
ಬಾಲಿವುಡ್ ನಟಿ ಮೌನಿ ರಾಯ್ ಇತ್ತೀಚೆಗೆ ತಮ್ಮ ಗೆಳೆಯ ಸೂರಜ್ ನಂಬಿಯಾರ್ ಜತೆ ವಿವಾಹವಾಗಿದ್ದರು.
ಮೌನಿ ಅವರ ಗೆಳತಿ ಮಂದಿರಾ ಬೇಡಿ ಇದೀಗ ವಿವಾಹ ಸಂದರ್ಭದ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮೌನಿ ಹಾಗೂ ಮಂದಿರಾ ಆಪ್ತ ಗೆಳತಿಯರು. ಫೋಟೋ ಹಂಚಿಕೊಂಡು ಮಂದಿರಾ ಮೌನಿ ರಾಯ್ಗೆ ಶುಭ ಕೋರಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಂದಿರಾ ಹಂಚಿಕೊಂಡಿರುವ ಚಿತ್ರಗಳು ವೈರಲ್ ಆಗಿವೆ.
ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ಬೆಂಗಾಳಿ ಹಾಗೂ ಮಲಯಾಳಿ ಶೈಲಿಯಲ್ಲಿ ವಿವಾಹವಾಗಿದ್ದರು.
ಗೋವಾದಲ್ಲಿ ವಿವಾಹ ಸಮಾರಂಭ ನೆರವೇರಿತ್ತು.
ಮೌನಿ ರಾಯ್ ಕೆಜಿಎಫ್ 1 ಚಿತ್ರದ ಹಿಂದಿ ಅವತರಣಿಕೆಯ ‘ಗಲಿ ಗಲಿ’ ಹಾಡಿನಲ್ಲಿ ಹೆಜ್ಜೆ ಹಾಕಿ ಸಖತ್ ಸುದ್ದಿಯಾಗಿದ್ದವರು.