- Kannada News Photo gallery Maruti Suzuki Jimny 5 Door unveiled at Auto Expo 2023, Check variants, specs, features and images
Auto Expo 2023: ಮಹೀಂದ್ರಾ ಥಾರ್ ಪ್ರತಿಸ್ಪರ್ಧಿ ಮಾರುತಿ ಸುಜುಕಿ ಜಿಮ್ನಿ ಅನಾವರಣ!
ಮಾರುತಿ ಸುಜುಕಿ ಕಂಪನಿಯು ತನ್ನ ಬಹುನೀರಿಕ್ಷಿತ ಜಿಮ್ನಿ 5 ಡೋರ್ ಆಫ್ ರೋಡ್ ಎಸ್ ಯುವಿ ಮಾದರಿಯನ್ನ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಹೊಸ ಕಾರು ಈ ವರ್ಷದ ಮಧ್ಯಂತರದಲ್ಲಿ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಮುಂಬರುವ ಮೇ ಹೊತ್ತಿಗೆ ಹೊಸ ಕಾರಿನ ಬೆಲೆ ಘೋಷಣೆ ಮಾಡಲಿದೆ. ಹೊಸ ಕಾರು ಬಿಡುಗಡೆಗೂ ಮುನ್ನ ಆಟೋ ಎಕ್ಸ್ ಪೋದಲ್ಲಿ ಅನಾವರಣ ಮಾಡಲಾಗಿದ್ದು, ಇಂದಿನಿಂದಲೇ ಹೊಸ ಕಾರು ಖರೀದಿಗೆ ಬುಕಿಂಗ್ ಆರಂಭಿಸಲಾಗಿದೆ.
Updated on: Jan 12, 2023 | 1:42 PM

2023ರ ಆಟೋ ಎಕ್ಸ್ ಪೋದಲ್ಲಿ ಹೊಸ ಜಿಮ್ನಿ ಆಫ್ ಎಸ್ ಯುವಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದ ಮಾರುತಿ ಸುಜುಕಿ

2023ರ ಮೇ ನಲ್ಲಿ ಹೊಸ ಕಾರಿನ ಬೆಲೆ ಮಾಹಿತಿಯನ್ನು ಘೋಷಣೆ ಮಾಡಲಿರುವ ಮಾರುತಿ ಸುಜುಕಿಯು ಇಂದಿನಿಂದಲೇ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಆಫ್ ರೋಡ್ ಪ್ರಿಯರಿಗಾಗಿ ಹಲವಾರು ವಿಶೇಷತೆಗಳೊಂದಿಗೆ ಅಭಿವೃದ್ದಿಗೊಂಡಿದೆ ಹೊಸ ಜಿಮ್ನಿ ಕಾರು

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 3 ಡೋರ್ ವರ್ಷನ್ ಹೊಂದಿರುವ ಜಿಮ್ನಿ ಕಾರು ಭಾರತದಲ್ಲಿ 5 ಡೋರ್ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನಲ್ಲಿ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿರುವ ಮಾರುತಿ ಸುಜುಕಿ

ಹೊಸ ಕಾರು 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಮತ್ತು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯ

ಪೆಟ್ರೋಲ್ ಎಂಜಿನ್ ನಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡಲಾಗಿದ್ದು, ಇದು 105 ಹಾರ್ಸ್ ಪವರ್ ಮತ್ತು 134 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹೊಸ ಕಾರಿನ ಮ್ಯಾನುವಲ್ ಮಾದರಿಯಲ್ಲಿ ಮಾತ್ರ ಫೋರ್ ವ್ಹೀಲ್ ಡ್ರೈವ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಇದು 210 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಅತ್ಯುತ್ತಮ ಆಫ್ ರೋಡ್ ಕೌಶಲ್ಯ ಹೊಂದಿದೆ.

ಆಫ್ ಎಸ್ ಯುವಿ ವಿಭಾಗದಲ್ಲಿರುವ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ ಹೊಸ ಜಿಮ್ನಿ ಕಾರು Maruti Suzuki Jimny ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯ ನೀರಿಕ್ಷೆಯಿದೆ.

ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 12 ಲಕ್ಷದಿಂದ ರೂ. 16 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯ ನೀರಿಕ್ಷೆಯಿದೆ.




