Kannada News Photo gallery Kannada Latest News| Minister BZ Zameer Ahmed Khan Visits Tumakuru Siddagangaa Mutt rbj
ಮಂತ್ರಿಯಾದಗೊಮ್ಮೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವ ಜಮೀರ್ ಅಹಮದ್, ಈ ಬಾರಿ ಶ್ರೀಗಳಿಗೆ ಮಹತ್ವದ ಭರವಸೆ ನೀಡಿದ ಸಚಿವ
ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಮತ್ತೊಮ್ಮೆ ಸಚಿವರಾಗಿದ್ದು, ಈ ಬಾರಿ ಅವರಿಗೆ ವಸತಿ ಖಾತೆ ನೀಡಲಾಗಿದೆ. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲೂ ಸಚಿವರಾಗಿದ್ದರು. ಬಳಿಕ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾದಲ್ಲೂ ಸಹ ಎರಡನೇ ಬಾರಿಗೆ ಸಚಿವರಾಗಿದ್ದರು. ಇದೀಗ ಮತ್ತೆ ಸಿದ್ದರಾಮಯ್ಯನವರ ಸರ್ಕಾರದಲ್ಲೂ ಸಚಿವರಾಗಿದ್ದಾರೆ. ಹೀಗಾಗಿ ಜಮೀರ್ ಅಹಮದ್ ಅವರು ದರ್ಗಾ ಹಾಗೂ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ವಿಶೇಷ ಏನೆಂದರೆ ಮಂತ್ರಿ ಸ್ಥಾನ ಸಿಕ್ಕಿದಾಗೊಮ್ಮೆ ಮಠಕ್ಕೆ ಭೇಟಿ ನೀಡುತ್ತಾ ಬಂದಿದ್ದಾರೆ.
ನೂತನ ಸಚಿವ ಜಮೀರ್ ಅಹಮದ್ ಖಾನ್ ಅವರು ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು,
1 / 8
ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
2 / 8
ಸಿದ್ಧಗಂಗಾ ಮಠಕ್ಕೆ ಜಮೀರ್ ಅಹಮದ್ ಖಾನ್ ಭೇಟಿ ಇದು ಮೊದಲಲ್ಲ. ಮಂತ್ರಿಸ್ಥಾನ ಒದಗಿ ಬಂದಾಗೊಮ್ಮೆ ಜಮೀರ್ ಅಹಮದ್ ಖಾನ್ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುತ್ತಾ ಬರುತ್ತಿರುವುದು ವಿಶೇಷ.
3 / 8
ಸಿದ್ದಗಂಗಾ ಮಠಕ್ಕೆ ನಾನು ಹೊಸದಾಗಿ ಬರುತ್ತಿಲ್ಲ. ನಾನು 2006 ರಲ್ಲಿ ಮಂತ್ರಿಯಾಗಿದ್ದೆ. ಅವಾಗ ಶಿವಕುಮಾರ ಸ್ವಾಮೀಜಿಗಳು ಇದ್ದರು. ಇಲ್ಲಿಗೆ ಬಂದು ಅಶಿರ್ವಾದ ಪಡೆದುಕೊಂಡು ಹೋಗಿದ್ದೆ. 2018 ರಲ್ಲೂ ಸಚಿವನಾಗೋಕೆ ದೇವರು ಅವಕಾಶ ಮಾಡಿಕೊಟ್ಟಿತ್ತು. ಅವಾಗಲು ಸ್ವಾಮೀಜಿಗಳ ಅಶಿರ್ವಾದ ಪಡೆದುಕೊಂಡು ಹೋಗಿದ್ದೆ. ಇವತ್ತು ಮಂತ್ರಿಯಾಗಿದಿನಿ, ಇವತ್ತು ಬಂದು ಸ್ವಾಮೀಜಿಗಳ ಅಶಿರ್ವಾದ ಪಡೆದುಕೊಂಡಿದ್ದೇನೆ ಎಂದರು.
4 / 8
ಇನ್ನು ಸಿದ್ದಗಂಗಾ ಮಠಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನ ಸರ್ಕಾರ ತಡೆಹಿಡಿದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ವಿಚಾರ ತಿಳಿಸುತ್ತೇನೆ. ಅನುದಾನ ತಡೆಹಿಡಿದ ಬಗ್ಗೆ ಸ್ವಾಮೀಜಿಗಳ ಬಳಿ ಚರ್ಚೆ ಮಾಡಿಲ್ಲ ಎಂದರು.
5 / 8
ನಾನು ಯಾವಾಗ ಯಾವಾಗ ಮಂತ್ರಿಯಾಗಿದ್ದೀನಿ ಅವಾಗ ಇಲ್ಲಿಗೆ ಬಂದು ಅಶಿರ್ವಾದ ಪಡೆದುಕೊಂಡಿದ್ದೇನೆ. ಸ್ವಾಮೀಜಿ ಬಳಿ ಇಲ್ಲಿನ ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನೆ. ಕಳೆದ ವರ್ಷ 10 ಸಾವಿರ ಮಕ್ಕಳು ಇದ್ರಂತೆ. ಈ ವರ್ಷ ಅಡ್ಮೀಶನ್ ಜಾಸ್ತಿ ಬರ್ತಿದೆಯಂತೆ. ಬರುವ ವರ್ಷ ಇಲ್ಲಿ ಹೆಚ್ಚಿನ ಕಟ್ಟಡ ಕಟ್ಟಿ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ಕೊಡಿ ಎಂದು ನಾನು ಕೂಡಾ ಅವರ ಬಳಿ ಮನವಿ ಮಾಡಿದ್ದೇನೆ. ಬರುವ ವರ್ಷ ಹೆಚ್ಚಿನ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
6 / 8
ಬಳಿಕ ಜಮೀರ್ ಅಹಮದ್ ಖಾನ್ ಅವರು ಸಿದ್ದಗಂಗಾ ಮಠದಿಂದ ನೇರವಾಗಿ ದಾಬಸ್ ಪೇಟೆಯಲ್ಲಿರುವ ದರ್ಗಾಕ್ಕೆ ಭೇಟಿ ನೀಡಿದರು
7 / 8
ಹಜರತ್ ಖಾದರ್ ದರ್ಗಾಗೆ ಚಾದರ್ ಸಮರ್ಪಿಸಿ ಪ್ರಾರ್ಥನೆ ಮಾಡಿದರು.