Success Story: ಈ ಪರಶುರಾಮ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ, ಹೇಗೆ? ನೀವೂ ನೋಡಿ
TV9 Web | Updated By: ಸಾಧು ಶ್ರೀನಾಥ್
Updated on:
Feb 18, 2023 | 11:51 AM
Mangalore Physically challenged boy: ಹುಟ್ಟಿದ ಒಂದು ವರ್ಷದವರೆಗೆ ಸರಿಯಾಗಿಯೇ ಇದ್ದ ಈ ಪರುಶುರಾಮನಿಗೆ ಜ್ವರಕ್ಕೆ ವೈದರೊಬ್ಬರು ನೀಡಿದ ಇಂಜೆಕ್ಷನ್ ನಿಂದ ಒಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು.
1 / 7
ಜೀವನದಲ್ಲಿ ಕಷ್ಟ ಯಾರಿಗಿಲ್ಲ ಹೇಳಿ? ಆನೆಗೆ ಆನೆಯ ಕಷ್ಟ, ಇರುವೆಗೆ ಇರುವೆಯ ಕಷ್ಟ! ಆದರೆ ಈ ಕಷ್ಟವನ್ನು ಎದುರಿಸಿ ನಿಲ್ಲುವವನೇ ನಿಜವಾದ ಸಾಧಕ. ಅಂತಹ ಛಲಗಾರ ಯುವಕನ ಸಾಧನೆಯ ಕಥೆ ಇಲ್ಲಿದೆ ನೋಡಿ.
2 / 7
ಬ್ಯಾಗ್ ಅನ್ನು ಹೆಗಲಿಗೇರಿಸಿಕೊಂಡು ತನ್ನ ಕೈಯ ಶಕ್ತಿಯಿಂದಲೇ ನಡೆಯುವ ಈ ಯುವಕನ ಹೆಸರು ಪರಶುರಾಮ. ಅಂದು ಪುರಾಣದ ಪರಶುರಾಮ ದಂಡ, ಕಮಂಡಲವನ್ನು ಬಿಟ್ಟು ಪರಶುವನ್ನು ಹಿಡಿದು ರಾಜ ಮಹಾರಾಜರ ರುಂಡ ಚೆಂಡಾಡಿದರೆ, ಇಂದು ಈ ಪರಶುರಾಮ ದೈಹಿಕ ನ್ಯೂನತೆಗೆ (Physically challenged) ಸಡ್ಡು ಹೊಡೆದು ಭಿಕ್ಷಾಟನೆ ಬಿಟ್ಟು ಫುಡ್ ಡೆಲಿವರಿ ಬಾಯ್ (delivery boy) ಆಗಿ ಜೀವನವನ್ನೇ ಗೆದ್ದಿದ್ದಾರೆ (success story).
3 / 7
ಮೂಲತಃ ಬಿಜಾಪುರದವರಾದ ಪರಶುರಾಮನ ಹೆತ್ತವರು ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿದ್ದಾರೆ (Mangalore). ಹುಟ್ಟಿದ ಒಂದು ವರ್ಷದವರೆಗೆ ಸರಿಯಾಗಿಯೇ ಇದ್ದ ಈ ಪರುಶುರಾಮನಿಗೆ ಜ್ವರಕ್ಕೆ ವೈದರೊಬ್ಬರು ನೀಡಿದ ಇಂಜೆಕ್ಷನ್ ನಿಂದ ಒಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಮತ್ತೊಂದು ಕಾಲು ಕೊಂಚ ಬಲವಿದ್ದರೂ, ಇವರು ಜೀವನಪರ್ಯಂತದ ಅಂಗವೈಕಲ್ಯಕ್ಕೆ ತುತ್ತಾದರು. (ವರದಿ: ಅಶೋಕ್, ಟಿವಿ 9, ಮಂಗಳೂರು)
4 / 7
9ನೇ ತರಗತಿಯವರೆಗೆ ಶಿಕ್ಷಣ ಪಡೆದ ಪರಶುರಾಮ ಆ ಬಳಿಕ ಮನೆಯಲ್ಲಿ ಬಡತನವಿದ್ದರಿಂದ ಭಿಕ್ಷಾಟನೆಗಿಳಿದರು. ಆದರೆ ಭಿಕ್ಷೆ ಬೇಡುವ ಕಾಯಕ ಇವರಿಗೆ ಹಿಂಸೆಯೆನಿಸಿ ಒಬ್ಬರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ದುಡಿಯಲಾರಂಭಿಸಿದರು. ಇದೀಗ ಸೆಕ್ಯುರಿಟಿ ಕಾಯಕದ ಜೊತೆ ಫುಡ್ ಡೆಲಿವರಿ ಕೆಲಸವನ್ನು ಮಾಡುತ್ತಿದ್ದಾರೆ.
5 / 7
ಪರಶುರಾಮ್ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸೆಕ್ಯುರಿಟಿ ಕೆಲಸ ಮಾಡಿದ್ರೆ ಆ ಬಳಿಕ ಫುಡ್ ಡೆಲಿವರಿ ಮಾಡ್ತಿದ್ದಾರೆ. ಇದಕ್ಕಾಗಿ ಸರಕಾರದ ಸ್ಕೀಮ್ ಒಂದರಲ್ಲಿ ದೊರೆತ ದ್ವಿಚಕ್ರ ವಾಹನದಿಂದ ಸ್ವಿಗ್ಗಿ ಸಂಸ್ಥೆಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಆರಂಭಿಸಿದ್ದಾರೆ.
6 / 7
ಈಗ ಅಂಗಾಂಗ ಸರಿ ಇದ್ದವರನ್ನೂ ಮೀರಿಸುವಂತೆ ದುಡಿದು ಸಾಧನೆ ಮಾಡುತ್ತಿದ್ದಾರೆ. ಇಂತಹ ಪರಶುರಾಮ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
7 / 7
ಪರಶುರಾಮ್‌ನ ಫುಡ್ ಡೆಲಿವರಿ ಕೆಲಸಕ್ಕೆ ಮಂಗಳೂರಿನ ಜನರು ಸಹ ಸಹಕಾರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಸರಿಯಿದ್ದು, ಏನನ್ನೂ ಸಾಧಿಸದಿದ್ದವರಿಗೆ ಪರಶುರಾಮ ಮಾದರಿಯಾಗಿದ್ದಾರೆ.