- Kannada News Photo gallery Cricket photos IPL 2025: CSK Captain MS Dhoni breaks silence on IPL retirement
MS Dhoni: ಐಪಿಎಲ್ ಮಧ್ಯದಲ್ಲೇ ನಿವೃತ್ತಿ ಬಗ್ಗೆ ಮೌನ ಮುರಿದ ಧೋನಿ
IPL 2025 CSK vs KKR: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ನ 57ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್ಗಳಲ್ಲಿ 179 ರನ್ ಕಲೆಹಾಕಿದರೆ, ಈ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.4 ಓವರ್ಗಳಲ್ಲಿ ಚೇಸ್ ಮಾಡಿ 2 ವಿಕೆಟ್ಗಳ ಜಯ ಸಾಧಿಸಿದೆ.
Updated on:May 08, 2025 | 8:59 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 57ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಜಯ ಸಾಧಿಸಿದೆ. ಅದು ಕೂಡ ಸತತ 4 ಸೋಲುಗಳ ಬಳಿಕ ಎಂಬುದು ವಿಶೇಷ. ಅಂದರೆ ಈ ಬಾರಿಯ ಐಪಿಎಲ್ನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡುತ್ತಿರುವ ಸಿಎಸ್ಕೆ ತಂಡವು 12 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 3 ಮ್ಯಾಚ್ಗಳಲ್ಲಿ ಮಾತ್ರ.

ಈ ಗೆಲುವಿನ ಬಳಿಕ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ತಾನು ನಿವೃತ್ತಿ ಅಂಚಿನಲ್ಲಿರುವುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಅದು ಸದ್ಯಕ್ಕಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಿದ್ದಾರೆ. ಈಗ ನನಗೆ 43 ವರ್ಷ. ಇದನ್ನು ನೀವು ಮರೆಯಬೇಡಿ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಅಭಿಮಾನಿಗಳಿಂದ ನನಗೆ ಯಾವಾಗಲೂ ಪ್ರೀತಿ ಮತ್ತು ವಾತ್ಸಲ್ಯ ಸಿಕ್ಕಿದೆ. ಹೀಗಾಗಿ ನಾನು ಬಹಳ ಸಮಯದಿಂದ ಆಡುತ್ತಿದ್ದೇನೆ. ಇದಾಗ್ಯೂ ನನಗೆ 43 ವರ್ಷವಾಗಿದೆ ಎಂಬುದು ಅಭಿಮಾನಿಗಳಿಗೆ ಗೊತ್ತಿರಲಿ. ಅವರಲ್ಲಿ ಹಲವರಿಗೆ ನನ್ನ ಕೊನೆಯ ಪಂದ್ಯ ಯಾವಾಗ ಎಂದು ತಿಳಿದಿಲ್ಲ. ಹೀಗಾಗಿಯೇ ಅವರು ನನ್ನ ಆಟವನ್ನು ನೋಡಲು ಬಯಸುತ್ತಿದ್ದಾರೆ.

ನಾನು ನನ್ನ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದೇನೆ ಎಂಬ ಅಂಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಐಪಿಎಲ್ ಮುಗಿದ ನಂತರ, ನನ್ನ ದೇಹವು ಈ ಒತ್ತಡವನ್ನು ತಡೆದುಕೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ನಾನು ಇನ್ನೂ ಆರರಿಂದ ಎಂಟು ತಿಂಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಧೋನಿ ಹೇಳಿದ್ದಾರೆ.

ಅಲ್ಲದೆ ಸದ್ಯ ಯಾವುದೇ ನಿವೃತ್ತಿ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಈ ಬಾರಿಯ ಐಪಿಎಲ್ ಬಳಿಕ ಮುಂದಿನ ಸೀಸನ್ಗೆ ತನ್ನ ದೇಹ ಹೊಂದಿಕೊಳ್ಳುತ್ತದೆಯೇ ಎಂಬುದರ ಆಧಾರದ ಮೇಲೆ ನಿವೃತ್ತಿ ಬಗ್ಗೆ ಯೋಚಿಸುತ್ತೇನೆ. ಇದಕ್ಕಾಗಿ ಇನ್ನೂ 6 ರಿಂದ 8 ತಿಂಗಳುಗಳಿವೆ. ಹೀಗಾಗಿ ಸದ್ಯ ನಿವೃತ್ತಿ ಘೋಷಿಸುವ ಇರಾದೆಯಿಲ್ಲ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
Published On - 8:30 am, Thu, 8 May 25
