
ಚುನಾವಣೆ ಹೊಸ್ತಿಲಲ್ಲಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಎಲ್ಲಿಂದ ಮೇಲೆ ಭೇಟಿ ನೀಡುತ್ತಿದ್ದಾರೆ. ಇಂದು (ಜ. 19) ಯಾದಗಿರಿ ಜಿಲ್ಲೆಯ ಕೊಡೆಕಲ್ಗೆ ಆಗಮಿಸಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಗ್ರೀನ್-ಫೀಲ್ಡ್ ಹೆದ್ದಾರಿ ಕಾಮಗಾರಿಗೆ ಶಿಲಾನ್ಯಾಸ ಸೇರಿ ಒಟ್ಟು 10,863 ಕೋಟಿ ವೆಚ್ಚದ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಇನ್ನು ಇದೇ ವೇಳೆ ಪ್ರಧಾನಿ ಮೋದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು. ಸುರಪುರ ಶಾಸಕ ರಾಜೂಗೌಡ ಮೋದಿಗೆ ಕಾಮಧೇನು ಗಿಫ್ಟ್ ನೀಡಿದರು.

ಯಾದಗಿರಿ ಸಮಾವೇಶದಲ್ಲಿ ಮೋದಿ ಮೇನಿಯಾ ಕಂಡು ಬಂದದ್ದು ಹೀಗೆ

ಪ್ರಧಾನಿ ನರೇಂದ್ರ ಮೋದಿಯನ್ನು ನೋಡಲು ಸಮಾವೇಶಕ್ಕೆ ಕಿಕ್ಕಿರಿದು ಆಗಮಿಸಿದ ಯಾದಗಿರಿ ಜಿಲ್ಲೆಯ ಜನ.