ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಹೊಸ ಮನೆಗೆ ಕಾಲಿಟ್ಟಿದ್ದಾರೆ. ಗೃಹ ಪ್ರವೇಶದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಆದವರು ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ. ಕನ್ನಡ ಚಿತ್ರರಂಗದಲ್ಲಿ ಇಬ್ಬರೂ ಯಶಸ್ಸು ಕಂಡಿದ್ದಾರೆ. ಅನೇಕರಿಗೆ ಈ ದಂಪತಿ ಸ್ಫೂರ್ತಿ ಆಗಿದ್ದಾರೆ.
ಕೃಷ್ಣ ಮತ್ತು ಮಿಲನಾ ಜೋಡಿಯನ್ನು ಅಭಿಮಾನಿಗಳು ಕ್ರಿಸ್ಮಿ ಎಂದು ಕರೆಯುತ್ತಾರೆ. ಹೊಸ ಮನೆಗೆ ‘ಕ್ರಿಸ್ಮಿ ನೆಸ್ಟ್’ ಎಂದು ಹೆಸರು ಇಡಲಾಗಿದೆ. ಈ ಫೋಟೋಗಳು ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿವೆ.
ಚಿತ್ರರಂಗದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಹೊಸ ಮನೆಯ ಫೋಟೋ ಹಂಚಿಕೊಂಡಿರುವ ಈ ಜೋಡಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಸದ್ಯ ಈ ದಂಪತಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.
Published On - 7:56 am, Tue, 8 November 22