ಮೆಗಾಸ್ಟಾರ್ ಚಿರಂಜೀವಿಗೆ ಮತ್ತೊಂದು ಗರಿ, ಜೀವಮಾನ ಶ್ರೇಷ್ಠ ಗೌರವ ನೀಡಿದ ಐಫಾ

Updated on: Sep 28, 2024 | 3:59 PM

Megastar Chiranjeevi: ತೆಲುಗಿನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಅಬು ದಬಿಯಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್ಸ್​ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

1 / 7
ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕಳೆದ ಒಂದು ವರ್ಷದಿಂದ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳು, ಮಹತ್ತರ ಗೌರವಗಳು, ಪದವಿಗಳು ಪ್ರಾಪ್ತವಾಗುತ್ತಿವೆ.

ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕಳೆದ ಒಂದು ವರ್ಷದಿಂದ ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳು, ಮಹತ್ತರ ಗೌರವಗಳು, ಪದವಿಗಳು ಪ್ರಾಪ್ತವಾಗುತ್ತಿವೆ.

2 / 7

ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಮೆಗಾಸ್ಟಾರ್ ಚಿರಂಜೀವಿ ಅದಾದ ಬಳಿಕವೂ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡರು. ಇದೀಗ ಅಬುದಬಿಯಲ್ಲಿ ನಡೆಯುತ್ತಿರುವ ಐಫಾನಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

3 / 7

ಖ್ಯಾತ ಕವಿ ಜಾವೇದ್ ಅಖ್ತರ್, ನಟಿ ಶಬಾನಾ ಆಜ್ಮಿ ಅವರುಗಳು ಅದ್ಧೂರಿ ವೇದಿಕೆ ಮೇಲೆ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

4 / 7

ಚಿರಂಜೀವಿ ಜೊತೆಗೆ ಮಲಯಾಳಂ ನಟ ಜಯರಾಂ, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರುಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮ ಪಟ್ಟರು.

5 / 7

ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಚಿರು, ‘ಇದು ಅಭಿಮಾನಿಗಳು ಇಷ್ಟು ವರ್ಷ ನನ್ನ ಮೇಲೆ ತೋರಿಸಿರುವ ಪ್ರೀತಿ, ಗೌರವಕ್ಕೆ ಸಾಕ್ಷಿ’ ಎಂದರು.

6 / 7

ವಿಶೇಷವೆಂದರೆ ತೆಲುಗು ಚಿತ್ರರಂಗದ ತಾರೆಯರು, ಚಿರಂಜೀವಿಯ ಸಮಕಾಲೀನರಾದ ನಟರಾದ ಬಾಲಕೃಷ್ಣ ಹಾಗೂ ವೆಂಕಟೇಶ್ ಸಹ ವೇದಿಕೆ ಏರಿ ಚಿರಂಜೀವಿಯನ್ನು ಅಭಿನಂದಿಸಿದರು.

7 / 7

ಅಬು ದಬಿಯಲ್ಲಿ ಐಫಾ ಅವಾರ್ಡ್​ ಭಾರಿ ಅದ್ಧೂರಿಯಾಗಿ ನಡೆಯುತ್ತಿದೆ. ಚಿತ್ರರಂಗದ ಹಲವರಿಗೆ ಹಲವು ಕ್ಷೇತ್ರಗಳ ಪ್ರಶಸ್ತಿಗಳನ್ನು ನೀಡಲಾಗಿದೆ. ಮೆಗಾಸ್ಟಾರ್ ಚಿರಂಜೀವಿಗೆ ಜೀವಮಾನ ಸಾಧನೆ ಪ್ರಶಸ್ತಿ ದೊರೆತಿದೆ.

Published On - 3:51 pm, Sat, 28 September 24

Loading...
Unable to load recommendations.
Follow Us