
ಭಾರತದ ಅತ್ಯುತ್ತಮ ಬಾಕ್ಸರ್ ಹಾಗೂ 6 ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ ಅವರ ಈ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಡುವ ಕನಸು ಕೊನೆಗೊಂಡಿದೆ. ಅನುಭವಿ ಬಾಕ್ಸರ್ ಮೇರಿ ಕೋಮ್ ಅವರು CWG ಗಾಗಿ ಟ್ರಯಲ್ಸ್ ಪೂರ್ಣಗೊಳಿಸಲು ಸಾಧ್ಯವಾಗದೆ ಆಟದಿಂದ ಹೊರಬರಬೇಕಾಯಿತು. ಈ ಕಾರಣದಿಂದಾಗಿ ಬರ್ಮಿಂಗ್ಹ್ಯಾಮ್ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವರ ಕನಸು ಭಗ್ನಗೊಂಡಿತು.

ನವದೆಹಲಿಯಲ್ಲಿ ನಡೆಯುತ್ತಿರುವ ಟ್ರಯಲ್ಸ್‌ನಲ್ಲಿ, ಶುಕ್ರವಾರ, ಜೂನ್ 10 ರಂದು ಆಟದ ವೇಳೆ ಮೇರಿ ಕೋಮ್ ಕಾಲಿನ ಇಂಜುರಿಗೆ ತುತ್ತಾದರು. ಇದರಿಂದ ಅವರು 48 ಕೆಜಿ ಟ್ರಯಲ್ಸ್‌ನ ಮಧ್ಯದಲ್ಲಿ ಹಿಂತೆಗೆದುಕೊಳ್ಳಬೇಕಾಯಿತು.



Published On - 7:31 pm, Fri, 10 June 22