ ಗಮನಿಸಿದಾಗ, ಈ ನದಿಯು ಬ್ರಹ್ಮ ದೇವರಿಗೆ ಸಂಬಂಧಿಸಿದೆ. ಬ್ರಹ್ಮದೇವರು ಈ ನದಿಗೆ ಜನ್ಮ ನೀಡಿದ್ದು, ಈ ಕಾರಣದಿಂದ ಈ ನದಿಗೆ ಬ್ರಹ್ಮಪುತ್ರ ಎನ್ನುವ ಹೆಸರು ಬಂದಿತಂತೆ. ಹೀಗಾಗಿ ಈ ನದಿಗೆ ಗಂಡಿನ ಸ್ಥಾನ ನೀಡಲಾಗಿದೆ.
Published On - 10:37 am, Thu, 8 May 25